ಮುಧೋಳ ಸ್ಫೋಟ: ಇನ್ನೂ ಅನೇಕರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ

7
4 ಸಾವು, 8 ಮಂದಿಗೆ ಗಾಯ

ಮುಧೋಳ ಸ್ಫೋಟ: ಇನ್ನೂ ಅನೇಕರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ

Published:
Updated:

ಮುಧೋಳ: ಇಲ್ಲಿನ ಕುಳಲಿ ಗ್ರಾಮದ ನಿರಾಣಿ ಶುಗರ್ಸ್‌ನ ಮೊಲ್ಯಾಸಿಸ್ ಸಂಸ್ಕರಣಾ ಘಟಕ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆ‌ಯಾಗಿದ್ದು, 8 ಮಂದಿ ಗಾಯಗೊಂಡಿದ್ದಾರೆ. 

ಘಟನಾ ಸ್ಥಳದಲ್ಲಿ 4 ಜೆಸಿಬಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದು, ನಾಳೆಯವರೆಗೂ ರಕ್ಷಣಾ ಕಾರ್ಯಚರಣೆ ಮುಂದುವರೆಯಲಿದೆ. ಸಾಕಷ್ಟು ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಪಿ. ಬಿ ರಿಷಂತ್ ಹೇಳಿದ್ದಾರೆ. 

ಮೃತರನ್ನು ಆಪರೇಟರ್ ಜಗದೀಶ್ ಪಟೇಲ್ ಶೆಟ್ಟಿ (34, ಮುಧೋಳದ  ನವಲಗಿ), ಶಿವಾನಂದ ವೀರಯ್ಯ ಹೊಸ‌ಮಠ್ (43, ಯಡಹಳ್ಳಿ), ಆಪರೇಟರ್ ನಾಗಪ್ಪ ಧರ್ಮಟ್ಟಿ (38, ಕುಲ್ಲಳ್ಳಿ), ಇಟಿಪಿ ಮ್ಯಾನೇಜರ್ ಶರಣ ಬಸಪ್ಪ ತೋಟದ್ (ಗುಲ್ಬರ್ಗಾದ ಅಫಜಲಪುರ)ಎಂದು ಗುರುತಿಸಲಾಗಿದೆ. 

ಗಾಯಗೊಂಡವರು ಮನೋಜ್, ಶಿವಾನಂದ್ ಹೊಸಮಠ, ಸೈದಪ್ಪ ಹೊಸಮನಿ, ಮೋಹನ್ ಸಿಂಗ್ ಬಿಹಾರಿ, ಸಿದ್ದಪ್ಪ ಬಸಪ್ಪ ಪಾಟೀಲ್, ರಮೇಶ್ ಜಾಧವ್, ಮಧುಕರ್ ಗೋರ್ಪಡೆ, ಲಕ್ಕಪ್ಪ ಯಲ್ಲನಾಯ್ಕ.

ಸ್ಥಳಕ್ಕೆ ಧಾವಿಸಿ ಘಟನೆಯ ಪರಿಶೀಲನೆ ನಡೆಸುತ್ತಿರುವ ಎಸ್‌ಪಿ ಪಿ. ಬಿ ರಿಷಂತ್, ಸೇಫ್ಟಿ ವಾಲ್ ಸರಿಯಾದ ರೀತಿಯಲ್ಲಿ ಕೆಲಸ ಮಾಡದೆ ಇರುವುದರಿಂದ ಒತ್ತಡ ಹೆಚ್ಚಾಗಿ ಕಟ್ಟಡ ಕುಸಿದಿದೆ. ಇದರ ಬಗ್ಗೆ ಹೆಚ್ಚಿನ ವಿವರ ಪಡೆಯಲು ಸ್ಥಳಕ್ಕೆ ಬೆಳಗಾವಿಯಿಂದ ಬಾಯ್ಲರ್ ಇನ್ಸ್‌ಪೆಕ್ಟರ್ ಕರೆಸುತ್ತಿದ್ದೇವೆ ಎಂದು ಹೇಳಿದರು. 

ಇದನ್ನೂ ಓದಿ...

ಮುಧೋಳ: ಮೊಲ್ಯಾಸಿಸ್ ಸಂಸ್ಕರಣಾ ಘಟಕ ಸ್ಫೋಟ, ಮೂರು ಶವ ಪತ್ತೆ, ಐವರಿಗೆ ಗಾಯ

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 3

  Sad
 • 0

  Frustrated
 • 2

  Angry

Comments:

0 comments

Write the first review for this !