ಮಿನಿ ಮಹಾಯುದ್ಧಕ್ಕೆ ರಂಗಸಜ್ಜು!

7
ಜಿಲ್ಲೆಯ 12 ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಆಗಸ್ಟ್ 29ಕ್ಕೆ 

ಮಿನಿ ಮಹಾಯುದ್ಧಕ್ಕೆ ರಂಗಸಜ್ಜು!

Published:
Updated:

ಬಾಗಲಕೋಟೆ: ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆಗೆ ತಾಲೀಮು ಎನ್ನಲಾಗುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ಪ್ರಕಟಗೊಂಡಿದೆ. ರಾಜಕೀಯ ಪಕ್ಷಗಳಿಗೆ ನಗರ ಪ್ರದೇಶದ ಮತದಾರರ ನಾಡಿಮಿಡಿತ ಅರಿಯಲು ವೇದಿಕೆ ಎಂದು ಹೇಳಲಾಗುತ್ತಿರುವ ಸ್ಥಳೀಯ ಸಂಸ್ಥೆಗಳ ಹಣಾಹಣಿಗೆ ಇದೀಗ ರಂಗಸಜ್ಜುಗೊಂಡಿದೆ. 

ಚುನಾವಣೆ ವೇಳಾಪಟ್ಟಿಯನ್ನು ಆಯೋಗ ಗುರುವಾರ ಪ್ರಕಟಿಸಿದೆ. ಜಿಲ್ಲೆಯ ಐದು ನಗರಸಭೆ, ಐದು ಪುರಸಭೆ, ಎರಡು ಪಟ್ಟಣಪಂಚಾಯ್ತಿ ಸೇರಿದಂತೆ 12 ಸ್ಥಳೀಯ ಸಂಸ್ಥೆಗಳ 312 ಸ್ಥಾನಗಳಿಗೆ ಆಗಸ್ಟ್ 29ರಂದು ಏಕಕಾಲದಲ್ಲಿ ಚುನಾವಣೆ ನಡೆಯಲಿದೆ.

ಜಿಲ್ಲೆಯಲ್ಲಿ ಬಾಗಲಕೋಟೆ ನಗರಸಭೆ ದೊಡ್ಡದಾಗಿದ್ದು, ಈ ಬಾರಿ 35 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕಳೆದ ಚುನಾವಣೆಯಲ್ಲಿ 33 ಸ್ಥಾನಗಳು ಇದ್ದು, ಈ ಬಾರಿ ಕ್ಷೇತ್ರ ಪುನರ್ವಿಂಗಡಣೆಗೊಂಡು ಎರಡು ಸ್ಥಾನಗಳು ಹೆಚ್ಚಳವಾಗಿವೆ. ಕೇವಲ 18 ಸ್ಥಾನ ಹೊಂದಿರುವ ಬೀಳಗಿ ಜಿಲ್ಲೆಯಲ್ಲಿಯೇ ಅತ್ಯಂತ ಚಿಕ್ಕ ಸ್ಥಳೀಯ ಸಂಸ್ಥೆ ಎನಿಸಿದೆ.

ಉಳಿದಂತೆ ಇಳಕಲ್, ರಬಕವಿ–ಬನಹಟ್ಟಿ, ಜಮಖಂಡಿ ಹಾಗೂ ಮುಧೋಳ ನಗರಸಭೆಗಳ ತಲಾ 31 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ರಬಕವಿ–ಬನಹಟ್ಟಿ, ಇಳಕಲ್ ಹಾಗೂ ಗುಳೇದಗುಡ್ಡ ತಾಲ್ಲೂಕು ಕೇಂದ್ರಗಳಾಗಿ ಘೋಷಣೆಯಾದ ನಂತರ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆ ಚುನಾವಣೆ ಎದುರಿಸುತ್ತಿವೆ.

ಇದೇ ಮೊದಲ ಬಾರಿಗೆ ನೋಟಾ ಬಳಕೆಗೆ ಚುನಾವಣಾ ಆಯೋಗ ಅವಕಾಶ ನೀಡಿದೆ. ವಾರ್ಡ್‌ವಾರು ಅಂತಿಮ ಮೀಸಲಾತಿ ಅಧಿಸೂಚನೆಯನ್ನು ಆಯಾ ತಾಲ್ಲೂಕು ಕಚೇರಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಸೂಚನಾ ಫಲಕದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಪ್ರಕಟಿಸಲಾಗಿದೆ. 

ಜಿಲ್ಲೆಯಲ್ಲಿ  15 ಸ್ಥಳೀಯ ಸಂಸ್ಥೆಗಳ ಪೈಕಿ ಅಮೀನಗಡ, ಕಮತಗಿ ಹಾಗೂ ರನ್ನಬೆಳಗಲಿ ಪಟ್ಟಣಪಂಚಾಯ್ತಿಗಳು ಹೊಸದಾಗಿ ರಚನೆಯಾಗಿದೆ. ಅಲ್ಲಿ ಇತ್ತೀಚೆಗಷ್ಟೇ ಚುನಾವಣೆ ನಡೆದಿದೆ. ಉಳಿದ 12ರಲ್ಲಿ ಬಾಗಲಕೋಟೆ ಹಾಗೂ ಗುಳೇದಗುಡ್ಡದಲ್ಲಿ ಮಾತ್ರ ಬಿಜೆಪಿ ಅಧಿಕಾರದಲ್ಲಿದೆ. ಉಳಿದ 10 ಕಡೆ ಕಾಂಗ್ರೆಸ್ ಪಕ್ಷ ತನ್ನ ಹಿಡಿತ ಹೊಂದಿದೆ. 

ಸಿದ್ಧತೆ ಪೂರ್ಣಗೊಂಡಿದೆ: ಚುನಾವಣೆಗೆ ಬಿಜೆಪಿ ಈಗಾಗಲೇ ಸಂಪೂರ್ಣ ಸಿದ್ಧತೆ ನಡೆಸಿದೆ. ನಾವು ಚುನಾವಣೆ ದಿನಾಂಕ ಪ್ರಕಟವಾಗುವುದನ್ನು ಕಾಯುತ್ತಿದ್ದೆವು. ಜಿಲ್ಲೆಯ 12 ಸ್ಥಳೀಯ ಸಂಸ್ಥೆಗಳ ಪೈಕಿ 10ರಲ್ಲಿ ಖಂಡಿತವಾಗಿ ಗೆಲುವು ಸಾಧಿಸಲಿದ್ದೇವೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದು ಸವದಿ ವಿಶ್ವಾಸ ವ್ಯಕ್ತಪಡಿಸುತ್ತಾರೆ.

 ಮೀಸಲಾತಿ ವಿವರ..

*ನಗರಸಭೆ

ಬಾಗಲಕೋಟೆ 
ವಾರ್ಡ್ ನಂ.1 ಹಿಂದುಳಿದ ವರ್ಗ (ಎ) ಮಹಿಳೆ, 2 ಸಾಮಾನ್ಯ, 3 ಹಿಂದುಳಿದ ವರ್ಗ (ಬಿ) ಮಹಿಳೆ, 4 ಸಾಮಾನ್ಯ ಮಹಿಳೆ, 5 ಪರಿಶಿಷ್ಟ ಜಾತಿ, 6 ಹಿಂದುಳಿದ ವರ್ಗ (ಬಿ), 7 ಮತ್ತು 8 ಸಾಮಾನ್ಯ ಮಹಿಳೆ, 9 ಹಿಂದುಳಿದ ವರ್ಗ (ಎ) ಮಹಿಳೆ, 10, 11 ಮತ್ತು 12 ಸಾಮಾನ್ಯ, 13 ಹಿಂದುಳಿದ ವರ್ಗ (ಎ), 14 ಹಿಂದುಳಿದ ವರ್ಗ (ಎ) ಮಹಿಳೆ, 15 ಪರಿಶಿಷ್ಟ ಪಂಗಡ, 16 ಸಾಮಾನ್ಯ ಮಹಿಳೆ, 17, ಹಿಂದುಳಿದ ವರ್ಗ (ಎ), 18 ಪರಿಶಿಷ್ಟ ಜಾತಿ ಮಹಿಳೆ, 19 ಹಿಂದುಳಿದ ವರ್ಗ (ಎ), 20 ಪರಿಶಿಷ್ಟ ಜಾತಿ ಮಹಿಳೆ, 21 ಪರಿಶಿಷ್ಟ ಜಾತಿ, 22 ಹಿಂದುಳಿದ ವರ್ಗ (ಎ) ಮಹಿಳೆ, 23 ಸಾಮಾನ್ಯ, 24 ಹಿಂದುಳಿದ ವರ್ಗ (ಎ), 25 ಸಾಮಾನ್ಯ 26 ಹಿಂದುಳಿದ ವರ್ಗ (ಎ), 27 ಹಿಂದುಳಿದ ವರ್ಗ (ಎ) ಮಹಿಳೆ, 28, 29 ಮತ್ತು 30 ಸಾಮಾನ್ಯ, 31, 32, 33, 34 ಮತ್ತು 35 ಸಾಮಾನ್ಯ ಮಹಿಳೆ.
ಇಳಕಲ್ 
ವಾರ್ಡ್ ನಂ.1 ಮತ್ತು 2 ಸಾಮಾನ್ಯ ಮಹಿಳೆ, 3 ಹಿಂದುಳಿದ ವರ್ಗ (ಬಿ) ಮಹಿಳೆ, 4 ಸಾಮಾನ್ಯ ಮಹಿಳೆ, 5 ಹಿಂದುಳಿದ ವರ್ಗ (ಎ), 6 ಹಿಂದುಳಿದ ವರ್ಗ (ಬಿ), 7 ಸಾಮಾನ್ಯ ಮಹಿಳೆ, 8 ಹಿಂದುಳಿದ ವರ್ಗ (ಎ) ಮಹಿಳೆ, 9 ಹಿಂದುಳಿದ ವರ್ಗ (ಎ) ಮಹಿಳೆ, 10 ಸಾಮಾನ್ಯ, 11 ಸಾಮಾನ್ಯ ಮಹಿಳೆ, 12 ಹಿಂದುಳಿದ ವರ್ಗ (ಎ), 13 ಸಾಮಾನ್ಯ, 14 ಹಿಂದುಳಿದ ವರ್ಗ (ಎ) ಮಹಿಳೆ, 15 ಮತ್ತು 16 ಸಾಮಾನ್ಯ, 17 ಹಿಂದುಳಿದ ವರ್ಗ (ಎ), 18 ಸಾಮಾನ್ಯ, 19 ಪರಿಶಿಷ್ಟ ಪಂಗಡ, 20 ಪರಿಶಿಷ್ಟ ಜಾತಿ ಮಹಿಳೆ, 21 ಸಾಮಾನ್ಯ, 22 ಹಿಂದುಳಿದ ವರ್ಗ (ಎ) ಮಹಿಳೆ, 23 ಸಾಮಾನ್ಯ ಮಹಿಳೆ, 24 ಪರಿಶಿಷ್ಟ ಜಾತಿ, 25 ಹಿಂದುಳಿದ ವರ್ಗ (ಎ), 26 ಹಿಂದುಳಿದ ವರ್ಗ (ಎ), 27 ಸಾಮಾನ್ಯ, 28 ಪರಿಶಿಷ್ಟ ಜಾತಿ, 29 ಸಾಮಾನ್ಯ, 30 ಮತ್ತು 31 ಸಾಮಾನ್ಯ ಮಹಿಳೆ.
ಮುಧೋಳ 
ವಾರ್ಡ್ ನಂ.1 ಹಿಂದುಳಿದ ವರ್ಗ (ಎ) ಮಹಿಳೆ, 2 ಸಾಮಾನ್ಯ ಮಹಿಳೆ. 3 ಸಾಮಾನ್ಯ, 4 ಹಿಂದುಳಿದ ವರ್ಗ (ಬಿ) ಮಹಿಳೆ, 5 ಪರಿಶಿಷ್ಟ ಜಾತಿ ಮಹಿಳೆ, 6 ಹಿಂದುಳಿದ ವರ್ಗ (ಎ), 7 ಹಿಂದುಳಿದ ವರ್ಗ (ಎ) ಮಹಿಳೆ, 8 ಹಿಂದುಳಿದ ವರ್ಗ (ಎ), 9 ಹಿಂದುಳಿದ ವರ್ಗ (ಎ) ಮಹಿಳೆ, 10 ಪರಿಶಿಷ್ಟ ಜಾತಿ ಮಹಿಳೆ, 11 ಸಾಮಾನ್ಯ, 12 ಪರಿಶಿಷ್ಟ ಜಾತಿ, 13 ಸಾಮಾನ್ಯ ಮಹಿಳೆ, 14 ಸಾಮಾನ್ಯ, 15 ಸಾಮಾನ್ಯ ಮಹಿಳೆ, 16 ಪರಿಶಿಷ್ಟ ಜಾತಿ, 17 ಸಾಮಾನ್ಯ ಮಹಿಳೆ, 18 ಹಿಂದುಳಿದ ವರ್ಗ (ಬಿ), 19 ಪರಿಶಿಷ್ಟ ಜಾತಿ, 20 ಸಾಮಾನ್ಯ, 21 ಹಿಂದುಳಿದ ವರ್ಗ (ಎ), 22 ಪರಿಶಿಷ್ಟ ಪಂಗಡ, 23, ಹಿಂದುಳಿದ ವರ್ಗ (ಎ), 24 ಮತ್ತು 25 ಸಾಮಾನ್ಯ, 26 ಸಾಮಾನ್ಯ ಮಹಿಳೆ, 27 ಸಾಮಾನ್ಯ, 28 ಮತ್ತು 29 ಸಾಮಾನ್ಯ ಮಹಿಳೆ, 30 ಸಾಮಾನ್ಯ, 31 ಸಾಮಾನ್ಯ ಮಹಿಳೆ.
ರಬಕವಿ-ಬನಹಟ್ಟಿ 
ವಾರ್ಡ್ ನಂ.1 ಹಿಂದುಳಿದ ವರ್ಗ (ಎ) ಮಹಿಳೆ, 2 ಸಾಮಾನ್ಯ ಮಹಿಳೆ, 3 ಹಿಂದುಳಿದ ವರ್ಗ (ಬಿ) ಮಹಿಳೆ, 4 ಸಾಮಾನ್ಯ, 5 ಸಾಮಾನ್ಯ ಮಹಿಳೆ, 6 ಪರಿಶಿಷ್ಟ ಜಾತಿ, 7 ಹಿಂದುಳಿದ ವರ್ಗ (ಎ), 8 ಹಿಂದುಳಿದ ವರ್ಗ (ಬಿ), 9 ಹಿಂದುಳಿದ ವರ್ಗ (ಎ) ಮಹಿಳೆ, 10 ಮತ್ತು 11 ಸಾಮಾನ್ಯ, 12 ಸಾಮಾನ್ಯ ಮಹಿಳೆ, 13 ಹಿಂದುಳಿದ ವರ್ಗ (ಎ), 14 ಹಿಂದುಳಿದ ವರ್ಗ (ಎ) ಮಹಿಳೆ, 15 ಪರಿಶಿಷ್ಟ ಪಂಗಡ, 16 ಸಾಮಾನ್ಯ ಮಹಿಳೆ, 17 ಸಾಮಾನ್ಯ, 18 ಹಿಂದುಳಿದ ವರ್ಗ (ಎ), 19 ಪರಿಶಿಷ್ಟ ಜಾತಿ ಮಹಿಳೆ, 20 ಸಾಮಾನ್ಯ ಮಹಿಳೆ, 21 ಹಿಂದುಳಿದ ವರ್ಗ (ಎ) ಮಹಿಳೆ, 22 ಮತ್ತು 23 ಸಾಮಾನ್ಯ, 24 ಹಿಂದುಳಿದ ವರ್ಗ (ಎ), 25 ಸಾಮಾನ್ಯ ಮಹಿಳೆ, 26 ಪರಿಶಿಷ್ಟ ಜಾತಿ ಮಹಿಳೆ, 27 ಸಾಮಾನ್ಯ, 28 ಸಾಮಾನ್ಯ ಮಹಿಳೆ, 29 ಸಾಮಾನ್ಯ, 30 ಪರಿಶಿಷ್ಟ ಜಾತಿ ಹಾಗೂ 31 ಸಾಮಾನ್ಯ ಮಹಿಳೆ.
ಜಮಖಂಡಿ 
ವಾರ್ಡ್ ನಂ.1 ಸಾಮಾನ್ಯ, 2 ಹಿಂದುಳಿದ ವರ್ಗ (ಎ) ಮಹಿಳೆ, 3 ಹಿಂದುಳಿದ ವರ್ಗ (ಬಿ) ಮಹಿಳೆ, 4 ಸಾಮಾನ್ಯ, 5 ಹಿಂದುಳಿದ ವರ್ಗ (ಎ), 6 ಸಾಮಾನ್ಯ ಮಹಿಳೆ, 7 ಪರಿಶಿಷ್ಟ ಜಾತಿ, 8 ಸಾಮಾನ್ಯ ಮಹಿಳೆ, 9 ಹಿಂದುಳಿದ ವರ್ಗ (ಬಿ), 10 ಮತ್ತು 11 ಹಿಂದುಳಿದ ವರ್ಗ (ಎ), 12 ಸಾಮಾನ್ಯ, 13 ಮತ್ತು 14 ಪರಿಶಿಷ್ಟ ಜಾತಿ ಮಹಿಳೆ, 15 ಪರಿಶಿಷ್ಟ ಜಾತಿ, 16 ಸಾಮಾನ್ಯ ಮಹಿಳೆ, 17 ಹಿಂದುಳಿದ ವರ್ಗ (ಎ) ಮಹಿಳೆ, 18 ಸಾಮಾನ್ಯ, 19 ಹಿಂದುಳಿದ ವರ್ಗ (ಎ) ಮಹಿಳೆ, 20 ಸಾಮಾನ್ಯ ಮಹಿಳೆ, 21 ಮತ್ತು 22 ಸಾಮಾನ್ಯ, 23 ಸಾಮಾನ್ಯ ಮಹಿಳೆ, 24 ಹಿಂದುಳಿದ ವರ್ಗ (ಎ), 25 ಸಾಮಾನ್ಯ, 26 ಮತ್ತು 27 ಸಾಮಾನ್ಯ ಮಹಿಳೆ, 28 ಸಾಮಾನ್ಯ, 29 ಸಾಮಾನ್ಯ ಮಹಿಳೆ, 30 ಪರಿಶಿಷ್ಟ ಜಾತಿ ಹಾಗೂ 31 ಪರಿಶಿಷ್ಟ ಪಂಗಡ.

ಪುರಸಭೆ
ತೇರದಾಳ 
ವಾರ್ಡ್ ನಂ.1 ಹಿಂದುಳಿದ ವರ್ಗ (ಎ) ಮಹಿಳೆ, 2 ಮತ್ತು 3 ಸಾಮಾನ್ಯ, 4 ಪರಿಶಿಷ್ಟ ಜಾತಿ, 5 ಹಿಂದುಳಿದ ವರ್ಗ (ಎ), 6 ಸಾಮಾನ್ಯ ಮಹಿಳೆ, 7 ಪರಿಶಿಷ್ಟ ಪಂಗಡ, 8 ಮತ್ತು 9 ಪರಿಶಿಷ್ಟ ಜಾತಿ ಮಹಿಳೆ, 10 ಪರಿಶಿಷ್ಟ ಜಾತಿ, 11 ಹಿಂದುಳಿದ ವರ್ಗ (ಬಿ), 12 ಮತ್ತು 13 ಸಾಮಾನ್ಯ, 14 ಪರಿಶಿಷ್ಟ ಜಾತಿ ಮಹಿಳೆ, 15 ಪರಿಶಿಷ್ಟ ಜಾತಿ, 16 ಹಿಂದುಳಿದ ವರ್ಗ (ಎ), 17 ಸಾಮಾನ್ಯ ಮಹಿಳೆ, 18 ಮತ್ತು 19 ಸಾಮಾನ್ಯ, 20, 21, 22 ಮತ್ತು 23 ಸಾಮಾನ್ಯ ಮಹಿಳೆ.
ಹುನಗುಂದ 
ವಾರ್ಡ್ ನಂ.1 ಹಿಂದುಳಿದ ವರ್ಗ (ಎ) ಮಹಿಳೆ, 2 ಸಾಮಾನ್ಯ, 3 ಪರಿಶಿಷ್ಟ ಪಂಗಡ, 4 ಮತ್ತು 5 ಹಿಂದುಳಿದ ವರ್ಗ (ಎ), 6 ಸಾಮಾನ್ಯ ಮಹಿಳೆ, 7 ಪರಿಶಿಷ್ಟ ಜಾತಿ ಮಹಿಳೆ, 8 ಹಿಂದುಳಿದ ವರ್ಗ (ಬಿ), 9 ಪರಿಶಿಷ್ಟ ಜಾತಿ, 10 ಸಾಮಾನ್ಯ, 11 ಹಿಂದುಳಿದ ವರ್ಗ (ಎ) ಮಹಿಳೆ, 12 ಮತ್ತು 13 ಸಾಮಾನ್ಯ, 14 ಸಾಮಾನ್ಯ ಮಹಿಳೆ, 15 ಸಾಮಾನ್ಯ, 16 ಹಿಂದುಳಿದ ವರ್ಗ (ಎ( ಮಹಿಳೆ, 17 ಸಾಮಾನ್ಯ, 18 ಹಿಂದುಳಿದ ವರ್ಗ (ಎ), 19 ಮತ್ತು 20 ಸಾಮಾನ್ಯ ಮಹಿಳೆ, 21 ಪರಿಶಿಷ್ಟ ಜಾತಿ, 22 ಮತ್ತು 23 ಸಾಮಾನ್ಯ ಮಹಿಳೆ.
ಬಾದಾಮಿ 
ವಾರ್ಡ್ ನಂ.1 ಮತ್ತು 2 ಸಾಮಾನ್ಯ, 3 ಪರಿಶಿಷ್ಟ ಜಾತಿ, 4 ಹಿಂದುಳಿದ ವರ್ಗ ಮಹಿಳೆ, 5 ಸಾಮಾನ್ಯ, 6 ಸಾಮಾನ್ಯ ಮಹಿಳೆ, 7 ಹಿಂದುಳಿದ ವರ್ಗ (ಎ), 8 ಹಿಂದುಳಿದ ವರ್ಗ (ಬಿ), 9 ಪರಿಶಿಷ್ಟ ಪಂಗಡ, 10 ಹಿಂದುಳಿದ ವರ್ಗ (ಎ), 11 ಸಾಮಾನ್ಯ ಮಹಿಳೆ, 12 ಪರಿಶಿಷ್ಟ ಜಾತಿ, 13 ಪರಿಶಿಷ್ಟ ಜಾತಿ ಮಹಿಳೆ, 14 ಸಾಮಾನ್ಯ ಮಹಿಳೆ, 15 ಹಿಂದುಳಿದ ವರ್ಗ (ಎ) ಮಹಿಳೆ, 16 ಹಿಂದುಳಿದ ವರ್ಗ (ಎ) ಮಹಿಳೆ, 17 ಸಾಮಾನ್ಯ, 18 ಸಾಮಾನ್ಯ ಮಹಿಳೆ, 19 ಸಾಮಾನ್ಯ, 20 ಸಾಮಾನ್ಯ ಮಹಿಳೆ, 21 ಹಿಂದುಳಿದ ವರ್ಗ (ಎ), 22 ಸಾಮಾನ್ಯ ಹಾಗೂ 23 ಸಾಮಾನ್ಯ ಮಹಿಳೆ.
ಗುಳೇದಗುಡ್ಡ 
ವಾರ್ಡ್ ನಂ.1 ಹಿಂದುಳಿದ ವರ್ಗ (ಎ) ಮಹಿಳೆ, 2 ಸಾಮಾನ್ಯ ಮಹಿಳೆ, 3 ಹಿಂದುಳಿದ ವರ್ಗ (ಎ) ಮಹಿಳೆ, 4 ಮತ್ತು 5 ಸಾಮಾನ್ಯ, 6 ಪರಿಶಿಷ್ಟ ಪಂಗಡ, 7 ಮತ್ತು 8 ಸಾಮಾನ್ಯ ಮಹಿಳೆ, 9 ಹಿಂದುಳಿದ ವರ್ಗ (ಎ), 10 ಹಿಂದುಳಿದ ವರ್ಗ (ಬಿ), 11 ಹಿಂದುಳಿದ ವರ್ಗ (ಬಿ) ಮಹಿಳೆ, 12 ಹಿಂದುಳಿದ ವರ್ಗ (ಎ), 13 ಮತ್ತು 14 ಸಾಮಾನ್ಯ, 15, 16 ಮತ್ತು 17 ಸಾಮಾನ್ಯ ಮಹಿಳೆ, 18 ಮತ್ತು 19 ಸಾಮಾನ್ಯ, 20 ಹಿಂದುಳಿದ ವರ್ಗ (ಎ) ಮಹಿಳೆ, 21 ಪರಿಶಿಷ್ಟ ಜಾತಿ, 22 ಪರಿಶಿಷ್ಟ ಜಾತಿ ಮಹಿಳೆ, 23 ಹಿಂದುಳಿದ ವರ್ಗ (ಎ).
ಮಹಾಲಿಂಗಪುರ 
ವಾರ್ಡ್ ನಂ.1 ಹಿಂದುಳಿದ ವರ್ಗ (ಎ) ಮಹಿಳೆ, 2 ಮತ್ತು 3 ಸಾಮಾನ್ಯ, 4 ಪರಿಶಿಷ್ಟ ಜಾತಿ ಮಹಿಳೆ, 5 ಪರಿಶಿಷ್ಟ ಜಾತಿ, 6 ಸಾಮಾನ್ಯ ಮಹಿಳೆ, 7 ಹಿಂದುಳಿದ ವರ್ಗ (ಎ), 8 ಪರಿಶಿಷ್ಟ ಜಾತಿ ಮಹಿಳೆ, 9 ಹಿಂದುಳಿದ ವರ್ಗ (ಬಿ), 10 ಹಿಂದುಳಿದ ವರ್ಗ (ಎ) ಮಹಿಳೆ, 11 ಸಾಮಾನ್ಯ, 12 ಪರಿಶಿಷ್ಟ ಪಂಗಡ, 13 ಸಾಮಾನ್ಯ 14 ಹಿಂದುಳಿದ ವರ್ಗ (ಎ), 15 ಸಾಮಾನ್ಯ ಮಹಿಳೆ, 16 ಸಾಮಾನ್ಯ, 17 ಪರಿಶಿಷ್ಟ ಜಾತಿ, 18 ಸಾಮಾನ್ಯ, 19 ಮತ್ತು 20 ಸಾಮಾನ್ಯ ಮಹಿಳೆ, 21 ಹಿಂದುಳಿದ ವರ್ಗ (ಎ), 22 ಮತ್ತು 23 ಸಾಮಾನ್ಯ ಮಹಿಳೆ.

ಪಟ್ಟಣ ಪಂಚಾಯ್ತಿ
ಬೀಳಗಿ 
ವಾರ್ಡ್ ನಂ.1 ಸಾಮಾನ್ಯ, 2 ಹಿಂದುಳಿದ ವರ್ಗ (ಎ) ಮಹಿಳೆ, 3 ಸಾಮಾನ್ಯ, 4 ಸಾಮಾನ್ಯ ಮಹಿಳೆ, 5 ಹಿಂದುಳಿದ ವರ್ಗ (ಬಿ), 6 ಪರಿಶಿಷ್ಟ ಜಾತಿ, 7 ಪರಿಶಿಷ್ಟ ಪಂಗಡ, 8 ಹಿಂದುಳಿದ ವರ್ಗ (ಎ), 9 ಹಿಂದುಳಿದ ವರ್ಗ (ಎ) ಮಹಿಳೆ, 10 ಹಿಂದುಳಿದ ವರ್ಗ (ಎ), 11 ಸಾಮಾನ್ಯ ಮಹಿಳೆ, 12 ಮತ್ತು 13 ಸಾಮಾನ್ಯ, 14 ಸಾಮಾನ್ಯ ಮಹಿಳೆ, 15 ಪರಿಶಿಷ್ಟ ಜಾತಿ ಮಹಿಳೆ, 16 ಪರಿಶಿಷ್ಟ ಜಾತಿ, 17 ಸಾಮಾನ್ಯ, 18 ಸಾಮಾನ್ಯ ಮಹಿಳೆ.
ಕೆರೂರು 
ವಾರ್ಡ್ ನಂ.1 ಹಿಂದುಳಿದ ವರ್ಗ (ಎ) ಮಹಿಳೆ, 2 ಮತ್ತು 3 ಸಾಮಾನ್ಯ, 4 ಸಾಮಾನ್ಯ ಮಹಿಳೆ, 5 ಪರಿಶಿಷ್ಟ ಪಂಗಡ ಮಹಿಳೆ, 6 ಪರಿಶಿಷ್ಟ ಪಂಗಡ, 7 ಹಿಂದುಳಿದ ವರ್ಗ (ಬಿ), 8 ಸಾಮಾನ್ಯ ಮಹಿಳೆ, 9 ಸಾಮಾನ್ಯ, 10 ಹಿಂದುಳಿದ ವರ್ಗ (ಎ), 11 ಸಾಮಾನ್ಯ ಮಹಿಳೆ, 12 ಹಿಂದುಳಿದ ವರ್ಗ (ಎ) ಮಹಿಳೆ, 13 ಸಾಮಾನ್ಯ, 14 ಹಿಂದುಳಿದ ವರ್ಗ (ಎ), 15 ಪರಿಶಿಷ್ಟ ಜಾತಿ ಮಹಿಳೆ, 16 ಪರಿಶಿಷ್ಟ ಜಾತಿ, 17 ಹಿಂದುಳಿದ ವರ್ಗ (ಎ), 18 ಮತ್ತು 19 ಸಾಮಾನ್ಯ ಮಹಿಳೆ, 20 ಸಾಮಾನ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !