ಲೋಕಾಪುರ: ಮಳೆಗಾಗಿ ಗೊಂಬೆಗಳ ಮದುವೆ ಮಾಡಿ ಗ್ರಾಮಸ್ಧರು ಸಂಭ್ರಮಿಸಿದರು.

ಸಮೀಪದ ವರ್ಚಗಲ್ ಗ್ರಾಮದ ಜನರು ಮಾರುತೇಶ್ವರ ದೇವಸ್ಧಾನದಲ್ಲಿ ಶುಕ್ರವಾರ ಗಂಡು ಮತ್ತು ಹೆಣ್ಣು ಗೊಂಬೆಗಳನ್ನು ಮಣ್ಣಿನಲ್ಲಿ ಮಾಡಿ ಸಂಪ್ರದಾಯದ ಪ್ರಕಾರ ವರನ ಕಡೆ ಕೆಲವರು ವಧುವಿನ ಕಡೆ ಕೆಲವರು ಕೂಡಿಕೊಂಡು ಬೀಗರನ್ನು ಎದುರುಗೊಂಡರು. ನಂತರ ಸುರಗಿ ಸುತ್ತಿ ಆರತಿ ಬೆಳಗಿ, ಅರಿಸಿನ ಶಾಸ್ತ್ರ ಮಾಡಿದರು. ಅಕ್ಷತೆ ಹಾಕಿ ಸಂಭ್ರಮಿಸಿದರು.

ಮದುವೆ ಊಟ ಮಾಡಿ ಯುವಕರು, ಮಹಿಳೆಯರು ಸಂತೋಷಪಟ್ಟರು. ಮಳೆ ಚೆನ್ನಾಗಿ ಆಗಿ ರೈತರ ಬೆಳೆಗಳು ಸರಿಯಾಗಿ ಸಿಕ್ಕು ರೈತರು ಮತ್ತು ಜನರಲ್ಲಿ ಸುಖ, ಶಾಂತಿ ಲಭಿಸಲು ಗೊಂಬೆಗಳಿಗೆ ಮದುವೆ ಮಾಡಲಾಯಿತು ಎಂದು ಗ್ರಾಮದ ಹಿರಿಯ ಭಗವಂತಪ್ಪ ತುಳಸಿಗೇರಿ ಹೇಳಿದರು.

ಭಾರತಿ ಪಾಟೀಲ, ಚಂದವ್ವ ಚಿಕ್ಕೂರ, ಕಸ್ತೂರೆವ್ವ ಇಳಗೇರ, ರೇನವ್ವ ಕುಂಬಾರ, ಕಸ್ತೂರೆವ್ವ ಮುದ್ನೂರ ಈರಣ್ಣ ಬಲ್ಕಿ, ಬಸು ಹೊಸಳ್ಳಿ, ಶಿವಪ್ಪ ಯಾದವಾಡ, ಸಿದ್ದು ಹೊಸಮನಿ ಮಂಜುಳಾ ಬಲಕಿ, ಚಂದ್ರವ್ವ ಹುಸಳ್ಳಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-19-948481748

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.