ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಲ್ವ ವೃಕ್ಷ ಆರೋಗ್ಯ ರಕ್ಷಣೆಗೂ ಸಹಕಾರಿ’

Last Updated 24 ಜುಲೈ 2022, 11:17 IST
ಅಕ್ಷರ ಗಾತ್ರ

ಚಿಟಗುಪ್ಪ: ‘ಆರೋಗ್ಯ ಸಂರಕ್ಷಣಾ ಕಾರ್ಯದಲ್ಲಿ ಬಿಲ್ವ ವೃಕ್ಷ ಮಹತ್ವದ ಪಾತ್ರ ವಹಿಸುತ್ತದೆ’ ಎಂದು ಪರಿಸರ ಪ್ರೇಮಿ ಶೈಲೇಂದ್ರ ಕಾವಡಿ ಹೇಳಿದರು.

ಕೋಟಿ ವೃಕ್ಷ ಆಂದೋಲನದ ಅಂಗವಾಗಿ ತಾಲ್ಲೂಕಿನ ಮಿನಕೇರಾ ಗ್ರಾಮದ ವೀರಭದ್ರಪ್ಪ ಗ್ಯಾನಪ್ಪನೋರ್‌ ಅವರ ತೋಟದಲ್ಲಿ ಬಿಲ್ವ ಸಸಿ ನೆಟ್ಟು ಮಾತನಾಡಿ,‘ಬಿಲ್ವ ವೃಕ್ಷಕ್ಕೆ ಧಾರ್ಮಿಕವಾಗಿಯೂ ಮಹತ್ವದ ಸ್ಥಾನವಿದೆ. ಬಿಲ್ವದ ಎಲೆ, ಬೇರು ಹಾಗೂ ಹಣ್ಣು ಅಜೀರ್ಣ, ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಸಹಕಾರಿ. ಅಲ್ಲದೆ, ಇದು ರೋಗ ನಿರೋಧಕ ಶಕ್ತಿ ವೃದ್ಧಿಗೆ ಪೂರಕ’ ಎಂದು ಮಾಹಿತಿ ನೀಡಿದರು.

ವೀರಭದ್ರಪ್ಪ ಗ್ಯಾನಪನೋರ್‌ ಮಾತನಾಡಿದರು.

ಶರಣು, ವಿನೋದ್., ಕವಿತಾ, ದೇವಿಂದ್ರಪ್ಪ ಪಂಚಾಳ, ಜಗದೀಶ, ಭಾಗ್ಯಶ್ರೀ, ಸದಾಶಿವಯ್ಯ ನಾಶಿ, ರಾಚೋಟೇಶ್ವರ ದೇಗುಲ ಅಧ್ಯಕ್ಷ ಬಸವರಾಜ ರೊಡ್ಡ, ವೀರಶೆಟ್ಟಿ ಚಾಂಗಲೇರಾ, ಮಾಣಿಕ ಚಿಂಚೋಳಿ ಹಾಗೂ ವಿಶ್ವನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT