ಬಾಗಲಕೋಟೆ: ಸಹಾಯ ಮಾಡುವ ಕೈಗಳು ಪ್ರಾರ್ಥನೆ ಮಾಡುವ ತುಟಿಗಳಿಗಿಂತ ಶ್ರೇಷ್ಠವಾಗಿದ್ದು, ಕತೃತ್ವ, ಮಿತೃತ್ವಕ್ಕಿಂತ ಮಾತೃತ್ವ ಶಕ್ತಿ ದೊಡ್ಡದು ಹಾಗೂ ಮಹತ್ವದಾಗಿದೆ ಎಂದು ಬಿವಿವಿ ಸಂಘದ ಮುಖ್ಯ ಸಲಹೆಗಾರರಾದ ಮೀನಾ ಚಂದಾವರ್ಕರ್ ಹೇಳಿದರು.

ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಬುಧವಾರ ಆರ್ಯವೇದ, ಫಾರ್ಮಸಿ, ಹೊಮಿಯೋಪಧಿ, ನ್ಯಾಚುರೋಪಧಿ ಕಾಲೇಜುಗಳ ಸಹಯೋಗದಲ್ಲಿ ಪ್ರೇರಣಾ ಮಹಿಳಾ ಸಬಲೀಕರಣ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರೇರಣಾ ಎನ್ನುವ ಶಬ್ದ ಬಹಳ ಅರ್ಥಪೂರ್ಣವಾದದ್ದಾಗಿದೆ. ಮಹಿಳಾ ದಿನಾಚರಣೆ ಕೇವಲ ಮಾ.8 ರಂದು ಆಚರಿಸುವ ದಿನವಲ್ಲ ಎಂದರು.

ಮಹಿಳೆ ಎಂದರೇ ಪ್ರಕೃತಿ, ತಾಯಿಯೆಂದರೆ ಸಂಸ್ಕೃತಿ, ಒಬ್ಬ ಮಹಿಳೆಯು ವಿಶ್ವವಿದ್ಯಾಲಯ ಸಮ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರಿದ್ದಾರೆ. ಮಹಿಳಾ ಸಶಕ್ತೀಕರಣವೂ ಮಹಿಳೆಯರಿಂದಲೇ ಆಗುವುದು ಎಂದು ಹೇಳಿದರು.

ತೃಪ್ತಿ ದರ್ಬಾರ ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರವನ್ನು ನೀಡಿದರು. ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ, ಪ್ರಾಚಾರ್ಯರುಗಳಾದ ವೈ. ಶ್ರೀನಿವಾಸ, ಅರುಣಕೂಮಾರ ಹೂಲಿ, ಎಂ.ಎಸ್. ಹಿರೇಮಠ, ಉಪನ್ಯಾಸಕರಾದ ಡಾ. ವಿದ್ಯಾಶ್ರೀ, ಡಾ. ವೀಣಾ ಯಲವಗಿ. ಡಾ.ತೃಪ್ತಿ, ಡಾ. ವಿಜಯಲಕ್ಷ್ಮೀ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.