ಮಹಾಲಿಂಗಪುರ: ‘ಮಹಾರಾಣಾ ಪ್ರತಾಪ್ ಸಿಂಗ್ ಅವರು ಸ್ವಾಭಿಮಾನದ ಸಂಕೇತ’ ಎಂದು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಹೇಳಿದರು.

ಪಟ್ಟಣದ ಬೆಳಗಲಿ ರಸ್ತೆಯ ಮಹಾಲಿಂಗೇಶ್ವರ ಮಹಾದ್ವಾರದ ಬಳಿ ಹಿಂದೂ ರಜಪೂತ ಕ್ಷತ್ರಿಯ ತೇಲಿ ಸಮಾಜದಿಂದ ಶನಿವಾರ ಹಮ್ಮಿಕೊಂಡ ಮಹಾರಾಣಾ ಪ್ರತಾಪ ಸಿಂಗರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಮೊಘಲ್ ಸಾಮ್ರಾಜ್ಯದ ವಿರುದ್ಧ ತಲೆಬಾಗದೆ ಗುಡುಗಿದ ಧೀರ. ಅಕ್ಬರನ ಬೃಹತ್ ಸೇನೆಯನ್ನು ಎದುರಿಸಿ 'ಹಳದಿಘಾಟ್' ಕದನದಲ್ಲಿ ಅವರು ತೋರಿದ ಪರಾಕ್ರಮ ಇಂದಿಗೂ ಇತಿಹಾಸದ ರೋಮಾಂಚನಕಾರಿ ಅಧ್ಯಾಯವಾಗಿದೆ. ಕೇವಲ ರಾಜ್ಯಕ್ಕಾಗಿ ಮಾತ್ರವಲ್ಲದೆ, ತನ್ನ ನೆಲದ ಸಂಸ್ಕೃತಿ ಮತ್ತು ಸ್ವಾತಂತ್ರ್ಯಕ್ಕಾಗಿ ಅರಮನೆಯ ಸುಖವನ್ನು ತ್ಯಜಿಸಿ ಅರಣ್ಯವಾಸ ಅನುಭವಿಸಿದ ಅವರ ತ್ಯಾಗ ಅನನ್ಯವಾದುದು’ ಎಂದರು.

ಸಿದ್ದುಗೌಡ ಪಾಟೀಲ, ಚಂದ್ರಶೇಖರ ಮೋರೆ, ಚಂದ್ರು ಗೊಂದಿ ಮಾತನಾಡಿದರು. ಸಂಘದ ಅಧ್ಯಕ್ಷ ಮಾನಿಕಲಾಲ ಬೆಳಗಾಂವಕರ ಅಧ್ಯಕ್ಷತೆ ವಹಿಸಿದ್ದರು. ಮಹಾಲಿಂಗ ಕಂಕಣವಾಡಿ, ಸಿ.ಎಂ.ಕಟಗಿ, ಸುರೇಶ ಗೋಲಬಾವಿ, ಕಿರಣ ತೇಲಿ, ಗಜಾನನ ಬೆಳಗಾಂವಕರ, ಭಗವಾನ ಬೆಳಗಾಂವಕರ, ಸುಧೀರ ಬೆಳಗಾಂವಕರ, ರಮೇಶ ತೇಲಿ, ಶಂಕರ ತೇಲಿ, ಸಂತೋಷ ಬೆಳಗಾಂವಕರ, ಕಿರಣ ಬೆಳಗಾಂವಕರ, ಸುಧೀರ ತೇಲಿ, ರಾಹುಲ ತೇಲಿ, ಸುನಿತಾ ಬೆಳಗಾಂವಕರ, ಸಚಿನ ಬೆಳಗಾಂವಕರ, ಮಧು ತೇಲಿ ಇದ್ದರು.

ಅದ್ದೂರಿ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಮಹಾಲಿಂಗೇಶ್ವರ ದೇವಸ್ಥಾನದಿಂದ ನಡುಚೌಕಿ, ಡಬಲ್ ರಸ್ತೆ ಮಾರ್ಗವಾಗಿ ಕಾರ್ಯಕ್ರಮದ ವೇದಿಕೆವರೆಗೆ ಮಹಾರಾಣಾ ಪ್ರತಾಪರ ಚಿತ್ರದ ಅದ್ದೂರಿ ಮೆರವಣಿಗೆ ನಡೆಯಿತು. ಮಹಾಲಿಂಗೇಶ್ವರ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.