ರಬಕವಿ ಬನಹಟ್ಟಿ: ಸಮೀಪದ ಕೃಷ್ಣಾ ನದಿಗೆ ನಿರ್ಮಾಣ ಮಾಡುತ್ತಿರುವ ಮಹಿಷವಾಡಗಿ ಸೇತುವೆ ಕಾಮಗಾರಿ ಹತ್ತು ವರ್ಷವಾದರೂ ಮುಕ್ತಾಯವಾಗಿಲ್ಲ. ಸರ್ಕಾರದ ಈ ವಿಳಂಬ ನೀತಿ ಖಂಡಿಸಿ ಮೇ 19 ರಂದು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ರಬಕವಿ ನಗರದ ಬಂದ್ಗೆ ಕರೆ ನೀಡಲಾಗಿದೆ ಎಂದು ರಬಕವಿ ನಗರದ ಮುಖಂಡ ರಾಮಣ್ಣ ಹುಲಕುಂದ ತಿಳಿಸಿದರು.

ಸ್ಥಳೀಯ ದಲಾಲ ಫಾರ್ಮ್ ಹೌಸ್ನಲ್ಲಿ ಬುಧವಾರ ನಡೆದ ನಗರದ ಮುಖಂಡರ ಸಭೆಯಲ್ಲಿ ಮಾತನಾಡಿದರು.

ನಗರದ ಮುಖಂಡ ಸಂಜಯ ತೆಗ್ಗಿ ಮಾತನಾಡಿ, ‘ಸೇತುವೆ ಕಾಮಗಾರಿಯನ್ನು ಶೀಘ್ರ ಮುಕ್ತಾಯಗೊಳಿಸುವಂತೆ ಸಾಕಷ್ಟು ಹೋರಾಟಗಳನ್ನು ಕೈಗೊಳ್ಳಲಾಗಿದೆ. ಅದಕ್ಕಾಗಿ ಮುಖ್ಯಮಂತ್ರಿಗೆ, ಲೋಕೋಪಯೋಗಿ ಸಚಿವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿತ್ತು ಎಂದರು.

‘ಸರ್ಕಾರ ಮತ್ತು ಅಧಿಕಾರಿಗಳ ಬೇಜವಾಬ್ದಾರಿಯಿಂದ ಸೇತುವೆ ಕಾಮಗಾರಿ ವಿಳಂಬವಾಗಿದೆ ಎಂದು ತಿಳಿಸಿದರು.

ಮುಖಂಡ ಧರೆಪ್ಪ ಉಳ್ಳಾಗಡ್ಡಿ ಮಾತನಾಡಿ, ‘ಈಗ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ನದಿಯ ಮಧ್ಯ ಭಾಗದಲ್ಲಿ ಪಿಲ್ಲರ್ ಹಾಕಲು ಸಾಧ್ಯವಾಗುತ್ತದೆ. ಆದರೆ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಎಂದರು.

ಶ್ರೀಶೈಲ ದಲಾಲ, ಪ್ರಕಾಶ ಕುಂಬಾರ, ರವಿ ಗಡಾದ, ಮಹಾದೇವ ದುಪದಾಳ, ಮಾರುತಿ ನಾಯಕ, ಪ್ರವೀಣ ಹಜಾರೆ, ಪ್ರಭು ಪೂಜಾರಿ, ಯಲ್ಲಪ್ಪ ಕಟಗಿ, ಬಸವರಾಜ ತೆಗ್ಗಿ, ಬಸವರಾಜ ಮನ್ಮಿ, ಶಿವಾನಂದ ಬಾಗಲಕೋಟಮಠ, ಮಹಾದೇವ ತಳವಾರ, ಗಂಗಪ್ಪ ಹುಕ್ಕೇರಿ ಯಲ್ಲಪ್ಪ ಪಾಟೀಲ ಸೇರಿದಂತೆ ಅನೇಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-19-1138975252

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.