ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಪ್ಪ ಪೂಜಾರಿ ಕೊಲೆ: ಇಬ್ಬರಿಗೆ ಜೀವಾವಧಿ ಶಿಕ್ಷೆ

Published : 31 ಆಗಸ್ಟ್ 2024, 16:09 IST
Last Updated : 31 ಆಗಸ್ಟ್ 2024, 16:09 IST
ಫಾಲೋ ಮಾಡಿ
Comments

ಬಾಗಲಕೋಟೆ: ವಾಲ್ಮೀಕಿ ಜಯಂತಿ ಮೆರವಣಿಗೆ ಸಂದರ್ಭದಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯಾಗಿದೆ.

ತಾಲ್ಲೂಕಿನ ಬೇವೂರ ಗ್ರಾಮದಲ್ಲಿ ಮೆರವಣಿಗೆ ವೇಳೆ ಕಾಲು ತುಳಿದರೆಂದು ಶೇಖರಪ್ಪ ಪೂಜಾರಿ ಮನೆಯವರು ಹಾಗೂ ಶಿವಪ್ಪ ಪೂಜಾರಿಯವರ ಮನೆಯವರ ನಡುವೆ ಜಗಳವಾಗಿತ್ತು.

ಮರು ದಿನ ಶಿವಪ್ಪ ಪೂಜಾರಿ ಕೆಎಸ್‌ಆರ್‌ಟಿಸಿಯಲ್ಲಿನ ಕರ್ತವ್ಯ ಮುಗಿಸಿಕೊಂಡು ಶೇಖರಪ್ಪ ಪೂಜಾರಿ ಮನೆ ಮುಂದೆ ಹಾದು ಹೋಗವಾಗ, ನಿಮ್ಮ ಅಳಿಯನಿಗೆ ಬುದ್ಧಿ ಹೇಳುವಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿತ್ತು.

ಶಿವಪ್ಪ ಪೂಜಾರಿ ಮೇಲೆ ಶೇಖರಪ್ಪ ಪೂಜಾರಿ, ಗ್ಯಾನಪ್ಪ ಪೂಜಾರಿ ಕುಡಗೋಲಿನಿಂದ ಹಲ್ಲೆ ಮಾಡಿದಾಗ ಶಿವಪ್ಪ ಮೃತರಾಗಿದ್ದರು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್‌.ವಿ. ವಿಜಯ್, ಅಪರಾಧಿಗಳಾದ ಶೇಖರಪ್ಪ ಪೂಜಾರಿ, ಗ್ಯಾನಪ್ಪ ಪೂಜಾರಿಗೆ ಜೀವಾವಧಿ ಶಿಕ್ಷೆ, ₹10 ಸಾವಿರ ದಂಡ ವಿಧಿಸಿದ್ದಾರೆ. ಹಾಗೆಯೇ ಮೃತನ ಹೆಂಡತಿ ಮಹಾದೇವಿ ಪೂಜಾರಿ ಅವರಿಗೆ ತಲಾ ₹25 ಸಾವಿರ ಪರಿಹಾರ ನೀಡಬೇಕು ಎಂದು ತೀರ್ಪು ನೀಡಿದ್ದಾರೆ. ಪ್ರಧಾನ ಸರ್ಕಾರಿ ಅಭಿಯೋಜಕ ವಿ.ಜಿ. ಹೆಬಸೂರ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT