ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಕೆಪಿಎಸ್‌ಗೆ ₹60 ಲಕ್ಷ ಲಾಭ

ಗ್ರಾಹಕರ ಸಹಕಾರ ಅಭಿವೃದ್ಧಿಗೆ ಕಾರಣ: ವಿಜಯ ಶಿರಗಾಂವಿ
Last Updated 27 ಆಗಸ್ಟ್ 2022, 1:51 IST
ಅಕ್ಷರ ಗಾತ್ರ

ತೇರದಾಳ: ಗ್ರಾಹಕರ ಸಹಕಾರ ಇದ್ದಾಗ ಮಾತ್ರ ಸಹಕಾರಿ ಕ್ಷೇತ್ರದಲ್ಲಿ ಬ್ಯಾಂಕುಗಳು ಸಾಧನೆ ಮಾಡಲು ಸಾಧ್ಯ. ಅಂತಹ ಸಹಕಾರ ನಮ್ಮ ಬ್ಯಾಂಕಿನ ಪ್ರತಿಯೊಬ್ಬ ಗ್ರಾಹಕರು ನೀಡಿದ್ದಾರೆಂದು ಪಟ್ಟಣದ ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ವಿಜಯ ಶಿರಗಾಂವಿ ಹೇಳಿದರು.

ಬ್ಯಾಂಕಿನ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2021-22ನೇ ಸಾಲಿಗೆ ಬ್ಯಾಂಕ್ ₹ 60 ಲಕ್ಷ ಲಾಭ ಹೊಂದಿದ್ದು, ಗ್ರಾಹಕರಿಗೆ ಶೇಕಡಾ 11ರಷ್ಟು ಲಾಭಾಂಶ ನೀಡಲು ಕ್ರಮ ಕೈಗೊಳ್ಳಲಾಗಿದೆ. ₹ 9.72 ಕೋಟಿ ಕೃಷಿ ಸಾಲ ಹಾಗೂ ₹ 4.85 ಕೋಟಿ ಕೃಷಿಯೇತರ ಸಾಲ ವಿತರಣೆ ಮಾಡಲಾಗಿದ್ದು, ಸಾಲ ಪಡೆದುಕೊಂಡ ರೈತರು ಹಾಗೂ ಇನ್ನಿತರ ಗ್ರಾಹಕರು ಸಕಾಲಕ್ಕೆ ಸಾಲ ಮರುಪಾವತಿಸುವ ಮೂಲಕ ಬ್ಯಾಂಕಿನ ಏಳಿಗೆಗೆ ಮುಂದಾಗಬೇಕೆಂದು ಕರೆ ನೀಡಿದರು.

ಬ್ಯಾಂಕಿನ ಕಾರ್ಯದರ್ಶಿ ಮಹಾವೀರ ಸನಾಳ ಪ್ರಾಸ್ತಾವಿಕವಾಗಿ ಮಾತನಾಡಿ, ವರದಿ ವಾಚನ ಮಾಡಿದರು. ಉಪಾಧ್ಯಕ್ಷೆ ಶಾಂತವ್ವ ಹಟ್ಟಿ, ನಿರ್ದೇಶಕರಾದ ಜಿನ್ನಪ್ಪ ಸವದತ್ತಿ, ಪದ್ಮರಾಜ ಆಲಗೂರ, ಅಶೋಕ ಆಳಗೊಂಡ, ಸುನೀಲ ಆಳಗೊಂಡ, ಬಾಹುಬಲಿ ಗರಗಟ್ಟಿ, ಸುಭಾಸ ಗಾತಾಡೆ, ಸಾವಿತ್ರಿ ಮಾಟ, ಶೋಭಾ ಕೊಕಟನೂರ, ಲಕ್ಷ್ಮಣ ನಾಯಕ, ದೊಂಡಿಬಾ ಕೊಡತೆ, ಎಸ್.ಎಂ. ಶಿರೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT