ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಕಲ್: ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿನಿಯರಿಂದ ನಮಾಜ್, ವರದಿ ಕೇಳಿದ ಡಿಡಿಪಿಐ

ಇಳಕಲ್‌ ಪಟ್ಟಣದ ಮೌಲಾನ ಆಜಾದ್ ಶಾಲೆ: ವರದಿ ಕೇಳಿದ ಡಿಡಿಪಿಐ
Last Updated 11 ಫೆಬ್ರುವರಿ 2022, 16:23 IST
ಅಕ್ಷರ ಗಾತ್ರ

ಬಾಗಲಕೋಟೆ: ಇಳಕಲ್ ನಗರದ ಮೌಲಾನ ಅಬುಲ್‌ ಕಲಾಂ ಆಜಾದ್ ಸರ್ಕಾರಿ ಆಂಗ್ಲ ಮಾಧ್ಯಮ ಮಾದರಿ ಶಾಲೆಯಲ್ಲಿ ಶುಕ್ರವಾರ ಆರು ಮಂದಿವಿದ್ಯಾರ್ಥಿನಿಯರು ನಮಾಜ್ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

‘ಸರ್ಕಾರಿ ಶಾಲೆಯ ಆವರಣದಲ್ಲಿ ಆಟದ ಹೊತ್ತಿನಲ್ಲಿ ಮಕ್ಕಳು ನಮಾಜ್ ಮಾಡಿರುವುದನ್ನು ವಿಡಿಯೊ ಮಾಡಿರುವ ಸಾರ್ವಜನಿಕರು ಅದನ್ನು ಇಳಕಲ್ ಕ್ಷೇತ್ರ ಶಿಕ್ಷಣಾಧಿಕಾರಿಗೆ ಕಳುಹಿಸಿದ್ದಾರೆ. ಆ ಬಗ್ಗೆ ಬಿಇಒ ನನಗೆ ಮಾಹಿತಿ ನೀಡಿದ್ದಾರೆ. ಅವರಿಂದ ವರದಿ ಕೇಳಿದ್ದೇನೆ. ನಂತರ ಕ್ರಮ ಕೈಗೊಳ್ಳುವೆ’ ಎಂದು ಡಿಡಿಪಿಐ ಶ್ರೀಶೈಲ ಬಿರಾದಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದಾರೆ.

‘ಶಾಲೆಯಲ್ಲಿ ಒಟ್ಟು 232 ವಿದ್ಯಾರ್ಥಿಗಳು ಇದ್ದಾರೆ. ನಮ್ಮ ಗಮನಕ್ಕೆ ಬಾರದೇ ಇದು ನಡೆದಿದೆ. ಇನ್ನು ಮುಂದೆ ಮರುಕಳಿಸದಂತೆ ನೋಡಿಕೊಳ್ಳುವೆ’ ಎಂದು ಶಾಲೆಯ ಪ್ರಭಾರ ಶಿಕ್ಷಕಿ ಎಚ್.ವೈ.ಕಾರಕೂರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT