ರಬಕವಿ ಬನಹಟ್ಟಿ: ಕಾರ್ಮಿಕರಿಗೆ ಕಾನೂನು ಅರಿವು ಇದ್ದಾಗ ಮಾತ್ರ ಅವರು ತಮಗೆ ದೊರೆಯಬೇಕಾದ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಇಲ್ಲಿನ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಆಶಪ್ಪ ಸಣಮನಿ ತಿಳಿಸಿದರು.

ಆಸಂಗಿ ಗ್ರಾಮದ ಡೆಂಪೊ ಡೈರಿಯ ಆವರಣದಲ್ಲಿ ವಿಶ್ವ ಕಾರ್ಮಿಕರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಮಿಕರ ಹಿತದೃಷ್ಠಿಯಿಂದ ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅರಿವು ನೆರವು ಯೋಜನೆ ಮಾಡಲಾಗಿದೆ. ಕಾರ್ಮಿಕರ ಮೇಲಾಗುತ್ತಿರುವ ದೌರ್ಜನ್ಯ ತಡೆಗಟ್ಟುವುದು ಇಲಾಖೆಯ ಕರ್ತವ್ಯವಾಗಿದೆ. ಅದೇ ರೀತಿಯಾಗಿ ಮಹಿಳಾ ಕಾರ್ಮಿಕರಿಗೆ ಯಾರಾದರು ಕಿರುಕುಳ ನೀಡುತ್ತಿದ್ದರೆ ಅಂಥವರು ಮಹಿಳಾ ಸಹಾಯವಾಣಿಗೆ ಕರೆ ಮಾಡಿ ನೆರವು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಡೆಂಪೊ ಡೈರಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಎಸ್.ಸಿದ್ದೆಗೌಡ ಮಾತನಾಡಿ, ದೇಶದ ಅಭಿವೃದ್ಧಿಯ ಬೆನ್ನೆಲುಬಾಗಿರುವ ಕಾರ್ಮಿಕರು ಯಾವುದೇ ರೀತಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಬಾರದು. ವಿದ್ಯಾಭ್ಯಾಸದ ಕೊರತೆಯಿಂದಾಗಿ ತಳ ಮಟ್ಟದ ಕಾರ್ಮಿಕರು ಇಂದಿಗೂ ಸಂಘಟಿತರಾ ಗಲು ಸಾಧ್ಯವಾಗುತ್ತಿಲ್ಲ ಎಂದರು.

ವಕೀಲರ ಸಂಘದ ಅಧ್ಯಕ್ಷ ಸಾಗರ ಕುಲಕರ್ಣಿ ಮಾತನಾಡಿ, ಕಾರ್ಮಿಕರು ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮಗಳನ್ನು ಸದ್ಬಳಕೆಯನ್ನು ಮಾಡಿಕೊಳ್ಳಬೇಕು. ತಮಗೆ ಸಂಬಂಧಪಟ್ಟ ಸಾಮಾನ್ಯ ಕಾನೂನಗಳ ಬಗ್ಗೆ ಅರಿತುಕೊಳ್ಳಬೇಕು ಎಂದರು.

ಸಹಾಯಕ ಸರ್ಕಾರಿ ಅಭಿಯೋಜಕ ರಾಹುಲ ಶಾ, ಸಂಘದ ಕಾರ್ಯದರ್ಶಿ ರವೀಂದ್ರ ಸಂಪಗಾವಿ, ವಕೀಲ ಹರ್ಷವರ್ಧನ ಪಟವರ್ಧನ ಉಪನ್ಯಾಸ ನೀಡಿದರು. ವಕೀಲರ ಸಂಘದ ಸದಸ್ಯರಾದ ಕೆ.ಜಿ.ಸಾಲ್ಗುಡಿ, ವಿ.ಬಿ.ಖೇಮನ್ನವರ, ಎಸ್.ಬಿ.ಜಿಡ್ಡಿಮನಿ, ಕೆ.ಎಸ್.ನ್ಯಾಮಗೌಡ, ಬಿ.ಆರ್.ಮಧುರಖಂಡಿ, ರಮೇಶ ವಾಂಗಿ, ಅಶ್ವಿನಿ ಹಾರೂಗೇರಿ, ಪ್ರಸನ್ನ ಬಾಣಕಾರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-19-342315557

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.