ಮಹಾಲಿಂಗಪುರ: ಸಮೀಪದ ರನ್ನಬೆಳಗಲಿ ಪಟ್ಟಣದಲ್ಲಿ ಬಂದಲಕ್ಷ್ಮಿದೇವಿ ಜಾತ್ರೆ ಹಾಗೂ ಮಾರುತೇಶ್ವರ ಕಾರ್ತಿಕೋತ್ಸವ ಅಂಗವಾಗಿ ಭಾನುವಾರ ಅಹೋರಾತ್ರಿ ಬಂದಲಕ್ಷ್ಮೀದೇವಿ ರಥೋತ್ಸವ ನಡೆಯಿತು.

ಹನುಮಂತ ದೇವಸ್ಥಾನದ ಬಳಿಯ ಪಾದಗಟ್ಟೆಯಿಂದ ರಥೋತ್ಸವ ಆರಂಭಗೊಂಡಿತು. 10ಕ್ಕೂ ಹೆಚ್ಚು ಪಲ್ಲಕ್ಕಿಗಳು ರಥದ ಮುಂದೆ ಸಾಗಿದವು. ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರು ಪಾಲ್ಗೊಂಡು ರಥಕ್ಕೆ ಬೆಂಡು, ಬೆತ್ತಾಸು ತೂರಿ ಭಕ್ತಿ ಪರಾಕಾಷ್ಠೆ ಮೆರೆದರು.

ಬೆಳಿಗ್ಗೆ ಹಿರೇಹೊಳಿಯಿಂದ ಮೆರವಣಿಗೆ ಮೂಲಕ ಎತ್ತಿನ ಗಾಡಿಗಳಲ್ಲಿ ನೀರನ್ನು ತಂದು ಬಂದಲಕ್ಷ್ಮೀದೇವಿಗೆ ಅಭಿಷೇಕ ಹಾಗೂ ಮಹಾಪೂಜೆ ನೆರವೇರಿಸಲಾಯಿತು. ನಂತರ ಪಟ್ಟಣದ ಎಲ್ಲ ದೇವರುಗಳಿಗೂ ಅಭಿಷೇಕ ಮಾಡಲಾಯಿತು. ಮುಗಳಖೋಡದ ಪರಮಾನಂದ ದೇವರು, ಹಿಡಕಲ್ಲದ ಲಕ್ಕಮ್ಮದೇವಿ ಪಲ್ಲಕ್ಕಿಗಳು ಆಗಮಿಸಿದವು. ಮಧ್ಯಾಹ್ನ ಕರಿ ಕಟ್ಟಲಾಯಿತು. ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಂಜೆ ಕಡೆ ಒಕುಳಿ ನೆರವೇರಿತು. ರಾತ್ರಿ ಮನರಂಜನಾ ಕಾರ್ಯಕ್ರಮ ನೆರವೇರಿದವು.

ಬಲಭೀಮರ ಶಕ್ತಿ ಪ್ರದರ್ಶನ: ಜಾತ್ರೆ ಹಾಗೂ ಕಾರ್ತಿಕೋತ್ಸವ ಅಂಗವಾಗಿ ಭಾನುವಾರ ನಡೆದ ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ಮೈನವಿರೇಳಿಸಿತು. ತುರಕ-ಆಸಂಗಿಯ ಅಬ್ದುಲ್ಖಾನ್ ಮುಜಾವರ 98 ಕೆ.ಜಿ. ಸಂಗ್ರಾಮ ಕಲ್ಲು ಎತ್ತಿ ಪ್ರಥಮ ಸ್ಥಾನ ಪಡೆದರು. ಬಿಸನಾಳದ ಕಿರಣ ಅರಕೇರಿ (96 ಕೆ.ಜಿ.) ದ್ವಿತೀಯ, ಮುನ್ನೊಳ್ಳಿಯ ಶಬ್ಬೀರ ತೊರಗಲ್ಲ (94 ಕೆ.ಜಿ.) ತೃತೀಯ, ಬಿಸನಾಳದ ರಿಯಾಜ್ ಜಮಾದಾರ (92 ಕೆ.ಜಿ.) ಚತುರ್ಥ ಹಾಗೂ ಬಿಸನಾಳದ ಸಂತೋಷ ಬಿರಾದಾರ (88 ಕೆ.ಜಿ) ಐದನೇ ಸ್ಥಾನ ಪಡೆದರು.

ವಿಜೇತರಿಗೆ ಕ್ರಮವಾಗಿ ಪ್ರಥಮ ₹10 ಸಾವಿರ, ದ್ವಿತೀಯ ₹ 7 ಸಾವಿರ, ತೃತೀಯ ₹ 5 ಸಾವಿರ , ಚತುರ್ಥ ₹ 3 ಸಾವಿರ ಹಾಗೂ ಐದನೇ ಸ್ಥಾನ ₹ 2 ಸಾವಿರ ನಗದು ಬಹುಮಾನ ವಿತರಿಸಲಾಯಿತು.

ವಿವಿಧ ಭಾಗಗಳ ಬಲಭೀಮರು ಶಕ್ತಿ ಪ್ರದರ್ಶನ ನೀಡಿ ಶಹಬ್ಬಾಸ್ ಎನಿಸಿಕೊಂಡರು. ಕೈಯಿಂದ ತಲೆ ಮೇಲಕ್ಕೆ ಎತ್ತಿ ಶಕ್ತಿ ಪ್ರದರ್ಶನ ಮಾಡುವ ಮೂಲಕ ಸ್ಪರ್ಧಾಳುಗಳು ಸ್ಪರ್ಧೆ ನಡೆಸಿದರು.

ಅಂಕಣಕ್ಕೆ ಇಳಿಯುತ್ತಿದ್ದಂತೆ ಕ್ರೀಡಾಭಿಮಾನಿಗಳು ಕೇಕೆ ಹಾಕಿ ಬೆಂಬಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-19-630209198

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.