ಮುಧೋಳ: ಪಟ್ಟಣದಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಗಾಳಿ, ಗುಡುಗು ಸಿಡಿಲು ಮಿಶ್ರಿತ ಧಾರಾಕಾರ ಮಳೆಗೆ ನಗರದಲ್ಲಿ ಗ್ರಂಥಾಲಯ ಹಾಗೂ ದತ್ತ ಮಂದಿರ ರಸ್ತೆಯಲ್ಲಿ ಎರಡು ಮರಗಳು ಧರೆಗುರುಳಿದೆ.

ತಾಲ್ಲೂಕಿನ ಮಿರ್ಜಿ ಗ್ರಾಮದ ಡೊಂಗ್ರಿಸಾಬ ಕಾನಬೋಗಿ ಅವರಿಗೆ ಸೇರಿದ ಎರಡು ಎಮ್ಮಿ ಕರುಗಳು ಹಾಗೂ ಒಂದು ಹೋತ್ (ಆಡು) ಸಿಡಿಲಿನ ಬಡಿತಕ್ಕೆ ಮೃತಪಟ್ಟಿವೆ. ತಾಲ್ಲೂಕಿನಾದ್ಯಂತ 11 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ತೋಟಗಾರಿಕೆ ಬೆಳೆಗಳಾದ ಬಾಳೆ, ಉಳ್ಳಾಗಡಿ, ಪಪ್ಪಾಯಿ ಮುಂತಾದ ಬೆಳೆಗಳಿಗೆ ಹಾನಿಯಾಗಿದೆ.

ಮಾಚಕನೂರ ಗ್ರಾಮದಲ್ಲಿ ಬೆಳೆದ ಬಾಳೆ ನೆಲಕಚ್ಚಿದೆ. ಶೋಭಾ ದಾಸರಡ್ಡಿ ಅವರ 2.32 ಎಕರೆ, ರೂಪಾ ದಾಸರಡ್ಡಿ ಅವರ 2.16 ಎಕರೆ, ರೇಣುಕಾ ದಾಸರಡ್ಡಿ 3.18 ಎಕರೆ, ರಾಧಾಬಾಯಿ ಘೋರ್ಪಡೆ ಅವರ 2 ಎಕರೆ, ಅಕ್ಷಯಕುಮಾರ ಘೋರ್ಪಡೆ 2 ಎಕರೆ, ಶಿವಾಜಿ ಘೋರ್ಪಡೆ ಅವರ 3.23 ಎಕರೆ, ಹಣಮಂತ ನಾವಿ ಅವರ 1.22 ಎಕರೆ, ಉಮಾ ದಾಸರಡ್ಡಿ 2.06 ಎಕರೆ, ದಿವ್ಯಾ ದಾಸರಡ್ಡಿ ಅವರ 2.10 ಎಕರೆ ಹಾಗೂ ಸದಾಶಿವ ದಾಸರಡ್ಡಿ ಅವರ 1 ಎಕರೆ ಬಾಳೆ ನೆಲಕಚ್ಚಿದೆ.

ಹನಿ ಮಳೆಯಿಂದ ವಿದ್ಯುತ್ ಸಂಪರ್ಕ್ ಕಡಿತಗೊಳಿಸಲಾಗಿತ್ತು. ತೆಗ್ಗು ಪ್ರದೇಶದಲ್ಲಿ ನೀರು ನಿಂತಿದೆ. ಬಿಸಿಲಿನ ಬೇಗೆಯಿಂದ ತತ್ತರಿಸಿದ ಜನಕ್ಕೆ ಮಳೆ ಬಂದಿದ್ದು ಸಂತಸ ತಂದಿದೆ.

ಮಳೆಯಿಂದ ರೈತ ಸಮುದಾಯ ಖುಷಿಗೊಂಡಿದ್ದು ಕೃಷಿ ಚಟುವಟಿಗಕೆಗಳು ಭರದಿಂದ ಸಾಗಿದೆ. ಬೀಜ ಮಾರಾಟ ಕೇಂದ್ರದಲ್ಲಿ ರೈತರು ಬೀಜ ಖರೀದಿಸುತ್ತಿರುವುದು ಕಂಡು ಬಂತು.

ಕುಳಗೇರಿ ಕ್ರಾಸ್: ಕುಳಗೇರಿ ಹೋಬಳಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಶನಿವಾರ ರಾತ್ರಿ ಭಾರಿ ಬಿರುಸಿನಿಂದ ಮಳೆ ಸುರಿಯಿತು. ಸ್ವಲ್ಪ ಹೊತ್ತು ಮಾತ್ರ ಸುರಿದ ಮಳೆಯಿಂದ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಯಿತು. ಭೂಮಿಗೆ ಬೀಜವನ್ನು ಹಾಕುವ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಮಳೆ ಉತ್ತೇಜನ ನೀಡಿದಂತಾಗಿದೆ ಎಂದು ರೈತ ಬೀರಪ್ಪ ದಂಡಿನ ತಿಳಿಸಿದರು.

ಆದರೆ ಕೃಷಿ ಚಟವಟಿಕೆಗಳನ್ನು ಕೈಗೊಳ್ಳಲು ಗ್ರಾಮದಲ್ಲಿರುವ ಮೂರು ಪೆಟ್ರೋಲ್ ಪಂಪ್ಗಳಲ್ಲಿ ಡೀಸೆಲ್ ಇರದ ಕಾರಣ ಈ ಭಾಗದ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ತೊಂದರೆಯಾಗಿದೆ.

ಆಹಾರ ಮತ್ತು ನಾಗರಿಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಸಂಪರ್ಕಿಸಿದಾಗ ಸಂಬಂಧಪಟ್ಟವರ ಜೊತೆ ಮಾತನಾಡಿ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-19-1004325992

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.