ಮಹಾಲಿಂಗಪುರ: ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ನಡೆಯು ತ್ತಿರುವ ಅನಿರ್ದಿಷ್ಟ ಮುಷ್ಕರ 1500 ದಿನ ಪೂರೈಸಿದ ಹಿನ್ನೆಲೆಯಲ್ಲಿ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು.

ಮುಷ್ಕರ ನಿರತ ವೇದಿಕೆಯಿಂದ ಚನ್ನಮ್ಮ ವೃತ್ತಕ್ಕೆ ಆಗಮಿಸಿದ ಸಮಿತಿ ಸದಸ್ಯರು ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕು ಕೇಂದ್ರ ಆಗುವವರೆಗೂ ಹೋರಾಟ ನಿಲ್ಲದು ಎಂದು ಘೋಷಣೆ ಕೂಗಿದರು. ನಂತರ ತಹಶೀಲ್ದಾರ್ ಗಿರೀಶ ಸ್ವಾದಿ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಮಾತನಾಡಿ, ‘ತಾಲ್ಲೂಕು ಕೇಂದ್ರವಾಗಲು ಮಹಾಲಿಂಗಪುರ ಯೋಗ್ಯವಾಗಿದೆ ಎಂದು 16 ಗ್ರಾಮಗಳನ್ನು ಒಳಗೊಂಡ ನಕಾಶೆ ಹಾಗೂ ವರದಿಯನ್ನು ತಯಾರಿಸಿ ಕಂದಾಯ ಇಲಾಖೆಗೆ ಜಿಲ್ಲಾಧಿಕಾರಿಗಳು ಸಲ್ಲಿಸಿದ್ದಾರೆ.

ಕಂದಾಯ ಇಲಾಖೆಯಿಂದ ಸಚಿವ ಸಂಪುಟಕ್ಕೆ ವರದಿ ಹೋಗಿ ಅನುಮತಿ ಪಡೆದು ತಾಲ್ಲೂಕು ಘೋಷಣೆ ಕಾರ್ಯ ಬಾಕಿ ಇದೆ. ಹೀಗಾಗಿ, ಕೂಡಲೇ ತಾಲ್ಲೂಕು ಕೇಂದ್ರವನ್ನಾಗಿ ಮಹಾಲಿಂಗಪುರವನ್ನು ಘೋಷಿಸಬೇಕು’ ಎಂದು ಆಗ್ರಹಿಸಿದರು.

ಗಂಗಾಧರ ಮೇಟಿ, ಅರ್ಜುನ ಹಲಗಿಗೌಡರ ಮುಂತಾದವರು ಮಾತನಾಡಿದರು.

ನಿಂಗಪ್ಪ ಬಾಳಿಕಾಯಿ, ಪರಪ್ಪ ಬ್ಯಾಕೋಡ, ದುಂಡಪ್ಪ ಜಾಧವ, ಚನ್ನು ದೇಸಾಯಿ, ಹಣಮಂತ ಜಮಾದಾರ, ದುಂಡಪ್ಪ ಇಟ್ನಾಳ, ಸಿದ್ದು ಶಿರೋಳ, ರಫೀಕ ಮಾಲದಾರ, ಭೀಮಶಿ ಸಸಾಲಟ್ಟಿ, ಮಹಾಲಿಂಗಪ್ಪ ಅವರಾದಿ, ಕರೆಪ್ಪ ಮೇಟಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-19-2059445765

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.