ರಾಂಪುರ: ಸಮೀಪದ ಜಾಡ್ರಾಮಕುಂಟಿ ಗ್ರಾಮದಲ್ಲಿ ಸಾರ್ವಜನಿಕರ ಮೇಲೆರಗಿ ಭಯಭೀತಗೊಳಿಸಿದ್ದ ಮಂಗಗಳನ್ನು ಹಿಡಿದು ಬೇರೆಡೆ ಸಾಗಿಸಬೇಕೆನ್ನುವ ಪ್ರಯತ್ನ ವಿಫಲಗೊಂಡಿದೆ.

ಮಂಗಗಳನ್ನು ಹಿಡಿಯಲು ರೂಪಿಸಲಾದ ಬಲೆಯತ್ತ ಅವು ಸುಳಿಯದೇ ಇರುವುದು ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಮಂಗಗಳನ್ನು ಹಿಡಿಯುವ ಪರಿಣಿತರ ತಂಡ ಬೆಳಿಗ್ಗೆಯಿಂದ ಸಂಜೆವರೆಗೆ ಕಾದು ಕುಳಿತರೂ ಮಂಗಗಳು ಬಲೆಯತ್ತ ಬರುತ್ತಿಲ್ಲ.

ಬಲೆ ಹಾಕಿರುವ ಸ್ಥಳದಲ್ಲಿರುವ ಗಿಡ, ಮರಗಳಲ್ಲಿ ಜಿಗಿದಾಡುತ್ತಿರುವ ಮಂಗಗಳು ಕೆಳಗಡೆ ಬರುತ್ತಿಲ್ಲ. ಅವುಗಳನ್ನು ಸೆರೆ ಹಿಡಿಯಲು ಬಲೆಯಲ್ಲಿ ಹಣ್ಣು, ಗೋವಿನಜೋಳ ತೆನೆ ಸೇರಿ ಹಲವು ಬಗೆಯ ತಿನಿಸು ಹಾಕಿದರೂ ಕೆಳಗಡೆ ಬರುತ್ತಿಲ್ಲ ಎಂದು ಕಾರ್ಯಾಚರಣೆ ತಂಡ ಹೇಳಿದೆ.

ಗ್ರಾಮಸ್ಥರೂ ಸಹ ಕಾರ್ಯಾಚರಣೆಗೆ ಸಹಕರಿಸಿದ್ದು, ಬುಧವಾರ ಹಾಗೂ ಗುರುವಾರ ನಡೆಸಿದ ಯತ್ನ ವಿಫಲವಾಗಿದ್ದರಿಂದ ಮಂಗಗಳನ್ನು ಹಿಡಿಯಲು ಬಂದಿದ್ದ ತಂಡ ಗ್ರಾಮದಿಂದ ತೆರಳಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.