ಮುಧೋಳ: ಗುರು ತೋರಿಸುವ ಸನ್ಮಾರ್ಗದಿಂದ ನಡೆದರೆ ಸತ್ಕಾರ್ಯ, ಮಾನವೀಯತೆಯಿಂದ ಸಕಲ ಜೀವರಾಶಿಗೆ ಲೇಸು ಬಯಸಿದರೆ ಜೀವನ ಸಂತೃಪ್ತಿಯಿಂದ ನಡೆಯುವುದು ಎಂದು ನಗರದ ಸಿದ್ದಕ್ಷೇತ್ರ ಬ್ರಹ್ಮಗಡ್ಡಿ ಮಠದ ಸದ್ಗುರು ಪರಮೇಶ್ವರ ಸಾಧುಮಹಾರಾಜ ಹೇಳಿದರು.

ಅವರು ಸೋಮವಾರ ಸಿದ್ದಕ್ಷೇತ್ರ ಬ್ರಹ್ಮಗಡ್ಡಿ ಮಠದಲ್ಲಿ ಶಿವಶರಣಾನಂದ ಶ್ರೀಗಳ ಪುಣ್ಯಾರಾಧನೆ ಹಾಗೂ 19 ನೇ ಮಹಾ ನವಬಂಡಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಶ್ರೀಗಳ ಆದರ್ಶ ಬದುಕು ನಮಗೆಲ್ಲ ಪ್ರೇರಣೆ. ಅವರ ಹಾದಿಯಲ್ಲಿ ನಾವು ನಡೆಯಬೇಕು ಎಂದು ಹೇಳಿದರು.

ಇದರ ಅಂಗವಾಗಿ ಇದೇ 14 ದಿಂದಲೇ ಗದ್ದುಗೆಗೆ ವಿಶೇಷ ಅಭಿಷೇಕ ಮತ್ತು ಮಹಾಪೂಜೆ, ಪ್ರತಿನಿತ್ಯ ಸಂಜೆ ಶ್ರೀ ನಿತ್ಯಾನಂದ ಶ್ರೀಗಳಿಂದ ಸಂಗೀತ ಭಜನೆ ಹಾಗೂ ಪ್ರವಚನ ಕಾರ್ಯಕ್ರಮಗಳು ನಡೆದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-19-61370447

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.