ಮಹಾಲಿಂಗಪುರ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ರೈತರಿಗೆ ಅನುಕೂಲವಾಗಲು ಉದ್ದೇಶಿಸಿದ್ದ ತೂಕ ಮಾಪನಾ ಯಂತ್ರ(ವೇಬ್ರಿಡ್ಜ್) ನಿರ್ಮಾಣಕ್ಕೆ ಸ್ಥಳ ಗುರುತಿಸುವುದನ್ನು ಸಮಿತಿ ಸಭಾಭವನದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮುಂದೂಡಲಾಯಿತು.

80 ಎಂಟಿ ಸಾಮರ್ಥ್ಯದ ವಿದ್ಯುನ್ಮಾನ ತೂಕದ ಯಂತ್ರ ನಿರ್ಮಿಸುವುದಕ್ಕೆ ಲೀಸ್ ಮೇಲೆ 15 ಗುಂಟೆ ಜಮೀನಿಗೆ ಮಾಸಿಕ ದರ ನಿಗದಿಪಡಿಸುವ ಕುರಿತು ನಡೆದ ಚರ್ಚೆಯಲ್ಲಿ ಸಾಧಕ ಬಾಧಕ ಕುರಿತು ಎಪಿಎಂಸಿ ಆಡಳಿತ ಮಂಡಳಿ ಅವಲೋಕಿಸಿತು.

ಎಪಿಎಂಸಿ ಕಾರ್ಯದರ್ಶಿ ಧನರಾಜ ಪಟ್ಟಣಶೆಟ್ಟಿ ಮಾತನಾಡಿ, ‘ಸಮಿತಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ತೂಕದ ಯಂತ್ರ ನಿರ್ಮಾಣ ಕಾಮಗಾರಿ ಟೆಂಡರ್ ಮಂಜೂರಾತಿ ಆಗಿದ್ದು, ಸಂಬಂಧಿಸಿದ ಗುತ್ತಿಗೆದಾರರಿಗೆ ಈಗಾಗಲೇ ಕಾರ್ಯಾದೇಶ ನೀಡಲಾಗಿದೆ. ಶಾಸಕ ಸಿದ್ದು ಸವದಿ ಸ್ಥಳ ಬದಲಾವಣೆಗೆ ಸೂಚಿಸಿ ಅವರು ಗುರುತಿಸಿದ ಬೇರೊಂದು ಸ್ಥಳದ ಪರಿಶೀಲನೆಯನ್ನು ವಿಜಯಪುರ ಮಾರುಕಟ್ಟೆ ಅಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ಎಂಜಿನಿಯರ್ ನಡೆಸಿದ್ದಾರೆ. ಆ ಸ್ಥಳದ ಮಾಲೀಕರು 10 ವರ್ಷಗಳ ಅವಧಿಗೆ ಇಲಾಖೆ ನಿಗದಿಪಡಿಸಿದ ದರಕ್ಕೆ ಲೀಸ್ ಮೇಲೆ ನೀಡಲು ಒಪ್ಪಿಗೆ ನೀಡಿದ್ದಾರೆ’ ಎಂದು ಸಭೆ ಗಮನಕ್ಕೆ ತಂದರು.

ಕೇವಲ 10 ವರ್ಷದ ಅವಧಿಗೆ ಲೀಸ್ ಆಧಾರದ ಮೇಲೆ ಸ್ಥಳ ನೀಡುತ್ತಿದ್ದು, 10 ವರ್ಷಗಳ ನಂತರ ಮತ್ತೆ ಸ್ಥಳ ಬದಲಾವಣೆ ಮಾಡಬೇಕಾಗುತ್ತದೆ. ಈ ಮೊದಲು ನಿರ್ಮಿಸಲು ಉದ್ದೇಶಿಸಿರುವ ಸ್ಥಳದಲ್ಲಿ ತೂಕದ ಯಂತ್ರ ನಿರ್ಮಿಸಿದ್ದಲ್ಲಿ ನಂದಗಾಂವ, ಅಕ್ಕಿಮರಡಿ, ಅವರಾದಿ, ಢವಳೇಶ್ವರ, ಮಿರ್ಜಿ ಸೇರಿದಂತೆ ಹತ್ತಾರು ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ. ಹೀಗಾಗಿ, ಸ್ಥಳ ಗುರುತಿಸುವುದನ್ನು ಸಮಿತಿ ಮುಂದೂಡಿತು.

2026-27ನೇ ಸಾಲಿಗೆ ಹಮಾಲಿ ಲೈಸನ್ಸ್ ನವೀಕರಣಕ್ಕಾಗಿ ಬಂದ ಅರ್ಜಿಗಳ ಕುರಿತು ಚರ್ಚೆ ನಡೆಸಿ, ನವೀಕರಣಕ್ಕೆ ಅನುಮೋದನೆ ನೀಡಿತು. 2025-26ನೇ ಸಾಲಿನ ಭದ್ರತಾ ಸೇವೆ ಪಡೆಯುವ ಟೆಂಡರ್ಗೆ ಕೇಂದ್ರ ಕಚೇರಿಯಿಂದ ಮಂಜೂರಾತಿ ದೊರಕದೆ ಇರುವುದರಿಂದ ಮಂಜೂರಾತಿ ನಿರೀಕ್ಷೆ ಮೇರೆಗೆ 2026-27ನೇ ಸಾಲಿನ ಹೊಸ ದರಗಳಂತೆ ಭದ್ರತಾ ಸಿಬ್ಬಂದಿಗೆ ವೇತನ ಪಾವತಿಸಲು ಸಭೆ ಅನುಮೋದನೆ ನೀಡಿತು.

2024-25ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯಡಿ ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿ ಕೊಳವೆ ಬಾವಿ ಕೊರೆದು ಮೋಟಾರ್ ಹಾಗೂ ಪಂಪ್, ಪೈಪ್ಲೈನ್ ಅಳವಡಿಸುವ ಕಾಮಗಾರಿಗೆ ಸಭೆ ಅನುಮೋದನೆ ನೀಡಲಿಲ್ಲ.

ನಬಾರ್ಡ್ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಮಿತಿಗೆ ₹5 ಕೋಟಿ ಅನುದಾನ ಬಿಡುಗಡೆ ಮಾಡಲು ಇಲಾಖೆ ಸಚಿವ ಶಿವಾನಂದ ಪಾಟೀಲ ಶಿಫಾರಸು ಮಾಡಿರುವ ಕುರಿತು ಸಭೆ ಗಮನಕ್ಕೆ ತರಲಾಯಿತು.

ಬಸವೇಶ್ವರ ಎಪಿಎಂಸಿ ಮಾರ್ಕೆಟ್ ಯಾರ್ಡ್ನ ದಲಾಲ ವರ್ತಕರ ಸಂಘದ ಅಧ್ಯಕ್ಷ ನಿಜಗುಣೆಪ್ಪ ಷಣ್ಮುಖ, ಉಪಾಧ್ಯಕ್ಷ ಶಿವಾನಂದ ಹುಬ್ಬಳ್ಳಿ ನೇತೃತ್ವದಲ್ಲಿ ಸಂಘದ ಸದಸ್ಯರು ಮಾರ್ಕೆಟ್ ಯಾರ್ಡ್ಗೆ ವಿವಿಧ ಮೂಲಸೌಲಭ್ಯ ಒದಗಿಸುವಂತೆ ಮನವಿ ಮಾಡಿದರು.

ಸಮಿತಿ ಅಧ್ಯಕ್ಷ ದೇವಲ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ, ಬಿ.ಎಸ್.ಬಾವಿಹಾಳ, ಎಇಇ ಎಲ್.ಬಿ.ಲಮಾಣಿ, ಆಡಳಿತ ಮಂಡಳಿ ಸದಸ್ಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-19-826883173

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.