ಮುಧೋಳ: ತಾಲ್ಲೂಕಿನ ವಜ್ಜರಮಟ್ಟಿಯ ಇಬ್ಬರು ಯುವಕರು ಕೇವಲ 22 ದಿನಗಳಲ್ಲಿ ಬೈಕ್ ಮೂಲಕ ಸುಮಾರು ಏಳುಸಾವಿರ ಕಿ.ಮೀ. ಕ್ರಮಿಸಿ ನೇಪಾಳದವರೆಗೂ ಪ್ರಯಾಣ ಮಾಡಿದ್ದು, ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ತಾಲ್ಲೂಕಿನ ವಜ್ಜರಮಟ್ಟಿ ಗ್ರಾಮದ 36 ವರ್ಷದ ಬಸವರಾಜ ಹಂಚಿನಾಳ ಮತ್ತು ಅವರಿಗೆ ಸಾಥ್ ನೀಡಿದ 26 ವರ್ಷದ ಭೀಮಶಿ ಕುಟೇರ ಈ ಸಾಹಸದ ರೂವಾರಿಗಳು. ಬಸವರಾಜ, ವೃತ್ತಿಯಿಂದ ಕೃಷಿಕರಾಗಿದ್ದು, ಭೀಮಶಿ ಮುಧೋಳದ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಪ್ರವಾಸದ ಹವ್ಯಾಸ ಬೆಳೆಸಿಕೊಂಡಿರುವ ಬಸವರಾಜ ಅವರಿಗೆ ಏನಾದರೂ ವಿಭಿನ್ನವಾಗಿ ಸಾಧಿಸಬೇಕು ಎಂಬ ಹಂಬಲ ಈ ಯಾತ್ರೆಗೆ ಪ್ರೇರಣೆಯಾಯಿತು.

ಏ.15 ರಂದು ವಜ್ಜರಮಟ್ಟಿಯಿಂದ ಆರಂಭವಾದ ಈ ಯಾತ್ರೆ ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಪ್ರದೇಶಗಳ ಮೂಲಕ ಸಾಗಿ ನೇಪಾಳವನ್ನು ತಲುಪಿತು. ದಾರಿಯುದ್ದಕ್ಕೂ ತುಳಜಾಪುರ ಅಂಬಾಭವಾನಿ, ನರ್ಮದಾ ಘಾಟ್, ಪ್ರಯಾಗರಾಜ್, ಅಯೋಧ್ಯೆ ಸೇರಿದಂತೆ ಹಲವು ಧಾರ್ಮಿಕ ಮತ್ತು ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದರು. ನೇಪಾಳದಲ್ಲಿ ಬುದ್ಧನ ಜನ್ಮಸ್ಥಳ ಲುಂಬಿನಿ, ಕಠ್ಮಂಡು, ಮುಕ್ತಿನಾಥ ಮತ್ತು ಭಾರತ-ಚೀನಾ ಗಡಿ ಭಾಗದ ಹಿಮಾಲಯ ಶ್ರೇಣಿಗಳವರೆಗೆ ತಮ್ಮ ಬೈಕ್ ಸವಾರಿ ನಡೆಸಿದ್ದಾರೆ.

‘ಈಗಾಗಲೇ ದೇಶದ ಬಹುತೇಕ ಭಾಗಗಳನ್ನು ಬಸ್ ಮತ್ತು ವಿಮಾನದ ಮೂಲಕ ಸುತ್ತಿದ್ದರೂ, ಬೈಕ್ ಮೇಲೆ ನೇಪಾಳಕ್ಕೆ ಹೋಗಬೇಕೆಂಬುದು ಒಂದು ವಿಶೇಷ ಯೋಜನೆಯಾಗಿತ್ತು ಎಂದು ಬಸವರಾಜ ತಿಳಿಸಿದ್ದಾರೆ.

ಬೇಸಿಗೆಯ ಕಡು ಬಿಸಿಲು, ಹಿಮಾಲಯದ ಕೊರೆಯುವ ಚಳಿ ಮತ್ತು ಅನಿರೀಕ್ಷಿತ ಮಳೆ ಎದುರಿಸಿ ಅಂದಾಜು ₹65 ಸಾವಿರ ವೆಚ್ಚದಲ್ಲಿ ಈ ಪ್ರವಾಸವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಈ ಯುವ ಸಾಧಕರನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-19-679349371

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.