ಲೋಕಾಪುರ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಾಲ್ಕು ಶುದ್ಧ ನೀರಿನ ಘಟಕಗಳು ಕೆಟ್ಟು ನಿಂತಿದ್ದು, ಇಲ್ಲಿನ ಜನರು ಶುದ್ಧ ನೀರಿಗಾಗಿ ಖಾಸಗಿ ಘಟಕಗಳ ಮೋರೆ ಹೋಗುವುದು ಅನಿವಾರ್ಯವಾಗಿದೆ.

ಲೋಕಾಪುರ ಪಟ್ಟಣ ಪಂಚಾಯಿತಿ ಯಾಗಿ ಮೂರು ವರ್ಷವಾದರೂ ಶುದ್ಧ ಕುಡಿಯುವ ನೀರು ಪೂರೈಸುವಲ್ಲಿ ತೊಂದರೆಪಡುತ್ತಿದೆ. ಅದಕ್ಕಿಂತಲೂ ಮೊದಲು ಗ್ರಾಮ ಪಂಚಾಯಿತಿಯಲ್ಲಿ ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಲಾಗಿತ್ತು. ಸಮರ್ಪಕ ನಿರ್ವಹಣೆ ಸಮಸ್ಯೆಯಿಂದ ಶುದ್ಧ ನೀರಿನ ಘಟಕಗಳು ಬಂದ್ ಆಗಿವೆ.

ಇಂತಹ ಬೇಸಿಗೆ ಸಮಯದಲ್ಲಿ ಜನರು ನೀರಿಗಾಗಿ ಪರದಾಡುವಂತಾಗಿದೆ. ಜನನಿಬಿಡ ಪ್ರದೇಶವಾದ ಬಸವೇಶ್ವರ ವೃತ್ತದಲ್ಲಿ ಮೊದಲು ಘಟಕ ಸ್ಧಾಪಿಸಲಾಗಿತ್ತು. ಅದು ಕೆಟ್ಟು ಮೂಲೆ ಗುಂಪಾಗಿದೆ. ಮುಧೋಳ ರಸ್ತೆಯ ಹೊಸಪ್ಲಾಟ್ ಹತ್ತಿರದ ಘಟಕ ಕಾರ್ಯಾರಂಭ ಮಾಡದೇ ಹಲವಾರು ವರ್ಷಗಳು ಗತಿಸಿವೆ. ಬಜಾರದಲ್ಲಿ ಮತ್ತು ಬಾಗಲಕೋಟೆ ರಸ್ತೆಯ ವೆಂಕಟಾಪುರ ಹತ್ತಿರದ ಘಟಕಗಳು ಇದ್ದು ಇಲ್ಲದಂತಾಗಿವೆ. ಕೆಟ್ಟು ನಿಂತಿರುವ ಘಟಕಗಳನ್ನು ದುರಸ್ತಿ ಮಾಡುವ ಗೋಜಿಗೆ ಅಧಿಕಾರಿಗಳು ಹೋಗುತ್ತಿಲ್ಲ. ಶುದ್ಧ ನೀರಿಗಾಗಿ ಜನರು ತೊಂದರೆ ಅನುಭವಿಸುವಂತಾಗಿದೆ.

ಬೇಸಿಗೆ ಸಂದರ್ಭವಾಗಿರುವುದರಿಂದ ಶುದ್ಧ ನೀರು ಸರಿಯಾಗಿ ಸಿಗದೇ ಜನರು ಪರದಾಡುವಂತಾಗಿದೆ. ₹ 5, ₹20 ಲೀಟರ್ ಶುದ್ಧ ನೀರು ಸಿಗುತ್ತದೆ. ಖಾಸಗಿ ಘಟಕಗಳಿಗೆ ಹೆಚ್ಚಿನ ದರ ನೀಡಬೇಕಾಗಿದೆ. ಹೀಗಾಗಿ ಖಾಸಗಿ ಘಟಕಗಳನ್ನು ಆಶ್ರಯಿಸುವ ಅನಿವಾರ್ಯತೆ ಬಂದೊದಗಿದೆ. ₹ 10ಕ್ಕೆ ₹ 20 ಲೀಟರ್ ನೀರನ್ನು ಮನೆಮನೆಗೆ ತಲುಪಿಸುವ ವ್ಯವಸ್ಧೆ ಮಾಡುತ್ತಿವೆ. ಆದರೇ ನೀರಿನ ಗುಣಮಟ್ಟದ ಬಗ್ಗೆ ಪರಿಕ್ಷಿಸುವವುದಾಗಲಿ ಯಾವುದೇ ಕ್ರಮ ಅಧಿಕಾರಿಗಳು ಅನುಸರಿಸದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಶುದ್ಧ ನೀರಿನ ಘಟಕಗಳ ದುರಸ್ತಿ ಮಾಡದಿರುವುದು ಅಧಿಕಾರಿಗಳ ಬೇಜವಾಬ್ದಾರಿ ತೊರಿಸುತ್ತದೆ. ಜನರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವಲ್ಲಿ ವಿಳಂಬ ಮಾಡಬಾರದು.
ವಿಜಯ್ ದೇಸಾಯಿ, ಪಟ್ಟಣದ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.