ಗುಳೇದಗುಡ್ಡ: ಪಟ್ಟಣದ ವಾರ್ಡ್ ನಂ.3ರಲ್ಲಿ ಕುಂಬಾರ ಓಣಿಯಯಲ್ಲಿರುವ ಮೈಲಾರಿ ಸಂಗಪ್ಪ ಹೂಲಗೇರಿ ಅವರ ಮನೆಯಲ್ಲಿ ಶುಕ್ರವಾರ ಶಾರ್ಡ್ ಸರ್ಕಿಟ್ನಿಂದ ಸಂಪೂರ್ಣವಾಗಿ ಸುಟ್ಟ ಮನೆಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಸೋಮವಾರ ಭೇಟಿ ನೀಡಿ, ಪರಿಶೀಲಿಸಿದರು.

ವೈಯಕ್ತಿಕ ₹20 ಸಾವಿರ ಆರ್ಥಿಕ ನೆರವು ನೀಡಿದರು. ಮುಖ್ಯಮಂತ್ರಿಗಳ ಪರಿಹಾರ ನಿಧಿ ಅಥವಾ ಸರ್ಕಾರದ ಯಾವುದಾದರೂ ಒಂದು ಯೋಜನೆಯಲ್ಲಿ ಮನೆ ನಿರ್ಮಿಸಲು ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.

ನಂತರ ಹೆಸ್ಕಾ ಅಧಿಕಾರಿಗಳಿಗೆ ಸಹಾಯ ಮಾಡಲು ಸೂಚಿಸಿದರು. ಹೆಸ್ಕಾ ಅಧಿಕಾರಿಗಳು ವಿದ್ಯುತ್ ಅವಘಡದಿಂದ ಬೆಂಕಿ ತಗುಲಿದ ಮಾಹಿತಿಯಲ್ಲಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಮೇಲಾಧಿಕಾರಿಗಳ ನಿರ್ದೇಶನದಂತೆ ಸಹಾಯ ಮಾಡುವುದಾಗಿ ತಿಳಿಸಿದರು.

ತಹಶೀಲ್ದಾರ್ ಮಂಗಳಾ ಎಂ., ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜು ಬರಗುಂಡಿ, ವೈ.ಆರ್.ಹೆಬ್ಬಳ್ಳಿ, ರಾಜು ಕೊಣ್ಣೂರ, ಪ್ರಕಾಶ ಮುರುಗೋಡ, ರಾಜು ಸಂಗಮ, ಸಲೀಂ ಮೋಮಿನ, ವಿನೋಧ ಮದ್ದಾನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.