ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಳಗೇರಿ ಕ್ರಾಸ್: ಹೆದ್ದಾರಿ ತಡೆದು ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

ಒಂದೂವರೆ ಗಂಟೆಗೂ ಹೆಚ್ಚು ಕಾಲ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ
Published 18 ಆಗಸ್ಟ್ 2024, 14:22 IST
Last Updated 18 ಆಗಸ್ಟ್ 2024, 14:22 IST
ಅಕ್ಷರ ಗಾತ್ರ

ಕುಳಗೇರಿ ಕ್ರಾಸ್: ಮುಡಾ ಹಗರಣಕ್ಕೆ ಸಂಬಂಧಿಸಿ ರಾಜ್ಯಪಾಲ ಥಾವರಚಂದ ಗೆಹ್ಲೋತ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಭಾನುವಾರ ಕಾಂಗ್ರೆಸ್ ಕಾರ್ಯಕರ್ತರು ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದ ಹುಬ್ಬಳ್ಳಿ–ಸೊಲ್ಲಾಪುರ ರಾಷ್ಟ್ರಿಯ ಹೆದ್ದಾರಿ– 218ರ ಸಂಚಾರ ತಡೆದು ಪ್ರತಿಭಟನೆ ಮಾಡಿದರು.

ಪ್ರತಿಭಟನೆಯಿಂದ ಹೆದ್ದಾರಿಯಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡು ದೂರದ ಊರಿಗೆ ಹೋಗುವ ವಾಹನ ಸವಾರರು ಹಾಗೂ ಪ್ರಯಾಣಿಕರಿಗೆ ತೊಂದರೆಯಾಯಿತು. ರೋಗಿಯನ್ನು ಕರೆದೊಯ್ಯುತ್ತಿದ್ದ 108 ಆಂಬುಲೆನ್ಸ್‌ ವಾಹನ ಸಂಚಾರಕ್ಕೂ ಅರ್ಧಗಂಟೆ ಕಾಲ ಸಮಸ್ಯೆ ಉಂಟಾಯಿತು. 1 ಕಿ.ಮೀವರೆಗೂ ವಾಹನಗಳು ಸಾಲಾಗಿ ನಿಂತಿದ್ದವು.

ಕಾಂಗ್ರೆಸ್‌ ಮುಖಂಡ ಹೊಳೆಬಸು ಶೆಟ್ಟರ, ಬಾದಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಯಕ್ಕಪ್ಪನವರ, ಮುಖಂಡರಾದ ಪಿ.ಆರ್.ಗೌಡರ, ಎಂ.ಬಿ. ಹಂಗ ರಗಿ, ಮಧು ಯಡ್ರಾಮಿ, ರಾಜಮಹಮ್ಮದ ಬಾಗವಾನ್, ಶಶಿ ಉದಗಟ್ಟಿ, ಬಸವರಾಜ ಬ್ಯಾಹಟ್ಟಿ, ಡಿ.ಎನ್.ಪಾಟೀಲ, ತುಕಾರಾಮ ಮಣ್ಣೂರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮುತ್ತಪ್ಪ ಗಾಜಿ, ಕರಿಗೌಡ ಮುಷ್ಟಿಗೇರಿ, ಶಂಕ್ರಪ್ಪ ಕಂಬಾರ, ಶೇಖಪ್ಪ ಪವಾಡಿನಾಯ್ಕರ, ಮುದಕಣ್ಣ ಹೆರಕಲ್, ಬಸವರಾಜ ಕಟ್ಟಿಕಾರ, ಭೀಮಸಿ ಹೊರ ಕೇರಿ, ಆಕಾಶ ಪಟ್ಟಣ ಶೆಟ್ಟಿ, ಸಕ್ರಪ್ಪ ಕಲ್ಲಾಪುರ, ಪಾಂಡು ಗಂಜಪ್ಪನವರ, ಮಂಜು ಹೊರಕೇರಿ, ಪ್ರಕಾಶ ಅಡಪಟ್ಟಿ, ನಾಗಪ್ಪ ಮಾದರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT