ಮುಧೋಳ: ರೈತರು ಸರ್ಕಾರ ವಿತರಿಸುವ ಗುಣಮಟ್ಟದ ಬೀಜಗಳನ್ನು ಬಿತ್ತನೆ ಮಾಡಿ ಲಾಭ ಪಡೆದುಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ಶಂಕರ ತಿಮ್ಮಾಪುರ ಹೇಳಿದರು.

ಅವರು ಬುಧವಾರ ನಗರದ ಕೃಷಿ ಇಲಾಖೆಯಲ್ಲಿ ಬೀಜ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಹಶೀಲ್ದಾರ್ ಡಾ.ಚಿಕ್ಕಪ್ಪ ನಾಯಿಕ ಬೀಜ ವಿತರಣೆಗೆ ಚಾಲನೆ ನೀಡಿದರು.

ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ದೊಡಮನಿ ಮಾತನಾಡಿ, ರೈತ ಸಂಪರ್ಕ ಕೇಂದ್ರ ಮುಧೋಳ, ಲೋಕಾಪುರದಲ್ಲಿ ಸಹಾಯಧನದಲ್ಲಿ ಸೋಯಾಬಿನ್ ಮೆಕ್ಕಜೋಳ ಸಜ್ಜೆ, ಹೆಸರು, ತೊಗರಿ, ಉದ್ದು, ಸೂರ್ಯಕಾಂತಿ ಬೆಳೆಗಳ ಬಿತ್ತನೆ ಬೀಜಗಳು ದೊರಕುತ್ತವೆ. 12.7 ಸೆಂ.ಮೀ ಮಳೆಯಾಗಿದೆ. ಮುಂಬರುವ ಮುಂಗಾರು ಹಂಗಾಮಿನ ದಿನಗಳಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಮಳೆ ಬೀಳುವ ನಿರೀಕ್ಷೆ ಇದ್ದ ಕಾರಣ ರೈತರಿಗೆ ದ್ವಿದಳಧಾನ್ಯ ಎಣ್ಣೆಕಾಳು ಬೆಳೆಗಳನ್ನು ಬಿತ್ತುವುದು, ಸೂಕ್ತ ವೇಗದ ಗಾಳಿ ಮತ್ತು ರಭಸದ ಮಳೆ ಆಗುವ ಸಾಧ್ಯತೆ ಇರುವ ಕಾರಣ ರೈತರುಗಳು ಸೂಕ್ತ ತಾಂತ್ರಿಕತೆಗಳನ್ನು ಅನುಸರಿಸಬೇಕು ಎಂದು ಹೇಳಿದರು.

ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ದುಂಡಪ್ಪ ಬರಮನಿ, ಗಿರೀಶ ಲಕ್ಷಾಣಿ, ಎಸ್.ಪಿ.ದಾನಪ್ಪಗೋಳ, ಕೃಷಿ ಅಧಿಕಾರಿಗಳಾದ ರೇಣುಕಾ ಗೌಡಪ್ಪಗೌಡರ. ಎಸ್.ಎಸ್.ತಟ್ಟಿಮನಿ, ಪ್ರಕಾಶ ಅಡವಿ, ರಂಗಪ್ಪ ಹಂದಿಗುಂದ, ಆತ್ಮಾ ಬಿಟಿಎಂ, ರಮೇಶ ಹಲಗಲಿ, ಸಹಾಯಕ ಕೃಷಿ ಅಧಿಕಾರಿ ಎಂ.ಎಸ್. ಬಿರಾದಾರ. ಐ.ಎಂ.ಧಾರವಾಡಮಠ. ಪ್ರಕಾಶ ಹಡಪದ, ಕಂದಾಯ ಇಲಾಖೆಯ ಸತೀಶ ಬೇವೂರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-19-20038596

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.