ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಕರ್‌ಗೆ ಭಾರತ ರತ್ನ; ವಿರೋಧ ಸರಿಯಲ್ಲ: ವಿಶ್ವೇಶತೀರ್ಥ ಸ್ವಾಮೀಜಿ

Last Updated 20 ಅಕ್ಟೋಬರ್ 2019, 11:26 IST
ಅಕ್ಷರ ಗಾತ್ರ

ಬಾಗಲಕೋಟೆ: ‘ವಿವಾದಾಸ್ಪದ ಕೆಲಸಗಳನ್ನು ಮಾಡಿದ ಟಿಪ್ಪು ಸುಲ್ತಾನ್‌ಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗೌರವ ಕೊಡ್ತಾರೆ, ವೀರ ಸಾವರ್ಕರ್‌ಗೆ ಭಾರತ ರತ್ನ ಪ್ರಶಸ್ತಿ ಕೊಡೋದಕ್ಕೆ ವಿರೊಧಿಸುತ್ತಾರೆ. ಅದು ಸರಿಯಲ್ಲ‘ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಹಾತ್ಮ ಗಾಂಧಿ ಹತ್ಯೆ ಪ್ರಕರಣದಲ್ಲಿ ವೀರ ಸಾರ್ವಕರ್ ಅಪರಾಧಿ ಎಂದು ಅಂದಿನ ಸರ್ಕಾರವಾಗಲಿ, ನ್ಯಾಯಾಲಯವಾಗಲಿ ಎಲ್ಲಿಯೂ ಹೇಳಿಲ್ಲ. ಹಾಗಿದ್ದರೆ ಅವರಿಗೆ ನ್ಯಾಯಾಲಯ ಶಿಕ್ಷೆ ನೀಡಬೇಕಿತ್ತು‘ ಎಂದರು.

‘ಗಾಂಧಿ ಹತ್ಯೆಯಲ್ಲಿಆರ್‌ಎಸ್‌ಎಸ್ ಹಾಗೂ ಸಾವರ್ಕರ್ ಕೈವಾಡ ಇತ್ತು ಎಂದು ಹೇಳೋದು ಸರಿಯಲ್ಲ. ಸಾರ್ವಕರ್ ಅವರಿಂದ ಸ್ವಾತಂತ್ರ್ಯ ಹೋರಾಟಕ್ಕೆ ಖಂಡಿತವಾಗಿಯೂ ಬಲಬಂದಿತ್ತು. ಅವರೊಬ್ಬ ಅಪ್ರತಿಮ ದೇಶಭಕ್ತ‘ ಎಂದು ಬಣ್ಣಿಸಿದರು.

‘ರಾಮಜನ್ಮಭೂಮಿ ವಿವಾದ ನ್ಯಾಯಾಲಯದ ಹೊರಗೆ ಸಂಧಾನದ ಮೂಲಕ ಇತ್ಯರ್ಥವಾದರೆ ಒಳ್ಳೆಯದು. ಹಿಂದೂ–ಮುಸ್ಲಿಮರ ನಡುವೆ ಪ್ರೀತಿ ಬೆಳೆಯುತ್ತೆ. ತೀರ್ಪು ಬಂದರೆ ಮಾನಸಿಕ ಘರ್ಷಣೆಗೆ ಕಾರಣವಾಗುತ್ತದೆ. ಕೋರ್ಟ್ ತೀರ್ಪಿನಿಂದ ಗೆದ್ದೆ, ಸೋತೆ ಅನ್ನೋ ಭಾವನೆ ಬರುತ್ತದೆ‘ ಎಂದು ಹೇಳಿದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT