ಮುಧೋಳ: ದೇಶದ ಏಕತೆ ಸಂಕೇತವಾಗಿ ‘ನನ್ನ ಮಣ್ಣು ನನ್ನ ದೇಶದ ಅಭಿಯಾನ’ ಅಡಿಯಲ್ಲಿ ದೇಶಾದ್ಯಂತ ಮೃತ್ತಿಕೆ ಸಂಗ್ರಹಿಸಿ ಅಮೃತ ಉದ್ಯಾನ ನಿರ್ಮಾಣ ಮಾಡಲಾಗುವ ಕಾರ್ಯಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ನಗರದ ಐತಿಹಾಸಿಕ ದೇವಸ್ಥಾನ ಶ್ರೀರಾಮ ಮಂದಿರ ಹಾಗೂ ರನ್ನ ಸರ್ಕಾರಿ ಮಾದರಿ ಶಾಲೆ ಮತ್ತು ನಗರದ ವಿವಿಧ ಶಾಲೆಗಳಿಂದ ಅಮೃತ ಉದ್ಯಾನಕ್ಕಾಗಿ ಮಣ್ಣು ಸಂಗ್ರಹ ಮಾಡಲಾಯಿತು. ಅಭಿಯಾನದ ಜಿಲ್ಲಾ ಸಂಚಾಲಕ ನಂದು ಗಾಯಕವಾಡ ಮತ್ತು ಸಹ ಸಂಚಾಲಕ ವಿಠ್ಠಲ ಪರೀಟ, ನಗರ ಘಟಕದ ಅಧ್ಯಕ್ಷ ಡಾ.ರವಿ ನಂದಗಾಂವ, ಬಂಡು ಘಾಟಗೆ,