ರಬಕವಿ ಬನಹಟ್ಟಿ: ‘ಇಂದಿನ ದಿನಗಳಲ್ಲಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ರಿಯಲ್ ಎಸ್ಟೆಟ್ ವ್ಯವಹಾರದಿಂದಾಗಿ ಕೃಷಿ ಭೂಮಿ ಕಡಿಮೆ ಆಗುತ್ತಿರುವುದು ಕಳವಳಕಾರಿ’ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ಸಮೀಪದ ಜಗದಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ಬಾಗಲಕೋಟ ತೋಟಗಾರಿಕೆ ವಿಶ್ವ ವಿದ್ಯಾಲಯ, ಕೃಷಿ, ತೋಟಗಾರಿಕೆ ಮತ್ತು ಪಶು ಸಂಗೋಪನೆ ಇಲಾಖೆ ಹಾಗೂ ಜಗದಾಳ ಗ್ರಾಮದ ಸ್ವರ್ಣ ಭೂಮಿ ಸಾವಯವ ರೈತ ಉತ್ಪಾದಕ ಸಂಘದ ಆಶ್ರಯದಲ್ಲಿ ನಡೆದ ಉದ್ಯಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕೃಷಿಯಲ್ಲಿ ವೈಜ್ಞಾನಿಕತೆಯನ್ನು ಅಳವಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕು. ರಸಾಯನಿಕ ವಸ್ತುಗಳನ್ನು ಕೃಷಿಗಾಗಿ ಬಳಸುತ್ತಿರುವುದು ಒಳ್ಳೆಯದಲ್ಲ. ರೈತರು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಬೇಕು. ಸ್ವಾತಂತ್ರ್ಯ ನಂತರದಲ್ಲಿ ದೇಶದಲ್ಲಿ ಆಹಾರದ ಕೊರತೆ ಉಂಟಾಗಿತ್ತು’ ಎಂದು ತಿಳಿಸಿದರು.

ಬಾಗಲಕೋಟೆ ಜಂಟಿ ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಹಕಾಟೆ ಮಾತನಾಡಿ, ‘ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದರಿಂದ ರೈತರು ಸಾಕಷ್ಟು ಲಾಭ ಮಾಡಿಕೊಳ್ಳಬಹುದಾಗಿದೆ. ಕೃಷಿ ಅಭಿವೃದ್ಧಿಗಾಗಿ ಇಲಾಖೆ ಮತ್ತು ವಿಶ್ವವಿದ್ಯಾಲಯದ ಲಾಭ್ನು ಪಡೆದುಕೊಳ್ಳಬೇಕು’ ಎಂದರು.

ಜಿಲ್ಲಾ ಪಶು ಸಂಗೋಪನೆ ಉಪನಿರ್ದೇಶಕ ಡಾ.ಶಿವಾನಂದ ಕರಡಿಗುಡ್ಡ ಮಾತನಾಡಿ, ‘ರೈತರು ಪಶುಪಾಲನೆಯತ್ತ ಗಮನ ನೀಡಬೇಕು. ಜಾನುವಾರು ಆರೋಗ್ಯದತ್ತ ಗಮನ ನೀಡಬೇಕು’ ಎಂದರು.

ಮೂವತ್ತಕ್ಕೂ ಹೆಚ್ಚು ವ್ಯಾಪಾರ ಮಳಿಗೆಗಳನ್ನು ತೆರೆಯಲಾಗಿತ್ತು.

ಮರೆಗುದ್ದಿ ಅಡವಿಸಿದ್ಧೇಶ್ವರ ಮಠದ ಗುರುಪಾದ ಸ್ವಾಮೀಜಿ, ಪ್ರಭಾರ ಕುಲಪತಿ ತಮ್ಮಯ್ಯ ಎನ್., ವಿ.ವಿ ಡೀನ್ ಶಾಂತಪ್ಪ ತಿರಕನ್ನವರ, ಗ್ರಾಮೀಣ ತೋಟಗಾರಿಕೆ ಕಾರ್ಯಾನುಭವ ಶಿಬಿರದ ಸಂಯೋಜಕಿ ವಿಜಯಾ ಹೊಸಮನಿ, ಕೆ.ಎಸ್. ಅಗಸಿನಾಳ, ಪ್ರವೀಣಕುಮಾರ ನಾಯ್ಕೋಡಿ, ಫಕ್ರುದ್ದೀನ್, ರವೀಂದ್ರ ಜಾವಡಗಿ, ರೈತರಾದ ಸದಾಶಿವ ಬಂಗಿ, ದಾನಪ್ಪ ಆಸಂಗಿ, ಅಡಿವೆಪ್ಪಾ ಕಿತ್ತೂರ, ಧರೆಪ್ಪ ಉಳ್ಳಾಗಡ್ಡಿ, ಧರೆಪ್ಪ ಕಿತ್ತೂರ, ಧನಪಾಲ ಯಲ್ಲಟ್ಟಿ, ಶೇಖರ ನೀಲಕಂಠ, ಗಂಗಪ್ಪ ಉಳ್ಳಾಗಡ್ಡಿ, ಆನಂದ ಕಂಪು, ಕಾಡಪ್ಪ ಕಬಾಡಗಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-19-1640252103

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.