ಮಹಾಲಿಂಗಪುರ: ಸಮೀಪದ ಕೆಸರಕೊಪ್ಪ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾ ಯಕ ಅವರ ಮೇಲೆ ಹಣ ದುರ್ಬಳಕೆ ಮಾಡಿರುವ ಆರೋಪದ ಹಿನ್ನೆಲೆ ನಡೆಸು ತ್ತಿದ್ದ ತನಿಖೆಯನ್ನು ಮಂಗಳವಾರ ಇವರಿಬ್ಬರ ಗೈರು ಹಾಜರಿಯಿಂದ ಮುಂದೂಡಲಾಯಿತು.

ಮುಧೋಳದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಂ.ಪಾಟೀಲ, ತಾಲ್ಲೂಕು ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿ ಗಂಗಪ್ಪ ಸವದಿ, ಮುಧೋಳ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯ ಅಧೀಕ್ಷಕ ಸಿದ್ದು ನ್ಯಾಮಗೌಡ, ಮುಧೋಳದ ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಮೇಲ್ವಿಚಾರಕ ಬಿ.ವೈ.ಜಾನೋಜಿ ಅವರನ್ನೊಳಗೊಂಡ ತಂಡ ತನಿಖೆ ಕೈಗೊಂಡಿತು.

ಕೆಸರಕೊಪ್ಪ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ಅರ್ಜಿದಾರ ಮಹೇಶ ದೊಡಮನಿ ಅವರ ವಿಚಾ ರಣೆ ನಡೆಸಿದ ತನಿಖಾ ತಂಡ, ಆರೋಪಕ್ಕೆ ಸಂಬಂಧಿಸಿದಂತೆ ಪೂರಕ ದಾಖಲೆಗಳನ್ನು ಪರಿಶೀಲಿಸಿತು.

ಆದರೆ, ಆರೋಪ ಎದುರಿಸುತ್ತಿರುವ ಅಭಿವೃದ್ಧಿ ಅಧಿಕಾರಿ ಹೇಮಾ ದೇಸಾಯಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಈಶ್ವರ ಗಾಣಿಗೇರ ಗೈರು ಹಾಜರು ಇದ್ದಿದ್ದರಿಂದ ತನಿಖಾಧಿಕಾರಿಗಳು ತನಿಖೆಯನ್ನು ಮುಂದೂಡಿದರು.

ಏನಿದು ಆರೋಪ?: 2025ರ ಡಿಸೆಂಬರ್ 22 ರಿಂದ 2026ರ ಜನವರಿ 27ರವರೆಗೆ ನೀರಿನ ಸರಬರಾಜು ಹಾಗೂ ವಿದ್ಯುತ್ ಸಂಬಂಧಿಸಿದಂತೆ ₹ 34.34 ಲಕ್ಷಗಳಲ್ಲಿ ₹ 15.41 ಲಕ್ಷ ಮಾತ್ರ ಕೆಲಸ ಮಾಡಿದ್ದು, ಅಭಿವೃದ್ಧಿ ಅಧಿಕಾರಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ನಕಲಿ ಬಿಲ್ಲು ಸೃಷ್ಟಿಸಿ ₹ 18.93 ಲಕ್ಷ ಹಣವನ್ನು ಲೂಟಿ ಮಾಡಿದ್ದಾರೆ. ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಮಹೇಶ ದೊಡಮನಿ ಅವರು ತಾಲ್ಲೂಕು ಪಂಚಾಯಿತಿ ಇಒಗೆ ದೂರು ನೀಡಿದ್ದರು.

‘ತನಿಖೆಯನ್ನು ನಿಗದಿಪಡಿಸಿದ ದಿನವೇ ಉದ್ದೇಶಪೂರ್ವಕವಾಗಿ ಪಿಡಿಒ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಗೈರು ಹಾಜರಿಯಾಗಿದ್ದಾರೆ. ಈ ಕುರಿತು ತನಿಖಾಧಿಕಾರಿಗಳು ಪರಿಶೀಲಿಸಬೇಕು. ತನಿಖೆಯ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಕೂಡಲೇ ಮುಂದೂಡಿದ ತನಿಖಾ ದಿನವನ್ನು ನಿಗದಿಪಡಿಸಿ ಕಡ್ಡಾಯವಾಗಿ ಇವರಿಬ್ಬರು ಹಾಜರಿರಲು ಸೂಚಿಸಬೇಕು’ ಎಂದು ದೂರುದಾರ ಮಹೇಶ ದೊಡಮನಿ ಆಗ್ರಹಿಸಿದರು.

‘ಸಮಂಜಸವಾದ ಕಾರಣ ನೀಡಿ ಪಿಡಿಒ ರಜೆ ಪಡೆದಿದ್ದಾರೆ. ಅನಾರೋಗ್ಯ ಕಾರಣ ನೀಡಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಮುಂಚಿತವಾಗಿ ರಜೆ ಪಡೆದಿದ್ದು, ವೈದ್ಯಕೀಯ ವರದಿ ನೀಡಲು ಸೂಚಿಸಿದ್ದೇನೆ. ಈ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇವರಿಬ್ಬರು ಗೈರು ಹಾಜರು ಇರುವುದರಿಂದ ತನಿಖೆಯನ್ನು ಮುಂದೂಡಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪ್ಪ ಪಟ್ಟಿಹಾಳ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-19-2130048393

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.