ಮಹಾಲಿಂಗಪುರ: ‘ಇಂದಿನ ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಎಲ್ಲ ರೀತಿಯ ಸೌಲಭ್ಯ ಹಾಗೂ ಆದ್ಯತೆ ನೀಡುತ್ತೇನೆ’ ಎಂದು ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ಅಕ್ಕಿಮರಡಿ ಗ್ರಾಮದಲ್ಲಿ ಭಾನುವಾರ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯ ಆರ್ಐಡಿಎಫ್ 28 ಅನುದಾನದಡಿ ಸರ್ಕಾರಿ ಪ್ರೌಢಶಾಲೆಯ (ಆರ್ಎಂಎಸ್ಎ) ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಶಿಕ್ಷಣಕ್ಕಷ್ಟೇ ಅಲ್ಲದೆ ಬಡ ಹಾಗೂ ದೀನದಲಿತರಿಗೆ ಸಹಕಾರಿಯಾಗುವ ಅನೇಕ ಯೋಜನೆ ಜಾರಿಗೆ ತಂದಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಬಡವರಿಗೆ ಸಹಾಯವಾಗಿದೆ’ ಎಂದರು.

ಬೆಳಗಲಿ-ಮಿರ್ಜಿ ರಸ್ತೆಯಿಂದ ನಾಗರಾಳ ಕೆನಾಲ್ ರಸ್ತೆವರೆಗೆ ಡಾಂಬರೀಕರಣ ಕಾಮಗಾರಿ, ಮಹಾಲಿಂಗಪುರ ರಸ್ತೆಯಿಂದ ಒತ್ತನೆವ್ವ ದೇವಸ್ಥಾನದವರೆಗೆ ರಸ್ತೆ ಸುಧಾರಣೆ, ಕನಕದಾಸ ಸಮುದಾಯ ಭವನ ನಿರ್ಮಾಣಕ್ಕೆ ಸಚಿವರು ಭೂಮಿ ಪೂಜೆ ನೆರವೇರಿಸಿದರು.

ಶಿರೂರದ ಚಿನ್ಮಯಾನಂದ ಸ್ವಾಮೀಜಿ, ಮೆಟಗುಡ್ಡದ ಜ್ಯೋತಿಲಕ್ಕಪ್ಪ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಪ್ರೌಢಶಾಲೆ ಮುಖ್ಯಶಿಕ್ಷಕ ಎಸ್.ಎಂ.ಸುತಾರ ಮಾತನಾಡಿದರು.

ಪಿ.ಎಸ್. ಬಳೋಲಮಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ಮುಲ್ಲಾ, ರಂಜಿತಾ ಹಟ್ಟಿ, ಶಿವಯ್ಯ ಲಗಳಿ, ಯಶವಂತ ಚವಾಣ, ಮಲ್ಲಪ್ಪ ಅಣ್ಣೋಜಿ, ಮಡಿವಾಳಯ್ಯ ಕಂಬಿ, ಮಲ್ಲಪ್ಪ ಮಳಲಿ, ರಾಮಪ್ಪ ಕೊಣ್ಣೂರ, ಶಿವಾನಂದ ಮಠದ, ಭೀಮಪ್ಪ ಚಿಕ್ಕೂರ, ಕಾಡಪ್ಪ ಕೊಣ್ಣೂರ, ರಾಮಪ್ಪ ಚವಾಣ, ಶಿವಾಜಿ ಚವಾಣ, ಗೋಪಾಲ ಇಂಚಲ, ತಮ್ಮಣ್ಣ ಡಂಗಿ, ಆನಂದ ಹಟ್ಟಿ, ಸದುಗೌಡ ಪಾಟೀಲ, ಗೋಪಾಲ ಇರಗರ, ಆನಂದ ರಾಠೋಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.