ಲೋಕಾಪುರ: ಲೋಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಕಡೆ ಮರಳು ಅಕ್ರಮ ಗಣಿಗಾರಿಕೆಗಳ ಮೇಲೆ ಲೋಕಾಯುಕ್ತ ಪೊಲೀಸರು ಬುಧವಾರ ದಾಳಿ ಮಾಡಿ, ಅಪಾರ ಪ್ರಮಾಣದ ಮರಳು ವಶಪಡಿಸಿಕೊಂಡಿದ್ದಾರೆ.

ಜಂಬಗಿ ಕೆ.ಡಿ ಗ್ರಾಮದ ಘಟಪ್ರಭಾ ನದಿ ದಂಡೆಯ ತೀರದಲ್ಲಿ 168 ಟನ್ ಮರಳು ಅಂದಾಜು ₹1.20 ಲಕ್ಷ, ಮರಳು ತೆಗೆಯಲು ಬಳಸುತ್ತಿದ್ದ 1 ಹಿಟ್ಯಾಚಿ ಮತ್ತು ಎರಡು ಬೋಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮುಧೋಳ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಹನಮಂತ ಡೋಣಿ ದೂರು ದಾಖಲಿಸಿದ್ದಾರೆ.

ಚಿಕ್ಕೂರ ಗ್ರಾಮದ ಹತ್ತಿರದ ನದಿ ದಡದಲ್ಲಿ 173 ಟನ್ ಮರಳು, ₹1.30 ಲಕ್ಷ ಮೊತ್ತದ ಮರಳು, ಕಸಬಾಜಂಬಗಿ ಗ್ರಾಮದಲ್ಲಿ 168 ಟನ್ ಮರಳು, ₹1.26 ಲಕ್ಷ ಮರಳು ಮತ್ತು ಹಿಟ್ಯಾಚಿ ವಶಪಡಿಸಿಕೊಂಡಿದ್ದಾರೆ.

ರೂಗಿ ಗ್ರಾಮದಲ್ಲಿ 500 ಟನ್, ₹3.75 ಲಕ್ಷ ಮೊತ್ತದ ಮರಳನ್ನು ಈಗಾಗಲೇ ಸಾಗಾಣಿಕೆ ಮಾಡಿದ್ದು, 10 ಟನ್ ನಷ್ಟು ₹7,500 ಮರಳನ್ನು ಖೇಡ್ಡಾಕ್ಕೆ ಹಾಕಲಾಗಿದೆ. ಹಿಟ್ಯಾಚಿ ವಶಪಡಿಸಿಕೊಳ್ಳಲಾಗಿದೆ ಎಂದು ಬಾಗಲಕೋಟೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಶಿವಕುಮಾರ ಬೀದಿಭಾವಿ ದೂರು ದಾಖಲಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-19-1182863883

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.