ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಾಪುರ: 250 ಗ್ರಾಂ ಆಭರಣ ಕಳವು

Last Updated 25 ಮೇ 2021, 17:00 IST
ಅಕ್ಷರ ಗಾತ್ರ

ಲೋಕಾಪುರ: ಪಟ್ಟಣದ ಹೊರವಲಯದಲ್ಲಿರುವಶ್ರೀನಿವಾಸ ನಿಂಗನೂರ ಎಂಬುವರ ಮನೆಗೆ ಸೋಮವಾರ ರಾತ್ರಿ ನುಗ್ಗಿದ ಕಳ್ಳರು 250 ಗ್ರಾಂ ಚಿನ್ನಾಭರಣ, 1810 ಗ್ರಾಮ ತೂಕದ ಬೆಳ್ಳಿ ವಸ್ತುಗಳು ಹಾಗೂ ₹ 2.30 ಲಕ್ಷ ಕಳವು ಮಾಡಿದ್ದಾರೆ.

ಶ್ರೀನಿವಾಸ ನಿಂಗನೂರ ಅವರ ಮನೆಯ ಹತ್ತಿರ ಶೆಂಗಾ ಮಿಲ್‌ನ ಹತ್ತಿರ ಇದ್ದ ನುಚ್ಚನಕೆಯ ಸಹಾಯದಿಂದ ಮನೆಯ ಎರಡನೇ ಅಂತಸ್ತನ್ನು ಪ್ರವೇಶಿಸಿ, ಒಂದನೇ ಅಂತಸ್ತಿಗೆ ಬಂದು ಅಲ್ಲಿದ್ದ ಟ್ರೇಜರಿಯನ್ನು ತೆರೆದು ಅದರಲ್ಲಿದ್ದ ಹಣ ಆಭರಣ ದೋಚಿದ್ದಾರೆ.

ಶ್ರೀನಿವಾಸ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಘಟನಾ ಸ್ಧಳಕ್ಕೆ ಶ್ವಾನ ದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶಿಲಿಸಿದ್ದಾರೆ. ಸ್ಧಳಕ್ಕೆ ಡಿ.ಎಸ್ಪಿ ಪಾಂಡುರಗಯ್ಯ, ಸಿಪಿಐ ಎಚ್.ಆರ್.ಪಾಟೀಲ, ಪಿಎಸ್.ಐ ಶಿವಶಂಖರ ಮುಕರಿ ಬೇಟಿ ನೀಡಿದ್ದು, ಹೆಚ್ಚುವರಿ ಪಿಎಸ್ಐ ಆರ್.ವಿ.ಸಂಶಿ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT