ರಬಕವಿ ಬನಹಟ್ಟಿ: ನಮ್ಮಿಂದ ದೂರ ಆಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಪ್ರತಿಯೊಬ್ಬರು ಪ್ರೋತ್ಸಾಹಿಸಬೇಕು. ಇಂದಿನ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳು ಮಾಯವಾಗುತ್ತಿವೆ. ಗ್ರಾಮೀಣ ಪ್ರದೇಶಗಳು ಸಂಸ್ಕೃತಿ ಪ್ರತೀಕವಾಗಿವೆ ಎಂದು ಹನುಮಾನ ದೇವಸ್ಥಾನ ಟ್ರಸ್ಟ್ ಸಮಿತಿಯ ಅಧ್ಯಕ್ಷ ಎಂ.ಆರ್.ವಾಲಿ ತಿಳಿಸಿದರು.

ಗುರುವಾರ ಸಮೀಪದ ನಾವಲಗಿ ಗ್ರಾಮದಲ್ಲಿ ಮಾರುತೇಶ್ವರ ಜಯಂತ್ಯುತ್ಸವದ ಅಂಗವಾಗಿ ಹಮ್ಮಿ ಕೊಂಡ ಹಾಲೋಕಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮದ ಮಧ್ಯ ಭಾಗದಲ್ಲಿರುವ ಹನುಮಂತ ದೇವಸ್ಥಾನದ ಮುಂಭಾಗದಲ್ಲಿ 60 ಅಡಿ ಎತ್ತರದ ಬೃಹತ್ ಕಂಬವನ್ನು ಏರುವಲ್ಲಿ ಯುವಕರ ಸಾಹಸ ಗಮನ ಸೆಳೆಯಿತು. ನಾವಲಗಿ ಗ್ರಾಮದ ಸುತ್ತ ಮುತ್ತಲಿನ ಗ್ರಾಮದ ಜನರು ಹಲೋಕಳಿಯಲ್ಲಿ ಭಾಗವಹಿಸಿದ್ದರು.

ಹಾಲೋಕಳಿಯ ಕಾರ್ಯಕ್ರಮದ ನಂತರ ಕರಡಿ, ಸಂಬಾಳ, ಖಣಿ ಮತ್ತು ಶಹನಾಯಿ ವಾದನದ ಪ್ರದರ್ಶನ ದೇವಸ್ಥಾನದ ಮುಂಭಾಗದಲ್ಲಿ ನಡೆಯಿತು.

ನಂತರ ಶ್ರೀಕೃಷ್ಣ ಪಾರಿಜಾತ ಬಯಲಾಟ ಪ್ರದರ್ಶನ ನಡೆಯಿತು.

ಶ್ರೀಶೈಲ ಪಟ್ಟಣಶೆಟ್ಟಿ, ಸುಭಾಸ ಕಂಪು, ಹಣಮಂತ ಕಾಂತಿ, ಸಂಗಣ್ಣ ಹಳ್ಳಿ, ಗುರು ಮರಡಿಮಠ, ಕಾಡಯ್ಯ ಕಾಡದೇವರ, ದಾನಪ್ಪ ಆಸಂಗಿ, ಆನಂದ ಕಂಪು, ಹಣಮಂತ ಮಗದುಮ್, ಮಹೇಶ ಚಿಂಚಖಂಡಿ ಬಸವರಾಜ ಗಣಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-19-1745320217

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.