ಮಹಾಲಿಂಗಪುರ: ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2025-26ನೇ ಸಾಲಿನಲ್ಲಿ ದಾಖಲಾದ ಎರಡು ಪ್ರತ್ಯೇಕ ಕಳವು ಪ್ರಕರಣಗಳನ್ನು ಭೇದಿಸಿರುವ ಪೊಲೀಸರು, ₹ 9.15 ಲಕ್ಷ ಮೌಲ್ಯದ 62 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಎಸ್ಪಿ ಸಿದ್ದಾರ್ಥ ಗೋಯಲ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಸಮೀರವಾಡಿಯ ಮಂಜುನಾಥ ಹಕ್ಕಲ ಅವರ ಮನೆಯಲ್ಲಿ 32 ಗ್ರಾಂ ತೂಕದ ಚಿನ್ನ ಹಾಗೂ ಶಿವಾಪುರದ ಮಂಜುಳಾ ಪಾಟೀಲ ಅವರ 30 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರ ಕಳವಾಗಿದ್ದವು. ಈ ಕುರಿತು ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು. ನುರಿತ ತನಿಖಾ ತಂಡ ರಚಿಸಿ ಇಬ್ಬರು ಕಳ್ಳರನ್ನು ಬಂಧಿಸಲಾಗಿದೆ’ ಎಂದರು.

‘ಆರೋಪಿಗಳಾಗ ಮಹಾರಾಷ್ಟ್ರದ ಸೊಲ್ಲಾಪುರದ ಗೋರಕನಾಥ ಜಾಧವ ಎಂಬಾತನನ್ನು ಬಂಧಿಸಿ, ಆತನಿಂದ 30 ಗ್ರಾಂ ಹಾಗೂ ಬೆಳಗಾವಿ ಜಿಲ್ಲೆ ಹಂದಿಗುಂದದ (ಪ್ರಸ್ತುತ ಸಮೀರವಾಡಿ ನಿವಾಸಿ) ಬಸವ್ವ ಭದ್ರಶೆಟ್ಟಿ ಎಂಬಾಕೆಯನ್ನು ಬಂಧಿಸಿ, ಅವರಿಂದ 32 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಪಿಎಸ್ಐ ಕಿರಣ ಸತ್ತಿಗೇರಿ, ಅಪರಾಧ ವಿಭಾಗದ ಪಿಎಸ್ಐ ಶಾಂತಾ ಹಳ್ಳಿ, ಸಿಬ್ಬಂದಿಗಳಾದ ವಿ.ಬಿ. ತೇಲಿ, ಬಿ.ಜಿ. ದೇಸಾಯಿ, ಎ.ಎಂ. ಜಮಖಂಡಿ, ಕೃಷ್ಣಾ ಲಮಾಣಿ ತನಿಖಾ ತಂಡದಲ್ಲಿದ್ದರು’ ಎಂದರು.

‘ಮಹಾಲಿಂಗಪುರ ಠಾಣೆ ವತಿಯಿಂದ ಸಿಇಐಆರ್ (ಕೇಂದ್ರೀಯ ಸಲಕರಣೆಗಳ ಗುರುತಿನ ನೋಂದಣಿ) ಪೋರ್ಟಲ್ ಮೂಲಕ 2026 ನೇ ಸಾಲಿನಲ್ಲಿ ಕಳೆದುಹೋದ ₹ 4.19 ಲಕ್ಷ ಮೌಲ್ಯದ 30 ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚಲಾಗಿದೆ. ಇವೆಲ್ಲ ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯಕ್ಷಮತೆ ಶ್ಲಾಘನೀಯವಾಗಿದೆ. ಅವರಿಗೆ ಸೂಕ್ತ ಬಹುಮಾನ ನೀಡಲಾಗುವುದು’ ಎಂದರು.

‘ಎರಡು ಕಳವು ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿನ 30 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ಹಾಗೂ ಮೊಬೈಲ್ ಫೋನ್ಗಳನ್ನು ವಾರಸುದಾರರಿಗೆ ಎಸ್ಪಿ ಹಸ್ತಾಂತರಿಸಿದರು. ‘ಮೊಬೈಲ್ ಫೋನ್ಗಳನ್ನು ಕಳೆದುಕೊಂಡಲ್ಲಿ ಕೂಡಲೇ ಸಿಇಐಆರ್ ಪೋರ್ಟಲ್ನಲ್ಲಿ ದೂರನ್ನು ದಾಖಲಿಸಬೇಕು. ಇದರಿಂದ ಕಳುವಾದ ಹಾಗೂ ಕಳೆದುಕೊಂಡ ಮೊಬೈಲ್ ಫೋನ್ಗಳು ಪತ್ತೆ ಆಗುವುದಲ್ಲದೆ, ಬೇರೆಯವರು ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಬಹುದು’ ಎಂದು ಎಸ್ಪಿ ತಿಳಿಸಿದರು.

ಡಿವೈಎಸ್ಪಿ ರೋಷನ್ ಜಮೀರ್, ಸಿಪಿಐ ಆರ್.ಆರ್.ಪಾಟೀಲ, ಪಿಎಸ್ಐಗಳಾದ ಕಿರಣ ಸತ್ತಿಗೇರಿ, ಶಾಂತಾ ಹಳ್ಳಿ, ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-19-1933318452

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.