ಬುಧವಾರ, ಅಕ್ಟೋಬರ್ 28, 2020
29 °C

ಮುಧೋಳ: ₹17 ಲಕ್ಷಕ್ಕೆ ಮಾರಾಟವಾದ ಜೋಡೆತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಮುಧೋಳ ತಾಲ್ಲೂಕು ಮಹಾಲಿಂಗಪುರ ಸಮೀಪದ ನಂದಗಾಂವ ಗ್ರಾಮದ ರೈತ ಸಂಗಪ್ಪ ಭೀಮಪ್ಪ ಮುಗಳಖೋಡ ಅವರ ಜೋಡೆತ್ತು ₹17 ಲಕ್ಷಕ್ಕೆ ಮಾರಾಟವಾಗಿವೆ.

ಈ ಜೋಡೆತ್ತು 2018 ರಲ್ಲಿ ಅಕ್ಕಿಮರಡಿಯ ರೈತ ಮಲ್ಲಪ್ಪ ಈರಪ್ಪ ಬೋರಡ್ಡಿ ಅವರಿಂದ ₹8 ಲಕ್ಷಕ್ಕೆ ಖರೀದಿಸಿದ್ದ ಸಂಗಪ್ಪ ಅವುಗಳನ್ನು ಚೆನ್ನಾಗಿ ಮೇಯಿಸಿ ಬಹು ಪ್ರೀತಿಯಿಂದ ನೋಡಿಕೊಂಡರು. ಈ ಜೋಡೆತ್ತುಗಳು ಬಾಗಲಕೋಟೆ, ವಿಜಯಪುರ, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ 50ಕ್ಕೂ ಹೆಚ್ಚು ಕಡೆ 48 ತೆರೆಬಂಡಿ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ₹9 ಲಕ್ಷ ಆದಾಯ ತಂದುಕೊಟ್ಟಿವೆ.

‘ಈ ಎರಡೂ ಎತ್ತುಗಳಿಗೆ ರಾಮ-ಲಕ್ಷ್ಮಣ ಎಂದು ಹೆಸರಿಟ್ಟಿದ್ದು, ಮನೆಯ ಮಕ್ಕಳಂತೆ ಸಲುಹಿದ್ದೇನೆ. ಹಲವು ಕಡೆ ತೆರೆಬಂಡಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ತಂದುಕೊಟ್ಟಿವೆ. ಈಗ ನಾನು ಮನೆ ಕಟ್ಟಿಸುತ್ತಿದ್ದು ಹಣದ ಅವಶ್ಯಕತೆ ಇರುವುದರಿಂದ ಅವುಗಳನ್ನು ಮೂಲ ಮಾಲೀಕನಿಗೆ ಮಾರಾಟ ಮಾಡಿದ್ದೇನೆ’ ಎಂದು ಸಂಗಪ್ಪ ಮುಗಳಖೋಡ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.