ಮಹಾಲಿಂಗಪುರ: ಶ್ರೀಶೈಲಕ್ಕೆ ಪಾದಯಾತ್ರೆ ಮೂಲಕ ತೆರಳುವ ಭಕ್ತರಿಗೆ ಸಮೀಪದ ಚಿಮ್ಮಡ ಗ್ರಾಮದ ಭ್ರಮರಾಂಬಿಕಾ ಮಲ್ಲಿಕಾರ್ಜುನ ದಾಸೋಹ ಸಮಿತಿಯು ಗಡಿಭಾಗದಲ್ಲಿ ಐದು ದಿನಗಳವರೆಗೆ ಅನ್ನದಾಸೋಹ ಹಾಗೂ ವೈದ್ಯಕೀಯ ಸೇವೆ ನೀಡಲಿದೆ.

ಮಾರ್ಚ್ 5ರಿಂದ ಐದು ದಿನಗಳವರೆಗೆ ತುಂಗಭದ್ರಾ ನದಿತೀರದ ಕುಂಬಳೂರ (ಕರಿಹೊಳೆ) ಬೀರೇಶ್ವರ ದೇವಸ್ಥಾನದಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಪಾದಯಾತ್ರೆ ಮೂಲಕ ತೆರಳುವ ಯಾವುದೇ ಭಾಗದ ಭಕ್ತರಿಗೆ ಅನ್ನದಾಸೋಹ ಹಾಗೂ ವೈದ್ಯಕೀಯ ಸೇವೆ ಒದಗಲಿದೆ.

‘ಪ್ರಸಾದ ವ್ಯವಸ್ಥೆಗಾಗಿ ಅಕ್ಕಿ, ಪಾಯಸದ ಸಜ್ಜಕ, ರೊಟ್ಟಿ, ಅಂಬಲಿ, ಉಪ್ಪಿಟ್ಟು ರವೆ, ಬೆಲ್ಲ, ಸಕ್ಕರೆ, ಚಹಾಪುಡಿ ಸೇರಿದಂತೆ ಸಕಲ ಅಡುಗೆ ಸಾಮಗ್ರಿಗಳನ್ನು ಚಿಮ್ಮಡ ಗ್ರಾಮದ ಭಕ್ತರಿಂದ ದೇಣಿಗೆ ರೂಪದಲ್ಲಿ ಸಂಗ್ರಹಿಸಲಾಗಿದೆ. ಐದು ದಿನದ 24 ಗಂಟೆಯೂ ನಿರಂತರ ಪ್ರಸಾದ, ವೈದ್ಯಕೀಯ ಸೇವೆ ಪಾದಯಾತ್ರಿಗಳಿಗೆ ಲಭ್ಯವಾಗಲಿದೆ’ ಎಂದು ದಾಸೋಹ ಸಮಿತಿಯ ಮುಖಂಡರು ತಿಳಿಸಿದ್ದಾರೆ.

ಬುಧವಾರ ವಿರಕ್ತಮಠದ ಪ್ರಭು ಸ್ವಾಮೀಜಿ ವಿಶೇಷ ಪೂಜೆಯೊಂದಿಗೆ ಆಹಾರ ಪದಾರ್ಥ ತುಂಬಿದ ವಾಹನದ ಬೀಳ್ಕೊಡುವ ಕಾರ್ಯಕ್ರಮ ನಡೆಯಿತು. ಗ್ರಾಮದ ಚನ್ನಮ್ಮ ವೃತ್ತದಿಂದ ಬಸ್ ನಿಲ್ದಾಣದವರೆಗೆ ವಿವಿಧ ವಾದ್ಯ ವೃಂದಗಳೊಂದಿಗೆ ಮೆರವಣಿಗೆ ಮೂಲಕ ತೆರಳಲಾಯಿತು. ದಾರಿಯುದ್ದಕ್ಕೂ ಸಾರ್ವಜನಿಕರು ಪ್ರಸಾದ ವಾಹನಕ್ಕೆ ಪೂಜೆ ಸಲ್ಲಿಸಿ ಸಿಹಿ ಹಂಚಿದರು.
‘ಹೋಳಿ ಹುಣ್ಣಿಮೆ ರಾತ್ರಿ ಗ್ರಾಮದಿಂದ ಪ್ರತಿವರ್ಷ 350 ಕ್ಕೂ ಹೆಚ್ಚು ಜನ ಭಕ್ತರು ಪಾದಯಾತ್ರೆಯ ಮೂಲಕ ಶ್ರೀಶೈಲಕ್ಕೆ ತೆರಳುತ್ತಿದ್ದು, ಕರ್ನಾಟಕದ ಗಡಿಭಾಗದವರೆಗೆ ಹಲವಾರು ಜನ ಭಕ್ತರು ಪಾದಯಾತ್ರಿಗಳಿಗೆ ಅಲ್ಪೋಪಹಾರ, ಪ್ರಸಾದ ವ್ಯವಸ್ಥೆ ಕೈಗೊಂಡಿರುತ್ತಾರೆ. ಆದರೆ, ಆಂಧ್ರ ಭಾಗ ಪ್ರವೇಶದ ನಂತರ ಪಾದಯಾತ್ರಿಗಳಿಗೆ ಯಾವುದೇ ವ್ಯವಸ್ಥೆ ಇಲ್ಲ. ಇದನ್ನು ಅರಿತ ಗ್ರಾಮದ ಹಲವು ಭಕ್ತರು ಗಡಿಭಾಗದಲ್ಲಿಯೂ ಪಾದಯಾತ್ರಿಗಳಿಗೆ ಚಹಾ, ಪರಾಳ, ಅಲ್ಪೋಪಹಾರ, ಊಟದ ವ್ಯವಸ್ಥೆ ದೊರೆಯಬೇಕೆಂದು ತಾವೇ ಹತ್ತು ಜನರ ತಂಡ ಕಟ್ಟಿಕೊಂಡು ಈ ಸೇವೆಗೆ ಮುಂದಾಗಿದ್ದಾರೆ. ಈ ಸೇವೆ ಕಳೆದ 15 ವರ್ಷಗಳಿಂದ ನಡೆಯುತ್ತಿದೆ. ಭಕ್ತರ ದೇಣಿಗೆಯಿಂದ ಧಾನ್ಯ ಸಂಗ್ರಹಿಸುವುದಕ್ಕಾಗಿಯೇ ಗ್ರಾಮದಲ್ಲಿ ಸ್ವಂತ ಕಟ್ಟಡವನ್ನೇ ನಿರ್ಮಿಸಲಾಗಿದೆ’ ಎಂದು ಸಮಿತಿ ಮುಖಂಡರು ತಿಳಿಸಿದರು.

ಪುಂಡಲಿಕಪ್ಪಾ ಪೂಜಾರಿ, ರಾಮಣ್ಣ ಬಗನಾಳ, ಚಂದ್ರಕಾಂತ ಜಾಡಗೌಡ, ರಾಚಯ್ಯ ಮಠಪತಿ, ಪರಪ್ಪಾ ಪಾಲಭಾವಿ, ದುಂಡಪ್ಪ ಪಾಟೀಲ, ಈಶ್ವರ ಬಡಿಗೇರ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.