ಮುಧೋಳ: ಎಲ್ಲರೂ ತಮ್ಮ ತಮ್ಮ ಮತದಾರರ ಗುರುತಿನ ಚೀಟಿಯ ಬಗ್ಗೆ ಜಾಗೃತಿ ವಹಿಸಬೇಕು ಮತ್ತು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೋ ಅಥವಾ ಇಲ್ಲವೋ ಎಂದು ತಿಳಿದುಕೊಳ್ಳಬೇಕು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಮುಧೋಳ, ಜಮಖಂಡಿ ,ರಬಕವಿ- ಬನಹಟ್ಟಿ ಹಾಗೂ ತೇರದಾಳ ಮತಕ್ಷೇತ್ರಗಳ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಎಸ್ಐಆರ್ ಹಾಗೂ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯಗಳ ಕಟ್ಟಡ ನಿರ್ಮಾಣದ ಅಂಗವಾಗಿ ಶುಕ್ರವಾರ ನಡೆದ ಸಭೆಯಲ್ಲಿ ಮಾತನಾಡಿದರು.

ಪ್ರತಿ ಬೂತ್ ಅಧ್ಯಕ್ಷರು 10 ಜನ ಬೂತ್ ಕಮಿಟಿಯ ಸದಸ್ಯರು ಬೆಂಗಳೂರಿನಲ್ಲಿ ತರಬೇತಿ ಪಡೆದುಕೊಂಡು ಪ್ರಾಮಾಣಿಕವಾಗಿ ಬೂತ್ ಕಮಿಟಿಯ ಸದಸ್ಯರ ಕಾರ್ಯವನ್ನು ನಿರ್ವಹಿಸಬೇಕು. ಮುಧೋಳ ಮತ್ತು ಲೋಕಾಪುರದಲ್ಲಿ ಶೀಘ್ರದಲ್ಲಿ ಕಾಂಗ್ರೆಸ್ ಹೊಸ ಕಾರ್ಯಾಲಯಕ್ಕೆ ಭೂಮಿಪೂಜೆಯನ್ನು ಸಚಿವರ ಗಮನಕ್ಕೆ ತಂದು ಮಾಡಲಾಗುವುದು ಎಂದರು.

ಎಸ್ಐಆರ್ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಮತದಾರ ಪಟ್ಟಿ ಪರಿಷ್ಕರಣೆ ಗಂಭೀರವಾಗಿ ತೆಗೆದುಕೊಳ್ಳಬೇಕು. ಪಶ್ಚಿಮ್ಮ ಬಂಗಾಳ, ಬಿಹಾರ ರಾಜ್ಯಗಳಲ್ಲಿ ಸುಮಾರು 60 ಲಕ್ಷಕ್ಕಿಂತ ಹೆಚ್ಚು ಮತದಾರರನ್ನು ತೆಗೆದು ಹಾಕಲಾಗಿದೆ ಎಂದು ಹೇಳಿದರು.

ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ ಮಾತನಾಡಿದರು. ಮುಧೋಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುದುಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಲಾಲಸಾಬ ನದಾಫ, ಜೈಪ್ರಕಾಶ್ ಉತ್ತೂರ, ಮುದುಕಣ್ಣ ಅಂಬಿಗೇರ, ಚಿನ್ನು ಅಂಬಿ, ಸಿದ್ದು ಕೊಣ್ಣೂರ, ಮಲ್ಲಪ್ಪ ಸಿಂಗಾಡೆ, ಲಕ್ಷ್ಮಣ್ ದೇಸರಟ್ಟಿ, ಮಹಾದೇವ ಪಾಟೀಲ, ರವಿ ಯಡಹಳ್ಳಿ, ಮಹೇಶ್ ಕೋಳಿ, ಭೀಮನಗೌಡ ಪಾಟೀಲ, ವೆಂಕಣ್ಣ ಹುಣಸಿಕಟ್ಟಿ,ಪ್ರಭು ಹಳ್ಳೂರ, ರೇಖಾ ಪಾಟೀಲ, ಲಕ್ಷ್ಮಿ ಡೋಣಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-19-1566109957

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.