ಮಹಾಲಿಂಗಪುರ: ‘ಪಟ್ಟಣದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಶಾಶ್ವತ ಕುಡಿಯುವ ನೀರಿನ ಯೋಜನೆ ನಡೆಯುತ್ತಿದ್ದರೂ ಪೂರ್ಣಗೊಂಡಿಲ್ಲ. ಪೈಪ್ಲೈನ್ ಅಳವಡಿಸಲು ರಸ್ತೆಗಳನ್ನು ಅಗೆದು ಹಾಗೇ ಬಿಡಲಾಗಿದೆ. ಪೇವರ್ ಬ್ಲಾಕ್ ಅಳವಡಿಸಿಲ್ಲ, ನೀರು ಕೂಡ ಬರುತ್ತಿಲ್ಲ’ ಎಂದು ಜಾತ್ಯತೀತ ಜನತಾದಳದ ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ನಿಂಗಪ್ಪ ಬಾಳಿಕಾಯಿ ಆರೋಪಿಸಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರು ತಿಂಗಳ ಹಿಂದೆಯೇ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಆಗ ಗುತ್ತಿಗೆದಾರರು ಮಾರ್ಚ್ ಅಂತ್ಯದೊಳಗೆ ಪೇವರ್ ಬ್ಲಾಕ್ ಹಾಕುವುದು ಸೇರಿದಂತೆ ಎಲ್ಲಾ ಕೆಲಸ ಮುಗಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಯಾವುದೇ ಕೆಲಸ ಆಗಿಲ್ಲ. ಈ ಕಾಮಗಾರಿಯ ಟೆಂಡರ್ ಯಾರು ಪಡೆದಿದ್ದಾರೆ, ಯಾವ ಕಂಪನಿಗೆ ಸಿಕ್ಕಿದೆ, ಎಷ್ಟು ಮೊತ್ತಕ್ಕೆ ಮತ್ತು ಎಷ್ಟು ಅವಧಿಯೊಳಗೆ ಮುಗಿಸಬೇಕು ಎಂಬ ಯಾವುದೇ ಮಾಹಿತಿ ನೀಡುತ್ತಿಲ್ಲ’ ಎಂದು ದೂರಿದರು.

‘ಪಟ್ಟಣದ ಎಲ್ಲಾ ವಾರ್ಡ್ಗಳಲ್ಲೂ ನೀರಿನ ಸಮಸ್ಯೆ ತೀವ್ರವಾಗಿದೆ. ಅಧಿಕಾರಿಗಳು ಕೇವಲ ಕಚೇರಿಯಲ್ಲಿ ಕೂರದೆ, ಬೆಳಿಗ್ಗೆ ಒಂದೆರಡು ಗಂಟೆಗಳ ಕಾಲ ವಾರ್ಡ್ಗಳಿಗೆ ಭೇಟಿ ನೀಡಿ ಪರಿಶೀಲಿಸಿದರೆ ಸಮಸ್ಯೆಗಳ ನೈಜ ಚಿತ್ರಣ ಅವರಿಗೆ ಅರ್ಥವಾಗುತ್ತದೆ’ ಎಂದು ಸಲಹೆ ನೀಡಿದರು.

‘ರಸ್ತೆ ಮಧ್ಯದ ಡಿವೈಡರ್ನಲ್ಲಿ ಅಳವಡಿಸಲಾದ ಬೀದಿ ದೀಪಗಳಿಗೆ ಟ್ರ್ಯಾಕ್ಟರ್, ಟ್ರಕ್ಗಳು ಡಿಕ್ಕಿ ಹೊಡೆದಿದ್ದರಿಂದ ಮುರಿದು ಬಿದ್ದಿವೆ. ಇದರಿಂದ ಪಟ್ಟಣದ ಸೌಂದರ್ಯಕ್ಕೆ ಧಕ್ಕೆ ಬಂದಿದೆ. ಇಂತಹ ಅಪಘಾತಗಳು ನಡೆದಾಗ ಅವರ ಬಳಿ ದಂಡ ಅಥವಾ ಹಣ ವಸೂಲಿ ಮಾಡಬೇಕು. ಬೀದಿದೀಪಗಳನ್ನು ಶೀಘ್ರದಲ್ಲಿ ಅಳವಡಿಸಬೇಕು. ಅಂಗಡಿಕಾರರು ಫುಟ್ಪಾತ್ ಮೇಲೆಯೇ ಸಾಮಾನುಗಳನ್ನು ಇರಿಸುತ್ತಿದ್ದು, ಅದನ್ನು ತೆರವುಗೊಳಿಸಿ ಪಾದಚಾರಿಗಳಿಗೆ ಅನುಕೂಲ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ರಘು ಅಂಬಿ, ಮಹಾದೇವ ಕೋಳಿಗುಡ್ಡ, ಸುರೇಶ ಮಡಿವಾಳರ, ವೀರೇಶ ನ್ಯಾಮಗೌಡ, ಮಹಾಲಿಂಗ ಕಲ್ಯಾಣಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-19-1221592012

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.