ರಬಕವಿ ಬನಹಟ್ಟಿ: ‘ರಬಕವಿ ಬನಹಟ್ಟಿ ಸಮೀಪದಲ್ಲಿ ಕೃಷ್ಣಾ ನದಿಗೆ ನಿರ್ಮಿಸುತ್ತಿರುವ ಮಹೀಷವಾಡಗಿ ಸೇತುವೆ ಕಾಮಗಾರಿ ನಿರ್ಮಾಣದಲ್ಲಿ ಕ್ಷೇತ್ರದ ಶಾಸಕ ಸಿದ್ದು ಸವದಿ ಅವರ ಕೊಡುಗೆ ಶೂನ್ಯ’ ಎಂದು ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ಆಕ್ರೋಶ ವ್ಯಕ್ತಪಡಿಸಿದರು.

ಸಮೀಪದ ಮಹೀಷವಾಡಗಿ ಸೇತುವೆ ಕಾಮಗಾರಿಯನ್ನು ಶುಕ್ರವಾರ ವೀಕ್ಷಿಸಿ ಮಾತನಾಡಿದ ಅವರು, ‘ಸೇತುವೆ ನಿರ್ಮಾಣ ಕಾರ್ಯದಲ್ಲಿ ಸಿದ್ದು ಸವದಿಯವರು ರಾಜಕಾರಣ ಮಾಡುತ್ತಿದ್ದಾರೆ. ನಾಲ್ಕು ಬಾರಿ ಶಾಸಕರಾಗಿರುವ ಸವದಿಯವರು ಅಸಭ್ಯವಾಗಿ ಮಾತನಾಡುವುದು ಸರಿಯಲ್ಲ. ಮಹೀಷವಾಡಗಿ ಸೇತುವೆ ನಿರ್ಮಾಣಕ್ಕೆ ಯಾವುದೇ ಕಾರ್ಯ ಮಾಡಿಲ್ಲ ಮತ್ತು ಯಾವುದೇ ಹೋರಾಟ ಮಾಡಿಲ್ಲ’ ಎಂದರು.

‘ಎಂಟು ವರ್ಷಗಳಿಂದ ಸಿದ್ದು ಸವದಿಯವರು ಶಾಸಕರಾಗಿದ್ದಾರೆ. 2017ರಿಂದ ಕಾಮಗಾರಿಗೆ ವೇಗ ಪಡೆಯದಿರುವುದಕ್ಕೆ ಸವದಿಯವರ ನಿರ್ಲಕ್ಷ್ಯವೇ ಕಾರಣ. ರಬಕವಿ ಮುಖಂಡ ರಾಮಣ್ಣ ಹುಲಕುಂದ ಮತ್ತು ಇತರ ನಾಗರಿಕರ ನೇತೃತ್ವದಲ್ಲಿ ತ್ವರಿತ ಕಾಮಗಾರಿ ಕುರಿತು ನನಗೆ ಒತ್ತಡ ಹಾಕಿದ ನಂತರ ಸಚಿವರಾದ ಸತೀಶ ಜಾರಕಿಹೊಳಿ ಮತ್ತು ಆರ್.ಬಿ. ತಿಮ್ಮಾಪುರ ನೇತೃತ್ವದಲ್ಲಿ ₹10 ಕೋಟಿ ಹೆಚ್ಚುವರಿ ಅನುದಾನದಿಂದಾಗಿ ಕಾಮಗಾರಿಗೆ ವೇಗ ದೊರೆತಿದೆ’ ಎಂದರು.

ಕಾಂಗ್ರೆಸ್ ಅವಧಿಯಲ್ಲಿಯೇ ಕ್ಷೇತ್ರದ ಅಭಿವೃದ್ಧಿ: ‘ಕಾಂಗ್ರೆಸ್ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ ಆಗಿದೆ. ರಾಮಪುರದ ಬೆಟ್ಟವನ್ನು ಕಡಿದು ರಸ್ತೆ ಮಾರ್ಗವನ್ನು ಸುಗಮಗೊಳಿಸಲಾಯಿತು. ವೆಂಕಟೇಶ್ವರ, ಸಸಾಲಟ್ಟಿ ಮತ್ತು ಢವಳೇಶ್ವರ ಏತ ನೀರಾವರಿ ಯೋಜನೆಗಳು ನಡೆದಿರುವುದೇ ಕಾಂಗ್ರೆಸ್ ಆಡಳಿತದಲ್ಲಿ’ ಎಂದು ತಿಳಿಸಿದರು.

ಬಂಡಾಯ ಅಭ್ಯರ್ಥಿಯಿಂದಲೇ ಸೋಲು: ‘ಕ್ಷೇತ್ರದ ಜನರು ಸೋಲಿಸಿದ್ದಾರೆ ಎಂದು ಶಾಸಕರು ಹೇಳುತ್ತಿದ್ದು, ಕಳೆದ ಚುನಾವಣೆಯಲ್ಲಿ 67 ಸಾವಿರ ಮತಗಳನ್ನು ಪಡೆದುಕೊಂಡಿದ್ದೇನೆ. ನಮ್ಮ ಪಕ್ಷದ ಬಂಡಾಯ ಅಭ್ಯರ್ಥಿಯಿಂದಲೇ ನನಗೆ ಸೋಲಾಗಿದೆ ಹೊರತು, ಬಿಜೆಪಿ ಅಭ್ಯರ್ಥಿಯಿಂದ ಸೋಲು ಆಗಿಲ್ಲ’ ಎಂದು ಕೊಣ್ಣೂರ ತಿಳಿಸಿದರು.

ರಾಮಣ್ಣ ಹುಲಕುಂದ, ಸಂಜಯ ಜೋತಾವರ, ಸಂಗಮೇಶ ಮಡಿವಾಳ, ಹೊನ್ನಪ್ಪ ಬಿರಡಿ, ಬುದ್ದಪ್ಪ ಕುಂದಗೋಳ, ಭೀಮಶಿ ಪಾಟೀಲ, ಮಹಮ್ಮದ ಮಕಾನದಾರ್, ಮಹಮ್ಮದ್ ಝಾರೆ ಮತ್ತು ಸುನೀಲ ಹರಿಜನ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-19-354671389

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.