ರಬಕವಿ ಬನಹಟ್ಟಿ: ನಗರದಲ್ಲಿ ಭಾನುವಾರ ಮಲ್ಲಿಕಾರ್ಜುನ ದೇವರ ಕಂಬಿಗಳ ಪುರ ಪ್ರವೇಶ ಮತ್ತು ದೇವರನ್ನು ಕರೆದುಕೊಳ್ಳುವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

ದೇವರನ್ನು ಕರೆದುಕೊಳ್ಳುವ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ನಗರದ ಮಂಗಳವಾರ ಪೇಟೆಯ ಅರಳಿಕಟ್ಟಿಯ ಆವರಣದಲ್ಲಿ ಮಲ್ಲಯ್ಯನ ಕಂಬಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ನಂತರ ನಗರದ ಹಿರಿಯರು ಕೂಡಿಕೊಂಡು ಮಲ್ಲಿಕಾರ್ಜುನ ದೇವರ ಸಾಮೂಹಿಕ ಮಂಗಳಾರುತಿಯನ್ನು ನೆರವೇರಿಸಿದರು. ಮಂಗಳಾರುತಿಯ ನಂತರ ಮಹಿಳೆಯರು ಮಲ್ಲಯ್ಯನಿಗೆ ಹೊಸ ಶ್ಯಾವಿಗೆ, ಬೆಲ್ಲದ ನೈವೇದ್ಯ ಸಲ್ಲಿಸಿದರು.

ಮಹಿಳೆಯರು ಆರತಿ ಮತ್ತು ಗಂಡು ಮಕ್ಕಳು ದಿವಟಿಗೆಗಳನ್ನು ಹಿಡಿದುಕೊಂಡು ಮಂಗಳಾರುತಿಯಲ್ಲಿ ಭಾಗವಹಿಸಿದ್ದರು. ಮಂಗಳಾರುತಿಯನ್ನು ಸಾಮೂಹಿಕವಾಗಿ ಹಾಡುವುದು ವಿಶೇವಾಗಿತ್ತು. ಮಂಗಳಾರುತಿಯ ನಂತರ ನೆನಗಡಲೆ, ಬೆಲ್ಲ ಮತ್ತು ಬೆಲ್ಲದ ಪಾನಕ ವಿತರಣೆ ಮಾಡಲಾಯಿತು.

ಸಂಜೆ ಮಲ್ಲಯ್ಯನ ಕಂಬಿಗಳನ್ನು ಮೆರವಣಿಗೆಯ ಮೂಲಕ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು. ರಾತ್ರಿ ಮತ್ತೆ ಭಕ್ತರು ಕೂಡಿಕೊಂಡು ಸಾಮೂಹಿಕ ಮಂಗಳಾರುತಿಯನ್ನು ನೆರವೇರಿಸಿದರು.

ಐದೇಶಿ ಕಾರ್ಯಕ್ರಮದ ಅಂಗವಾಗಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಐದು ದಿನಗಳ ರಾತ್ರಿ ಮಂಗಳಾರುತಿಯ ಕಾರ್ಯಕ್ರಮ ನಡೆಯುತ್ತದೆ. ಐದನೆಯ ದಿನ ಐದೇಶಿ ಕಾರ್ಯಕ್ರಮದ ಅಂಗವಾಗಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸಂಜೆ ಆರರಿಂದ ರಾತ್ರಿ ಹತ್ತರವರೆಗೆ ಐದು ಗಂಟೆಗಳ ಕಾಲ ಬೆಲ್ಲ ಹಂಚುವ ಕಾರ್ಯಕ್ರಮದೊಂದಿಗೆ ಐದೇಶಿ ಕಾರ್ಯಕ್ರಮ ಸಂಪನ್ನಗೊಳ್ಳುತ್ತದೆ.

ಶ್ರೀಶೈಲ ಧಬಾಡಿ, ರಾಜಶೇಖರ ಮಾಲಾಪುರ, ದಾನಪ್ಪ ಹುಲಜತ್ತಿ, ಶ್ರೀಪಾದ ಬಾಣಕಾರ, ಬಸವರಾಜ ಜಾಡಗೌಡ, ರಾಜು ಕುಲಕರ್ಣಿ, ಬಸವರಾಜ ಗುಂಡಿ, ಕಾಡಪ್ಪ ಬಾಬಾನಗರ, ಬಸವರಾಜ ಜಾಡಗೌಡ, ಉದಯ ಅಬಕಾರ, ಷಣ್ಮುಖ ಜಾಡಗೌಡ, ಕಿರಣ ಆಳಗಿ, ಶ್ರೀಶೈಲ ಕಿರಣ ಭದ್ರನವರ, ಶ್ರೀಶೈಲ ಮಠಪತಿ, ಈಶ್ವರಯ್ಯ ಮಠಪತಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-19-1855301512

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.