ರಬಕವಿ ಬನಹಟ್ಟಿ: ದೇಶದ ಅಭಿವೃದ್ಧಿ ಗಾಗಿ ಜನಗಣತಿ ಅಗತ್ಯವಾಗಿದ್ದು, 2027ರ ಜನಗಣತಿಯಲ್ಲಿ ಭಾಗವಹಿಸುವ ತರಬೇತುದಾರರು ಪ್ರಾಮಾಣಿಕವಾಗಿ ಮತ್ತು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು. ಪ್ರತಿಯೊಬ್ಬರು ಸೂಕ್ತವಾದ ಮಾಹಿತಿಯನ್ನು ನೀಡುವು ದರ ಮೂಲಕ ಗಣತಿದಾರರಿಗೆ ಸಹಕಾರ ನೀಡಬೇಕು ಎಂದು ರಬಕವಿ ಬನಹಟ್ಟಿ ನಗರಸಭೆಯ ಪೌರಾಯುಕ್ತ ರಮೇಶ ಜಾಧವ ತಿಳಿಸಿದರು.

ಶನಿವಾರ ಸ್ಥಳೀಯ ಎಸ್ಆರ್ಎ ಪಿಯು ಕಾಲೇಜಿನಲ್ಲಿ ರಬಕವಿ ಬನಹಟ್ಟಿ ನಗರಸಭೆಯ ಆಶ್ರಯದಲ್ಲಿ ನಡೆದ ನಡೆದ ನಗರ ಪ್ರದೇಶದ ಜನಗಣತಿ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಗರ ಪ್ರದೇಶದ ಜನಗಣತಿಗಾಗಿ 22 ಮೇಲ್ವಿಚಾರಕರಿಗೆ ಹಾಗೂ 124 ಜನ ಗಣತಿದಾರರಿಗೆ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡುತ್ತಿದ್ದಾರೆ ಎಂದು ಜಾಧವ ತಿಳಿಸಿದರು.

ತರಬೇತುರಾದ ಮನೋಹರ ಶಿರಹಟ್ಟಿ ಮಾತನಾಡಿ, 2027 ರ ಜನಗಣತಿಯು ಪರಿಸರ ಸ್ನೇಹಿ ಜನಗಣತಿಯಾಗಿದೆ. ಸರ್ಕಾರ 2027 ಗಣತಿಯ ಕಾರ್ಯವನ್ನು ಡಿಜಟಲೀಕರಣದ ಮೂಲಕ ಮಾಡುತ್ತಿದ್ದು, ಸ್ವಯಃ ಗಣತಿಗೆ ಅವಕಾಶವನ್ನು ಒದಗಿಸಲಾಗಿದ್ದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಶಿರಸ್ತೆದಾರ ರಾಜಶೇಖರ ಸಾತಿಹಾಳ, ಶಿಕ್ಷಣ ಇಲಾಖೆಯ ಬಿ.ಎಂ.ಹಳೆಮನಿ, ಸಂಪನ್ಮೂಲ ವ್ಯಕ್ತಿಗಳಾದ ಎಚ್.ವೈ.ಆಲಮೇಲ, ಶ್ರೀಶೈಲ ಆಲ್ಯಾಳ, ನಗರಸಭೆಯ ಅಧಿಕಾರಿಗಳಾದ ಅಭಿನಂದನ ಸೋನಾರ, ಅಮೀರಖಾನ ಖಲೀಫಾ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-19-1100714270

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.