ಮಹೇಶ ಮನ್ನಯ್ಯನವರಮಠ

ಮಹಾಲಿಂಗಪುರ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಪ್ರಾಂಗಣದಲ್ಲಿ ಕೇರಳ ಮೂಲದ ಸಂಸ್ಥೆಯೊಂದು ಅರಿಸಿನ ಖರೀದಿ ಕೇಂದ್ರ ಆರಂಭಿಸಿದ್ದರಿಂದ ಸಮಿತಿ ಆರ್ಥಿಕ ಚೇತರಿಕೆ ಕಾಣುತ್ತಿದೆ.

ಬೆಲ್ಲದ ಮಾರುಕಟ್ಟೆ ಎಂದೇ ಪ್ರಸಿದ್ಧಿಯಾಗಿದ್ದ ಎಪಿಎಂಸಿಯು ಸಕ್ಕರೆ ಕಾರ್ಖಾನೆಗಳ ಸ್ಥಾಪನೆಯಿಂದಾಗಿ ವರ್ಷದಿಂದ ವರ್ಷಕ್ಕೆ ಬೆಲ್ಲದ ಉತ್ಪಾದನೆ ಕಡಿಮೆಯಾಗಿ ಬೆಲ್ಲದ ಆವಕ ಕುಂಠಿತಗೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ಇದರೊಂದಿಗೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ಮಾರುಕಟ್ಟೆ ಪ್ರಾಂಗಣದ ಹೊರಗೆ ಮುಕ್ತ ವಹಿವಾಟಿಗೆ ಅವಕಾಶ ಹಾಗೂ ₹ 100 ಕ್ಕೆ ₹ 1.50 ಇದ್ದ ಸೆಸ್ ಅನ್ನು 60 ಪೈಸೆಗೆ ಇಳಿಸುವ ಮೂಲಕ ಎಪಿಎಂಸಿ ಆದಾಯಕ್ಕೆ ಕೊಕ್ಕೆ ಬಿದ್ದಿತ್ತು.

ಬೆಲ್ಲದ ಆವಕ ಜತೆಗೆ ಮಾರುಕಟ್ಟೆ ಶುಲ್ಕದ ಆದಾಯ ಗಣನೀಯವಾಗಿ ಕಡಿಮೆಯಾಗಿದ್ದರಿಂದ ಮತ್ತೊಂದು ಪ್ರಮುಖ ಉತ್ಪನ್ನವಾದ ಅರಿಸಿನಕ್ಕೆ ಮಾರುಕಟ್ಟೆ ಆರಂಭಕ್ಕೆ ನೂತನ ಆಡಳಿತ ಮಂಡಳಿಯು ಮುಂದಾಗಿತ್ತು. ಆದರೆ, ಅರಿಸಿನ ಮಾರುಕಟ್ಟೆ ಒದಗಿಸಿದರೂ ಅಲ್ಪ ಪ್ರಮಾಣದಲ್ಲಿ ಖರೀದಿಸುವ ಖರೀದಿದಾರರಿಂದ ಉತ್ತಮ ದರ ದೊರೆಯದ ಹಿನ್ನೆಲೆ ರೈತರು ನೆರೆಯ ಮಹಾರಾಷ್ಟ್ರದ ಸಾಂಗ್ಲಿ ಮಾರುಕಟ್ಟೆಗೆ ಅರಿಸಿನ ಕಳುಹಿಸುತ್ತಿದ್ದರು.

ಕೆಲ ರೈತರು ಕೇರಳ ಮೂಲದ ಸಂಸ್ಥೆಗೆ ಬೆಳಗಾವಿ ಜಿಲ್ಲೆಯ ಘಟಪ್ರಭಾ ಗ್ರಾಮದ ಏಜೆಂಟರ ಮೂಲಕ ಅರಿಸಿನವನ್ನು ಮಾರಾಟ ಮಾಡುತ್ತಿರುವ ಸಂಗತಿ ಗಮನಕ್ಕೆ ಬಂದ ತಕ್ಷಣ ಆಡಳಿತ ಮಂಡಳಿಯು ಮಹಾಲಿಂಗಪುರ ಸಮಿತಿಯಲ್ಲಿ ವಹಿವಾಟು ನಡೆಸುವಂತೆ ಸಂಸ್ಥೆಗೆ ಕೋರಿತ್ತು. ಈಗಾಗಲೇ ಹಾವೇರಿ ಜಿಲ್ಲೆಯ ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕರಿಂದ ಪರವಾನಗಿ ಪಡೆದು ರಾಣೆಬೆನ್ನೂರು ಸಮಿತಿ ವ್ಯಾಪ್ತಿಯಲ್ಲಿ ವಹಿವಾಟು ನಡೆಸುತ್ತಿದ್ದು, ಇದೇ ಪರವಾನಗಿಯನ್ನು ಮಹಾಲಿಂಗಪುರ ಸಮಿತಿಯಲ್ಲಿ ಮ್ಯಾಪಿಂಗ್ ಮಾಡಿಕೊಂಡು ವಹಿವಾಟು ನಡೆಸಲು ಕೇರಳ ಮೂಲದ ಸಂಸ್ಥೆಗೆ ಮನವೊಲಿಸಿ ಸಮಿತಿ ಪ್ರಾಂಗಣದಲ್ಲಿ ಅರಿಸಿನ ಖರೀದಿ ಕೇಂದ್ರ ಆರಂಭಿಸಲು ಅನುಮತಿ ನೀಡಿದೆ.

ಪ್ರಾಂಗಣದಲ್ಲಿ ಐದು ವರ್ಷಗಳಿಂದ ಖಾಲಿ ಬಿದ್ದಿದ್ದ 1 ಸಾವಿರ ಎಂ.ಟಿ ಸಾಮರ್ಥ್ಯದ ಗೋದಾಮಿನಲ್ಲಿ ಕೇರಳ ಮೂಲದ ಸಂಸ್ಥೆ ಮಾ.2 ರಿಂದ ಅರಿಸಿನ ಖರೀದಿ ಕೇಂದ್ರ ಆರಂಭಿಸಿದೆ. ತಿಂಗಳಿಗೆ ₹ 83,234 (ಶೇ 18 ರಂತೆ ಜಿಎಸ್ಟಿ ಪ್ರತ್ಯೇಕ) 11 ತಿಂಗಳ ಅವಧಿಗೆ ಈ ಗೋದಾಮು ಪಡೆದಿದೆ.

ಎಪಿಎಂಸಿಯಲ್ಲಿ ದೊರೆತ ಮಾಹಿತಿ ಪ್ರಕಾರ ಕೇರಳ ಮೂಲದ ಸಂಸ್ಥೆಯು ಮಾ.2 ರಿಂದ ಮಾ.16 ರವರೆಗೆ 55 ರೈತರಿಂದ 4549.20 ಕ್ವಿಂಟಲ್ ಅರಿಸಿನ ಖರೀದಿಸಿದ್ದು, ರೈತರಿಗೆ ₹ 5,87,10,190 ಹಾಗೂ ಸೆಸ್ (ಶುಲ್ಕ) ರೂಪದಲ್ಲಿ ಎಪಿಎಂಸಿಗೆ ₹ 3,52,261 ಪಾವತಿ ಮಾಡಿದೆ. ಕ್ವಿಂಟಾಲ್ ಅರಿಸಿನಕ್ಕೆ ಕನಿಷ್ಠ ₹ 12 ಸಾವಿರದಿಂದ ಗರಿಷ್ಠ ₹ 13,056 ದರದಲ್ಲಿ ಸಂಸ್ಥೆ ಖರೀದಿ ಮಾಡಿದೆ.

ಕಳೆದ ಐದು ವರ್ಷಗಳಿಂದ ನಿಶ್ಚಿತ ಗುರಿ ಸಾಧಿಸದೆ ಮಾರುಕಟ್ಟೆ ನಿಭಾಯಿಸಲು ಹೊಯ್ದಾಡುತ್ತಿದ್ದ ಎಪಿಎಂಸಿ ಇದೀಗ ಆರ್ಥಿಕವಾಗಿ ಚೇತರಿಕೆ ಕಾಣುವಂತಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260322-19-941259341

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.