ಮಹಾಲಿಂಗಪುರ: ‘ಮಹಿಳೆಯರಿಗೆ ಕೇವಲ ಸಾಲ ಕೊಡುವುದಷ್ಟೇ ಮುಖ್ಯವಲ್ಲ. ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ, ತರಬೇತಿಯ ಮೂಲಕ ಅವರನ್ನು ಆ ರಂಗದಲ್ಲಿ ನಿಪುಣರನ್ನಾಗಿ ಮಾಡುವುದು ಹಾಗೂ ಅವರು ಮುಂದೆ ಹೇಗೆ ಕೆಲಸ ಮಾಡಬೇಕು, ಹೇಗೆ ಸಂಪಾದನೆ ಮಾಡಬೇಕೆಂಬ ಮಾರ್ಗದರ್ಶನ ನೀಡುವುದು ನಿಜವಾದ ಸಾಮಾಜಿಕ ಸೇವೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಹೇಳಿದರು.

ಪಟ್ಟಣದ ಬಸವನಗರದ ಬಸವೇಶ್ವರ ಸಮುದಾಯ ಭವನದಲ್ಲಿ ಸಿ.ಎಂ.ಹುರಕಡ್ಲಿ ಫೌಂಡೇಷನ್ ವತಿಯಿಂದ ಶನಿವಾರ ಹಮ್ಮಿಕೊಂಡ ಮಹಿಳೆಯರಿಗೆ ಸ್ವ ಉದ್ಯೋಗ ಉಚಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಯಾವುದೇ ಒಂದು ಕಾರ್ಯ ಯಶಸ್ವಿಯಾಗಬೇಕಾದರೆ ಅದರ ಮೇಲೆ ದೃಢವಾದ ನಂಬಿಕೆ ಮತ್ತು ವಿಶ್ವಾಸ ಇರಬೇಕು. ಅಪನಂಬಿಕೆ ಇದ್ದರೆ ಯಶಸ್ಸು ಸಿಗುವುದಿಲ್ಲ. ಸಿ.ಎಂ.ಹುರಕಡ್ಲಿ ಫೌಂಡೇಷನ್ ಕೇವಲ ಆರೋಗ್ಯ ಶಿಬಿರಗಳಷ್ಟೇ ಅಲ್ಲದೆ, ವಿಶಿಷ್ಟ ನೈಸರ್ಗಿಕ ಚಿಕಿತ್ಸಾ ಪದ್ಧತಿಗಳನ್ನು ಆಯೋಜಿಸಿ ಒಳ್ಳೆಯ ಕೆಲಸ ಮಾಡುತ್ತಿದೆ’ ಎಂದರು.

ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ಎ.ಎ.ಕಿಚಡಿ ಮಾತನಾಡಿ, ‘ಹೆಣ್ಣುಮಕ್ಕಳು ಕೇವಲ ನೆಪಗಳನ್ನು ಹೇಳದೆ ತಮಗೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಕರಕುಶಲ ಕಲೆ, ಹೊಲಿಗೆಯಂತಹ ತರಬೇತಿಗಳನ್ನು ಪಡೆದು ಸ್ವಂತ ಉದ್ಯೋಗ ಮಾಡಿಕೊಳ್ಳಬೇಕು. ತಮಗೆ ಬೇಕಾದ ಬಟ್ಟೆಗಳನ್ನು ತಾವೇ ವಿನ್ಯಾಸಗೊಳಿಸಿ ಹೊಲಿಯುವುದರಿಂದ ಹಣ ಉಳಿತಾಯವಾಗುವ ಜತೆಗೆ ಹೆಮ್ಮೆಯೂ ಸಿಗುತ್ತದೆ’ ಎಂದರು.

ಎಸ್ಎಸ್ಎಲ್ಸಿ, ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ರಂಗದ ಸಾಧಕರನ್ನು ಸನ್ಮಾನಿಸಲಾಯಿತು. ಶಿವಾನಂದ ನೇಗಿನಾಳ, ಬಸವರಾಜ ಮೇಟಿ ಮಾತನಾಡಿದರು. ಫೌಂಡೇಷನ್ ಸಂಸ್ಥಾಪಕ ಚನಬಸು ಹುರಕಡ್ಲಿ ಅಧ್ಯಕ್ಷತೆ ವಹಿಸಿದ್ದರು. ಬಲವಂತಗೌಡ ಪಾಟೀಲ, ಅರ್ಜುನ ದೊಡಮನಿ, ಸವಿತಾ ಹುರಕಡ್ಲಿ, ಶ್ರೀಶೈಲಪ್ಪ ಬಿರಾಜನವರ, ಈರಪ್ಪ ಕಡಕೋಳ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಮಹಾಲಿಂಗಪ್ಪ ಕಂಠಿ, ಶ್ರೀಶೈಲ ಹಿಪ್ಪರಗಿ, ಬಸವರಾಜ ಗಿರಿಸಾಗರ, ಸಹನಾ ಶಿರೋಳ, ಸ್ವಾತಿ ಪಾತ್ರೋಟ, ಲೀಲಾವತಿ ಹಿಪ್ಪರಗಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-19-56506738

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.