ಮಹಾಲಿಂಗಪುರ: ಸಮೀಪದ ಢವಳೇಶ್ವರ ಗ್ರಾಮದ ಹೊರವಲಯದ ಆಶ್ರಯ ಬಡಾವಣೆಯಲ್ಲಿ ಅಂದಾಜು ₹ 50 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಪಶು ಚಿಕಿತ್ಸಾಲಯ ಕಟ್ಟಡ ಕಾಮಗಾರಿ ಕಳೆದ ನಾಲ್ಕು ತಿಂಗಳಿನಿಂದ ಸ್ಥಗಿತಗೊಂಡಿದೆ.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಆರ್ಐಡಿಎಫ್ ಯೋಜನೆಯಡಿ ಕಳೆದ ಮೇ ತಿಂಗಳಲ್ಲಿ ಕಾಮಗಾರಿ ಆರಂಭಗೊಂಡಿದೆ. ನ್ಯಾಷನಲ್ ಪ್ರಾಜೆಕ್ಟ್ ಕನ್ಸ್ಟ್ರಕ್ಷನ್ ಕಾರ್ಪೋರೇಷನ್ ಲಿಮಿಟೆಡ್ (ಎನ್ಪಿಸಿಸಿಎಲ್) ದವರು ಕಟ್ಟಡ ಕಾಮಗಾರಿ ಗುತ್ತಿಗೆ ಪಡೆದಿದ್ದಾರೆ. 2027ರ ಜೂನ್ ತಿಂಗಳಲ್ಲಿ ಗುತ್ತಿಗೆ ಅವಧಿ ಮುಗಿಯಲಿದೆ. ಆದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.

ಢವಳೇಶ್ವರ, ನಂದಗಾಂವ ಹಾಗೂ ಸಂಗಾನಟ್ಟಿ ಗ್ರಾಮಗಳ ವ್ಯಾಪ್ತಿ ಹೊಂದಿರುವ ಢವಳೇಶ್ವರ ಗ್ರಾಮದ ಪಶು ಚಿಕಿತ್ಸಾಲಯ 2015-16ನೇ ಸಾಲಿನಲ್ಲಿ ಮಂಜೂರಾತಿ ಆಗಿದ್ದರೂ ಆರಂಭವಾದ ನಂತರ ಇಲ್ಲಿಯವರೆಗೆ ಸ್ವಂತ ಕಟ್ಟಡವಿಲ್ಲದೆ ಗ್ರಾಮದ ಹೊರವಲಯದ ಆಶ್ರಯ ಮನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆಶ್ರಯ ಮನೆ ಮಾಲೀಕರು ತಮ್ಮ ಮನೆ ಬಿಟ್ಟುಕೊಡಬೇಕೆಂದು ಪಟ್ಟು ಹಿಡಿದ ಕಾರಣಕ್ಕೆ ಈಗ ಮೂರನೇ ಆಶ್ರಯ ಮನೆಯಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿದೆ. ಈ ಮನೆ ಕಟ್ಟಡವು ಮಳೆ ಬಂದರೆ ಸೋರುತ್ತದೆ. ಇಕ್ಕಟ್ಟಿನ ಜಾಗದಲ್ಲೇ ವೈದ್ಯಕೀಯ ಉಪಕರಣ, ಔಷಧ ದಾಸ್ತಾನು ಇರಿಸಿ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಈ ಪಶುಚಿಕಿತ್ಸಾಲಯ ವ್ಯಾಪ್ತಿಯಲ್ಲಿ ದನ, ಎಮ್ಮೆ, ಕುರಿ, ಆಡು, ಹಂದಿ ಸೇರಿದಂತೆ ಅಂದಾಜು 15 ಸಾವಿರದಷ್ಟು ಜಾನುವಾರುಗಳಿವೆ. ಇವುಗಳಿಗೆ ಸರಿಯಾಗಿ ಚಿಕಿತ್ಸೆ ಲಭಿಸಲು ಸೂಕ್ತ ಕಟ್ಟಡ ಅಗತ್ಯತೆ ಅರಿತು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ನೂತನ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಿ ಅನುದಾನ ಒದಗಿಸಿದೆ. ಆಶ್ರಯ ಬಡಾವಣೆಯಲ್ಲೇ ಪಶುಚಿಕಿತ್ಸಾಲಯಕ್ಕೆ ಢವಳೇಶ್ವರ ಗ್ರಾಮ ಪಂಚಾಯಿತಿಯಿಂದ 100X50 ಅಳತೆಯ ಖಾಲಿ ನಿವೇಶನ ಒದಗಿಸಲಾಗಿದ್ದು, ಇದೇ ನಿವೇಶನದಲ್ಲಿ ನೂತನ ಕಟ್ಟಡ ನಿರ್ಮಾಣವಾಗುತ್ತಿದೆ.

‘ಈಗಾಗಲೇ ಮುಗಿದಿರುವ ಕಾಮಗಾರಿಯು ಕಳಪೆಮಟ್ಟದ್ದಾಗಿದೆ. ಈ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಬಾಕಿ ಉಳಿದಿರುವ ಕಾಮಗಾರಿಯಾದರೂ ಗುಣಮಟ್ಟದ್ದಾಗಿರಲಿ. ಈ ಕುರಿತು ಗುತ್ತಿಗೆದಾರಿನಿಗೆ ಸೂಚನೆ ನೀಡಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕಾಮಗಾರಿ ಸ್ಥಗಿತಗೊಳಿಸಿರುವ ಕುರಿತು ಗುತ್ತಿಗೆ ಪಡೆದ ಸಂಸ್ಥೆಗೆ ಎಚ್ಚರಿಕೆ ನೀಡಿ ಶೀಘ್ರ ಕಾಮಗಾರಿ ಆರಂಭಿಸಲು ಸೂಚನೆ ನೀಡಲಾಗಿದೆ. ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.
ಶಿವಾನಂದ ಕರಡಿಗುಡ್ಡ, ಉಪನಿರ್ದೇಶಕ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಬಾಗಲಕೋಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.