ಮಹಾಲಿಂಗಪುರ: ಪಟ್ಟಣದ ಪುರಸಭೆಯ 2026-27ನೇ ಸಾಲಿಗೆ ₹6.61 ಲಕ್ಷ ಉಳಿತಾಯ ಬಜೆಟ್ ಅನ್ನು ಆಡಳಿತಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಗುರುವಾರ ಮಂಡಿಸಿದರು.

‘ಪಟ್ಟಣದ ಕುಡಿಯುವ ನೀರು ನೈರ್ಮಲೀಕರಣ, ಬೀದಿದೀಪಗಳ ವ್ಯವಸ್ಥೆ, ರಸ್ತೆ ಮತ್ತು ಚರಂಡಿ, ಉದ್ಯಾನಗಳ ಅಭಿವೃದ್ಧಿ, ಕೆರೆ ಅಭಿವೃದ್ಧಿ, 15 ಮತ್ತು 16ನೇ ಹಣಕಾಸಿನ/ಎಸ್ಎಫ್ಸಿ ಹಾಗೂ ಇತರೆ ಸರ್ಕಾರದ ಪುರಷ್ಕøತ ಯೋಜನೆಗಳ ಮುಂದುವರೆದ ಕಾಮಗಾರಿಗಳಿಗಾಗಿ ಅನುದಾನ ಕಾಯ್ದಿರಿಸಿದ್ದು, ಅದರಂತೆ ಎಸ್ಎಫ್ಸಿ ಹಾಗೂ ಪುರಸಭೆ ನಿಧಿಯಡಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಶೇ 24.10, ಶೇ 7.25, ಶೇ 5 ರಡಿ ಮೊತ್ತವನ್ನು ಕಾಯ್ದಿರಿಸಲಾಗಿದೆ’ ಎಂದು ತಿಳಿಸಿದರು.

‘2026-27ನೇ ಸಾಲಿಗೆ ತಯಾರಿಸಿದ ಬಜೆಟ್ನಲ್ಲಿ ₹31.13 ಕೋಟಿ ಆದಾಯ ಹಾಗೂ ₹31.06 ಕೋಟಿ ವೆಚ್ಚ ನಿರೀಕ್ಷೆ ಮಾಡಲಾಗಿದೆ. ಒಟ್ಟು ₹6.61 ಲಕ್ಷ ಉಳಿತಾಯ ನಿರೀಕ್ಷಿಸಲಾಗಿದೆ’ ಎಂದು ಹೇಳಿದರು.

ಮುಖ್ಯಾಧಿಕಾರಿ ಎನ್.ಎ.ಲಮಾಣಿ, ಕಚೇರಿ ವ್ಯವಸ್ಥಾಪಕ ಎಸ್.ಎನ್.ಪಾಟೀಲ, ಲೆಕ್ಕ ಸಹಾಯಕಿ ರಾಜೇಶ್ವರಿ ಸೋರಗಾಂವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.