ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಿರಾಣಿ ಸಮೂಹ: ಸಕ್ಕರೆ ಉತ್ಪಾದನೆಯಲ್ಲಿ ನಂ.1 ಗುರಿ

ವಿಶಾಲ ಸೌಹಾರ್ಧ ಪತ್ತಿನ ಸಹಕಾರಿ ಬ್ಯಾಂಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುರುಗೇಶ ನಿರಾಣಿ ಹೇಳಿಕೆ
Published : 30 ಜುಲೈ 2023, 15:33 IST
Last Updated : 30 ಜುಲೈ 2023, 15:33 IST
ಫಾಲೋ ಮಾಡಿ
Comments

ಬಾಗಲಕೋಟೆ: ‘ಮುಂದಿನ ಎರಡು ವರ್ಷಗಳಲ್ಲಿ ನಿರಾಣಿ ಸಮೂಹವು ಸಕ್ಕರೆ ಉತ್ಪಾದನೆಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆಯಲಿದೆ. ಎಥಿನಾಲ್ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ನಂ.1 ಸ್ಥಾನಕ್ಕೇರಲಿದೆ’ ಎಂದು ಉದ್ಯಮಿ, ಮಾಜಿ ಸಚಿವ ಮುರುಗೇಶ ನಿರಾಣಿ ಭರವಸೆ ವ್ಯಕ್ತಪಡಿಸಿದರು.

ಇಲ್ಲಿನ ನವನಗರದಲ್ಲಿ ಆರಂಭಗೊಂಡ ವಿಶಾಲ(ಎಂಆರ್‌ಎನ್) ಸೌಹಾರ್ಧ ಪತ್ತಿನ ಸಹಕಾರಿ ಬ್ಯಾಂಕ್ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ನಿರಾಣಿ ಸಮೂಹದ ಸಕ್ಕರೆ ಕಾರ್ಖಾನೆಗಳಲ್ಲಿ ಪ್ರತಿದಿನ 81 ಸಾವಿರ ಟನ್ ಸಕ್ಕರೆ ಹಾಗೂ 28 ಲಕ್ಷ ಲೀಟರ್ ಎಥಿನಾಲ್ ಉತ್ಪಾದನೆಯಾಗುತ್ತಿದೆ. ಮುಂದಿನ ವರ್ಷ 51 ಲಕ್ಷ ಲೀಟರ್ ಎಥಿನಾಲ್ ಉತ್ಪಾದನೆಯ ಗುರಿ ಹೊಂದಲಾಗಿದೆ’ ಎಂದು ತಿಳಿಸಿದರು.

ಶಾಸಕ ಎಚ್.ವೈ.ಮೇಟಿ ಮಾತನಾಡಿ, ಸಹಕಾರಿ ಬ್ಯಾಂಕ್‌ಗಳು ಆಪತ್ಕಾಲದಲ್ಲಿ ಸಾಲದ ನೆರವು ನೀಡುತ್ತವೆ. ಅದನ್ನು ಸದುಪಯೋಗ ಮಾಡಿಕೊಳ್ಳಬೇಕು. ನಿಗದಿತ ಸಮಯಕ್ಕೆ ಸಾಲ ಮರುಪಾವತಿಸಬೇಕು’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ನಿರಾಣಿ ಸಮೂಹವು ಹಲವು ಉದ್ದಿಮೆಗಳ ಮೂಲಕ 72 ಸಾವಿರ ಜನರಿಗೆ ಉದ್ಯೋಗ ನೀಡಿರುವುದು ಸ್ವಾಗತಾರ್ಹ. ಅವರ ಪರಿಶ್ರಮಕ್ಕೆ ಇನ್ನಷ್ಟು ಶಕ್ತಿ ದೊರೆಯಲಿ. ಜನರಿಗೆ ಹೆಚ್ಚು ಉದ್ಯೋಗ ಸಿಗುವಂತಾಗಲಿ ಎಂದರು.

ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಅವರು ವಿಶಾಲ ಸೌಹಾರ್ದ ಬ್ಯಾಂಕಿನ ಬೆಳವಣಿಗೆ ಕುರಿತು ವಿವರಿಸಿದರು.

ಗದ್ದನಕೇರಿ ಮಳಿಪ್ಪಯ್ಯಮಠದ ಭಾಸ್ಕರ ಮಹಾಪುರುಷರು, ಟೆಂಗಿನಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಕುಮಾರ ಯಳ್ಳಿಗುತ್ತಿ, ಸಂತೋಷ ಹೊಕ್ರಾಣಿ, ಲಕ್ಷ್ಮೀನಾರಾಯಣ ಕಾಸಟ, ಆರ್.ಆರ್.ನಾಯಕ, ಹೂವಪ್ಪ ರಾಠೋಡ, ಬಸವರಾಜ ಖೋತ, ಜೆ.ಬಿ.ಬೂದಿಹಾಳ, ನಗರಸಭೆ ಮಾಜಿ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಸವಿತಾ ಲೆಂಕೆಣ್ಣವರ, ರವಿ ಪಟ್ಟಣದ ಇದ್ದರು.

Quote - ನಿರಾಣಿ ಸಮೂಹದ ವಿಜಯ ಸೌಹಾರ್ದ ಬ್ಯಾಂಕ್ ಸಾಕಷ್ಟು ಪ್ರಗತಿ ಸಾಧಿಸಿದ್ದು ಅದೇ ಹಾದಿಯಲ್ಲಿ ವಿಶಾಲ ಸೌಹಾರ್ದ ಬ್ಯಾಂಕ್ ಕೂಡ ಹೆಜ್ಜೆ ಇಡುತ್ತಿದೆ –ಮುರುಗೇಶ ನಿರಾಣಿ ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT