ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ ಸಮೀಪದ ಕೃಷ್ಣಾ ನದಿಗೆ ನಿರ್ಮಾಣ ಮಾಡುತ್ತಿರುವ ಮಹೀಷವಾಡಗಿ ಸೇತುವೆ ಕಾಮಗಾರಿ ಸವಾಲಾಗಿ ಪರಿಣಮಿಸಿದೆ. ನದಿಯಲ್ಲಿಯ ಪಿಲ್ಲರ್ ಅಳವಡಿಕೆ ಕಾರ್ಯ ನಡೆದಿದೆ.

ಆದರೆ ಪಿಲ್ಲರ್ ಅಳವಡಿಕೆ ಮಾಡಲು ತೆಗೆದ ತೆಗ್ಗುಗಳಲ್ಲಿ ನೀರನ್ನು ತೆಗೆದಷ್ಟು ತುಂಬುತ್ತಿದೆ. ಇದರಿಂದಾಗಿ ಸಮಸ್ಯೆಯಾಗುತ್ತಿದೆ. ನೀರಿನ ಪ್ರಮಾಣ ಕಡಿಮೆಯಾಗದಿದ್ದರೆ ಕಾಮಗಾರಿಗೆ ತೊಂದರೆಯಾಗಲಿದೆ. ಅದಕ್ಕಾಗಿ ತುರ್ತಾಗಿ ನದಿ ನೀರನ್ನು ಖಾಲಿ ಮಾಡಬೇಕಾಗಿದೆ. ಆದ್ದರಿಂದ ರೈತರ ಪಂಪಸೆಟ್ಗಳಿಗೆ ನಿರಂತರ ವಿದ್ಯುತ್ ನೀಡಬೇಕಾಗುತ್ತದೆ ಎಂದು ಮುಖಂಡ ಸಿದ್ದು ಕೊಣ್ಣೂರ ತಿಳಿಸಿದರು.

ಅವರು ಬುಧವಾರ ಸ್ಥಳೀಯ ಭದ್ರನವರ ಕಲ್ಯಾಣ ಮಂಟಪದಲ್ಲಿ ನಡೆದ ರಬಕವಿ ಬನಹಟ್ಟಿ ನಗರದ ಮುಖಂಡರ ಸಭೆಯಲ್ಲಿ ಮಾತನಾಡಿದರು. ನದಿ ನೀರನ್ನು ಖಾಲಿ ಮಾಡಿದರೆ ರಬಕವಿ ಬನಹಟ್ಟಿ ರಾಮಪುರ ಹೊಸೂರ ಹಾಗೂ ನದಿ ತೀರದ ಗ್ರಾಮೀಣ ಪ್ರದೇಶಗಳಿಗೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯಾಗಲಿದೆ. ಅದಕ್ಕಾಗಿ ಎರಡು ಊರಿನ ಜನರು ಸಹಮತ ನೀಡಿದರೆ ಮಾತ್ರ ಅಧಿಕಾರಿಗಳು ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಕೊಣ್ಣೂರ ತಮ್ಮ ಅಭಿಪ್ರಾಯ ತಿಳಿಸಿದರು.

ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಮಾತನಾಡಿ, ಸೇತುವೆ ನಿರ್ಮಾಣ ಕಾಮಗಾರಿ ಮಹತ್ವವಾಗಿದೆ ಅದೇ ರೀತಿಯಾಗಿ ರಬಕವಿ ಬನಹಟ್ಟಿ ಸೇರಿದಂತೆ ಅನೇಕ ಊರುಗಳ ಕುಡಿಯುವ ನೀರಿನ ಪೂರೈಕೆ ಕೂಡಾ ಮುಖ್ಯವಾಗಿದೆ. ನಗರ ಸಭೆಯ ವ್ಯಾಪ್ತಿಯ ಜನರು ತಮ್ಮ ಒಪ್ಪಿಗೆಯನ್ನು ಲಿಖಿತ ರೂಪದಲ್ಲಿ ನೀಡಿದರೆ, ತುರ್ತಾಗಿ ಮೇಲಧಿಕಾರಿಗಳೊಂದಿಗೆ ಚರ್ಚೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ರಬಕವಿ ಬನಹಟ್ಟಿ ತಹಶೀಲ್ದಾರ್ ಗಿರೀಶ ಸ್ವಾದಿ, ಪೌರಾಯುಕ್ತ ಮಹಾಂತೇಶ ಬೀಳಗಿ, ಸಿಪಿಐ ಆರ್.ಆರ್.ಪಾಟೀಲ, ಮಾಸ್ತಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದಾನಪ್ಪ ಹುಲಜತ್ತಿ, ರಾಮಣ್ಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-19-1046369190

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.