ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ | ಮತ್ತೆ 106 ಮಂದಿಗೆ ಕೋವಿಡ್ ಸೋಂಕು ದೃಢ

Last Updated 23 ಜುಲೈ 2020, 14:49 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯಲ್ಲಿ ಗುರುವಾರ ಹೊಸದಾಗಿ 106 ಕೊರೊನಾ ಪ್ರಕರಣ ದೃಢಪಟ್ಟಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು 984 ಕೊವಿಡ್ ಪ್ರಕರಣ ದೃಢಪಟ್ಟಿವೆ. 457 ಜನ ಗುಣಮುಖರಾಗಿದ್ದಾರೆ. 491 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಹೊಸದಾಗಿ ದೃಢಪಟ್ಟ ಸೋಂಕಿತರ ಪೈಕಿ ಬಾಗಲಕೋಟೆ ತಾಲ್ಲೂಕಿನಲ್ಲಿ 42, ಬಾದಾಮಿ ಹಾಗೂ ಬೀಳಗಿ ತಲಾ ಐದು, ಜಮಖಂಡಿ 23, ಹುನಗುಂದ 10, ಮುಧೋಳ 21 ಪ್ರಕರಣ ವರದಿಯಾಗಿವೆ. ಬಾಗಲಕೋಟೆಯ ನವನಗರದಲ್ಲಿ 22, ವಿದ್ಯಾಗಿರಿಯಲ್ಲಿ ಆರು, ಹಳೇ ಬಾಗಲಕೋಟೆ 9, ಗದ್ದನಕೇರಿಯಲ್ಲಿ ಮೂರು ಹಾಗೂ ಸುನಗ ಲಂಬಾಣಿ ತಾಂಡಾ ಮತ್ತು ಹವೇಲಿಯಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿವೆ. ನವನಗರದಲ್ಲಿ ಪೊಲೀಸ್ ಸಿಬ್ಬಂದಿಗೆ ಸೋಂಕು ತಗುಲಿದೆ.

ಜಮಖಂಡಿ ತಾಲ್ಲೂಕಿನಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಹಾಗೂ ಆಕ್ಸಿಸ್ ಬ್ಯಾಂಕ್ ಸಿಬ್ಬಂದಿ ಸೇರಿ 23 ಜನರಿಗೆ ಸೋಂಕು ತಗುಲಿದೆ. ಹುನಗುಂದ ತಾಲ್ಲೂಕಿನ ಕಮತಗಿ ಪಟ್ಟಣ ಪಂಚಾಯ್ತಿಯ ಇಬ್ಬರು ಸಿಬ್ಬಂದಿ ಸೇರಿ 10 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಗುರುವಾರ ಪತ್ತೆಯಾದ 106 ಪ್ರಕರಣಗಳಲ್ಲಿ 44 ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದ ಕೂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT