ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಕರ್ಯಕ್ಕೆ ಹಣದ ಹೊಳೆ

Last Updated 1 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಮೂಲಸೌಕರ್ಯ ವಲಯಕ್ಕೆ ₹ 5.97 ಲಕ್ಷ ಕೋಟಿ ನೀಡಲಾಗಿದ್ದು, ಇದು ಈವರೆಗಿನ ಗರಿಷ್ಠ ಅನುದಾನ ಎನಿಸಿಕೊಂಡಿದೆ. 2017–18ರ ಆರ್ಥಿಕ ವರ್ಷದಲ್ಲಿ 4.94 ಲಕ್ಷ ಕೋಟಿ ಮೀಸಲಿಡಲಾಗಿತ್ತು.

‘ಮೂಲಸೌಕರ್ಯವು ಆರ್ಥಿಕತೆಯ ಚಾಲಕಶಕ್ತಿ. ನಮ್ಮ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ ಬೆಳವಣಿಗೆಗೆ ಮೂಲಸೌಕರ್ಯ ವಲಯದಲ್ಲಿ ₹ 50 ಲಕ್ಷ ಕೋಟಿ ಹೂಡಿಕೆ ಅಗತ್ಯವಿದೆ’ ಎಂದು ಬಜೆಟ್ ಭಾಷಣ ಅಭಿಪ್ರಾಯಪಟ್ಟಿದೆ.

ಮೂಲಸೌಕರ್ಯ ಅಭಿವೃದ್ಧಿಗೆ ನೀಡಲಾದ ಗುರಿಯಲ್ಲಿ ಎಷ್ಟು ಸಾಧಿಸಲಾಗಿದೆ ಎಂಬುದನ್ನು ನೇರವಾಗಿ ನಿಯಮಿತವಾಗಿ ಪ್ರಧಾನಿಯೇ ಪರಿಶೀಲಿಸುತ್ತಾರೆ. ‘ಭಾರತ್ ಮಾಲಾ’ ಯೋಜನೆ ಅಡಿಯಲ್ಲಿ ಒಟ್ಟು ₹ 5.35 ಲಕ್ಷ ಕೋಟಿ ವೆಚ್ಚದಲ್ಲಿ 35 ಸಾವಿರ ಕಿ.ಮೀ ಹೆದ್ದಾರಿ ನಿರ್ಮಾಣ ಕೈಗೊಂಡಿದ್ದು, ಈ ಪೈಕಿ ಮುಂದಿನ ವರ್ಷದಲ್ಲಿ 9 ಸಾವಿರ ಕಿ.ಮೀ ಹೆದ್ದಾರಿ ಪೂರ್ಣಗೊಳ್ಳಲಿದೆ.

ಸ್ಮಾರ್ಟ್ ಸಿಟಿ ಯೋಜನೆಗೆ 99 ನಗರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ₹ 2.04 ಲಕ್ಷ ಕೋಟಿ ಮೀಸಲಿಡಲಾಗಿದೆ. ₹ 2,350 ಕೋಟಿ ಮೌಲ್ಯದ ಕಾಮಗಾರಿ ಪೂರ್ಣಗೊಂಡಿದ್ದು, ₹ 28,850 ಕೋಟಿ ಮೌಲ್ಯದ ಕಾಮಗಾರಿ ಪ್ರಗತಿಯಲ್ಲಿದೆ.

ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ 10 ಪ್ರವಾಸಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT