ಬೀಳಗಿ: ಸಮೀಪದ ನಾಗರಾಳ ಗ್ರಾಮದಲ್ಲಿ ಭಾನುವಾರ ಹಾಲೋಕಳಿಯು ಅದ್ದೂರಿಯಾಗಿ ನೆರವೇರಿತು.

ಕಪ್ಪರಪಡಿಯಮ್ಮ ದೇವಿಯ ಜಾತ್ರೋತ್ಸವದ ಅಂಗವಾಗಿ ಏರ್ಪಡಿಸಿದ್ದ ಹಾಲೋಕಳಿ ನೋಡಲು ಸೇರಿದ ಸಾವಿರಾರು ಜನರು ಗಂಜಿ ಹಚ್ಚಿದ ಕಂಬವನ್ನು ಏರುತ್ತಿರುವ ಯುವಕರ ಮೋಜು ಮಸ್ತಿಯನ್ನು ಕಂಡು ಸಂಭ್ರಮಿಸಿದರು.

ಸಂಜೆ 5.30ಕ್ಕೆ ಪ್ರಾರಂಭವಾದ ಹಾಲೋಕಳಿಯು ಈ ಕಂಬವನ್ನು ಮೇಲೆರಲು ಯುವಕರು ತಾಮುಂದು ನಾಮುಂದು ಎಂದು ಹಾತೊರೆಯುತ್ತಿರುವ ದೃಶ್ಯ ಹಾಲೋಕಳಿ ನೋಡಲು ಸೇರಿದ ಸಹಸ್ರಾರು ಜನರ ಕಣ್ಮನ ಸೆಳೆದವು.

ಪೀಠಾಧಿಪತಿ ಶೇಷಪ್ಪಯ್ಯ ಸ್ವಾಮೀಜಿ, ನಿಯೋಜಿತ ಶ್ರೀಗಳಾದ ನಿಂಗಪ್ಪಯ್ಯ ಸ್ವಾಮೀಜಿ, ಸಿದ್ದಾಪುರ ಹುಚ್ಚಪ್ಪಯ್ಯ ಸ್ವಾಮೀಜಿ ಅವರು ಹಾಲೋಕಳಿ ಕಂಬದ ಎದುರು ನಿರ್ಮಿಸಿದ ವೇದಿಕೆ ಮೇಲೆ ಕುಳಿತು ತದೇಕಚಿತ್ತದಿಂದ ಹಾಲೋಕಳಿ ವೀಕ್ಷಿಸಿದರು.

ಜಾತ್ರಾ ಕಮಿಟಿಯ ರಾಜೇಂದ್ರ ದೇಶಪಾಂಡೆ ,ಪಿತಾಂಬ್ರೆಪ್ಪ ಕೋಲಾರ,ಹುಚ್ಚಪ್ಪ ಗಾಣಿಗೇರ, ವಿಠ್ಠಲ ತಿರಕನ್ನವರ,ಬುಡ್ಡೆಸಾಬ ತಹಶಿಲ್ದಾರ್, ಶರಣಪ್ಪ ಕುಂಬಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-19-178189155

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.