ರಬಕವಿ ಬನಹಟ್ಟಿ: ‘ಮತಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಕೀಯ ಬೇಡ’ ಎಂದು ಶಾಸಕ ಸಿದ್ದು ಸವದಿ ಹೇಳಿದರು.

ಅವರು ಬುಧವಾರ ಸಮೀಪದ ಕೃಷ್ಣಾ ನದಿಗೆ ನಿರ್ಮಾಣ ಮಾಡುತ್ತಿರುವ ಸೇತುವೆ ಕಾಮಗಾರಿಯನ್ನು ವೀಕ್ಷಣೆ ಮಾಡಿ ಮಾತನಾಡಿದರು.

‘ಕೃಷ್ಣಾ ನದಿಗೆ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಆರಂಭವಾಗಿದ್ದು, ಇನ್ನೊಂದು ವಾರದಲ್ಲಿ ನದಿಯ ಮಧ್ಯದಲ್ಲಿರುವ ಪಿಲ್ಲರ್ ಗಳನ್ನು ಅಳವಡಿಸುವ ಕಾರ್ಯ ನಡೆಯಲಿದೆ. ಮುಂದಿನ ವರ್ಷದ ಮಾರ್ಚ್ ತಿಂಗಳೊಳಗಾಗಿ ಸೇತುವೆ ಕಾಮಗಾರಿ ಮುಕ್ತಾಯಗೊಳಿಸುವ ಭರವಸೆಯನ್ನು ಇಲ್ಲಿನ ಎಂಜಿನಿಯರ್, ಯೋಜನೆಯ ಅಧಿಕಾರಿಗಳು ನೀಡಿದ್ದಾರೆ’ ಎಂದು ತಿಳಿಸಿದರು.

‘2017ರಲ್ಲಿ ಸೇತುವೆ ಕಾಮಗಾರಿ ಭೂಮಿಪೂಜೆ ಮಾತ್ರ ನಡೆಯಿತು. ಈಗ ₹55 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಈ ಸೇತುವೆ ನಿರ್ಮಾಣ ಕಾಮಗಾರಿಗೆ ಮೊದಲು ₹ 20 ಕೋಟಿ ಮತ್ತು ಈಗ ₹10 ಕೋಟಿಯಷ್ಟು ಹಣವನ್ನು ಸರ್ಕಾರದಿಂದ ಮಂಜೂರು ಮಾಡಿಸಲಾಗಿದೆ. ಸೇತುವೆ ನಿರ್ಮಾಣ ಮಾಡುವಲ್ಲಿ ಕಾಂಗ್ರೆಸ್ ಪಕ್ಷ ₹10ರಷ್ಟು ಕೆಲಸ ಮಾಡಿಲ್ಲ. ಸೇತುವೆ ಕಾಮಗಾರಿಯನ್ನು ವಿಳಂಬ ಮಾಡುವುದರಿಂದ ನಮಗೆ ಯಾವುದೇ ಲಾಭವಿಲ್ಲ’ ಎಂದು ತಿಳಿಸಿದರು.

‘ಸೇತುವೆ ನಿರ್ಮಾಣ ಕಾಮಗಾರಿಗಾಗಿ ವಿಧಾನ ಸಭೆಯಲ್ಲಿ ಚರ್ಚಿಸಿದ್ದೇನೆ, ಸಂಬಂಧಪಟ್ಟ ಸಚಿವರ ಮತ್ತು ಅಧಿಕಾರಿಗಳ ಕಚೇರಿಗಳಿಗೆ ತೆರಳಿ ಭೇಟಿಯಾಗಿದ್ದೇನೆ. ಸ್ಥಳೀಯ ಸೇತುವೆ ಕಾಮಗಾರಿ ಯೋಜನೆ ವ್ಯವಸ್ಥಾಪಕ ವೇಣುಗೋಪಾಲ ಜೊತೆಗೆ ಸತತವಾಗಿ ಸಂಪರ್ಕದಲ್ಲಿ ಇದ್ದೇನೆ’ ಎಂದು ತಿಳಿಸಿದರು.

‘ಪಿಲ್ಲರ್ ಅಳವಡಿಕೆ ಕಾಮಗಾರಿಯನ್ನು ಶೀಘ್ರವಾಗಿ ಮುಕ್ತಾಯಗೊಳಿಸುವ ನಿಟ್ಟಿನಲ್ಲಿ ದಾವಣಗೆರೆಯಿಂದ 20ಕ್ಕೂ ಹೆಚ್ಚು ಕುಶಲ ಕಾರ್ಮಿಕರನ್ನು ಕರೆದುಕೊಂಡು ಬರಲು ಚರ್ಚಿಸಲಾಗಿದೆ’ ಎಂದು ಸೇತುವೆ ಕಾಮಗಾರಿ ಪ್ರಭಾರ ಸಹಾಯಕ ಎಂಜಿನಿಯರ್ ರಿಜವಾನ್ ಅಹ್ಮದ್ ತಿಳಿಸಿದರು.

ರಬಕವಿ ನಗರದ ಮುಖಂಡರಾದ ಸಂಜಯ ತೆಗ್ಗಿ, ಧರೆಪ್ಪ ಉಳ್ಳಾಗಡ್ಡಿ, ಬಾಬಾಗೌಡ ಪಾಟೀಲ, ಮಹಾದೇವ ದುಪದಾಳ, ಶ್ರೀಶೈಲ ದಲಾಲ, ಶ್ರೀಶೈಲ ಬೀಳಗಿ, ಸುರೇಶ ಅಕ್ಕಿವಾಟ, ಈಶ್ವರ ಕಾಡದೇವರ, ಅಶೋಕ ರಾವಳ, ಪ್ರಭು ಪೂಜಾರಿ, ಪ್ರೊಜೆಕ್ಟ್ ವ್ಯವಸ್ಥಾಪಕ ವೇಣುಗೋಪಾಲ, ಎಂಜಿನಿಯರ್ ಸುನೀಲ ರೊಠೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-19-537464023

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.