ರಬಕವಿ ಬನಹಟ್ಟಿ: ತೇರದಾಳ ವಿಧಾನಸಭಾ ಮತಕ್ಷೇತ್ರದ ರಬಕವಿ ಬನಹಟ್ಟಿ ಹಾಗೂ ತೇರದಾಳ ಅಗ್ನಿ ಶಾಮಕ ದಳಕ್ಕೆ ಶಾಸಕರ ನಿಧಿಯಲ್ಲಿ ಹೆಚ್ಚಿನ ಅನುದಾನ ನೀಡುವುದರ ಜೊತೆಗೆ ಅವುಗಳಿಗೆ ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳನ್ನು ನೀಡಲಾಗುವುದು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ಈಚೆಗೆ ರಬಕವಿ ಬನಹಟ್ಟಿ ತಾಲ್ಲೂಕಿನ ಆಗ್ನಿ ಶಾಮಕ ದಳದ ಕಾರ್ಯಾಲಯದಲ್ಲಿ ₹75 ಲಕ್ಷ ವೆಚ್ಚದ ಜಲ ವಾಹನ ಮತ್ತು ಇತರೆ ಪರಿಕರಗಳ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ತೇರದಾಳದಲ್ಲಿ ಅಗ್ನಿ ಶಾಮಕ ದಳದ ನೂತನ ಕಟ್ಟಡ ನಿರ್ಮಾಣವಾಗಿದ್ದು, ರಬಕವಿ ಬನಹಟ್ಟಿಯಲ್ಲಿಯ ನೂತನ ಕಟ್ಟಡ ನಿರ್ಮಾಣ ಮಾಡಲು ಗೃಹ ಸಚಿವರಿಗೆ ಮನವಿ ಮಾಡಿಕೊಳ್ಳಲಾಗಿದೆ. ಸದ್ಯ ರಬಕವಿ ಬನಹಟ್ಟಿ ನಗರಸಭೆಯ ಹತ್ತಿರದ ನಗರಸಭೆಯ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯ ಮಾಡುತ್ತಿದ್ದು, ಆದಷ್ಟು ಬೇಗನೆ ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗುವುದು ಎಂದರು.

ಬೆಂಕಿ ಅನಾಹುತ ಸೇರಿದಂತೆ ಇನ್ನಿತರ ಪ್ರಕೃತಿ ವಿಕೋಪಗಳಲ್ಲಿ ಅಗ್ನಿಶಾಮಕ ದಳದ ಸೇವೆ ಶ್ರೇಷ್ಠವಾದುದು. ನೂತನ ವಾಹನಗಳಿಂದ ದಳಕ್ಕೆ ಇನ್ನಷ್ಟು ಸಹಾಯವಾಗಲಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ಅಗ್ನಿ ಶಾಮಕ ದಳದ ಮುಖ್ಯಾಧಿಕಾರಿ ರಮೇಶ ಚಿವಟೆ, ಅವಳಿ ನಗರಗಳ ಮುಖಂಡರಾದ ಸಂಜಯ ತೆಗ್ಗಿ, ವಿದ್ಯಾ ಧಬಾಡಿ, ಸವಿತಾ ಹೊಸೂರ, ಸುವರ್ಣಾ ಕೊಪ್ಪದ, ಅಗ್ನಿ ಶಾಮಕದಳದ ಎಚ್.ಎಸ್.ಗೋಕಾಕ, ಎಂ.ಎಸ್.ಹೂಗಾರ, ಪಿ.ಎಲ್.ಹವಾಲ್ದಾರ್, ಆರ್.ಎಸ್.ಸನದಿ, ಎಂ.ಜಿ.ಉದಪುಡಿ, ಎಸ್.ವೈ.ಸಂದ್ರಿಮನಿ, ಕೆ.ಡಿ.ಕೊಳ್ಳೂರ, ಪಿ.ಆರ್.ರಾಠೋಢ, ಎಲ್.ವಿ.ಹಳ್ಳಿ, ಎಸ್.ಎನ್. ಅನವಾಲ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-19-1573487507

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.