ರಬಕವಿ ಬನಹಟ್ಟಿ: ತಾಲ್ಲೂಕಿನ ನಾವಲಗಿ ಗ್ರಾಮದಲ್ಲಿ ನಾವಲಗಿ– ಮುಧೋಳ ರಸ್ತೆ ಮಾರ್ಗದಲ್ಲಿ ದ್ವಿಚಕ್ರ ವಾಹನದ ಮೇಲೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಶುಕ್ರವಾರ ಬೆಳಗಿನ ಜಾವ 1.30 ಗಂಟೆಗೆ ಬಂಧಿಸಿದ್ದಾರೆ.

ಗ್ರಾಮದ ಹನಮಂತ ಬಿಸನಾಳ ಎಂಬಾತನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಅದೇ ರೀತಿಯಾಗಿ ಸುನೀಲ ಕದಂ, ವಾಹನ ಮಾಲೀಕರು, ಮದ್ಯ ಮಾರಾಟ ಮಾಡಿದ ಅಬಕಾರಿ ಸನ್ನದುದಾರರು, ಬಸವರಾಜ: ಆರೋಪಿ 1 ಕಾರಿನಲ್ಲಿ ಮದ್ಯ ಸರಬರಾಜು ಮಾಡಿದವರ ಮೇಲೆ ಜಮಖಂಡಿ ವಲಯದ ಅಬಕಾರಿ ನಿರೀಕ್ಷಕಿ ಗೀತಾ ತೆಗ್ಯಾಳ ಪ್ರಕರಣ ದಾಖಲಿಸಿರುತ್ತಾರೆ.

ಆರೋಪಿಯಿಂದ 103.680 ಲೀಟರ್ ಮದ್ಯ, ಒಂದು ಹೀರೋ ಹೊಂಡಾ ದ್ವಿಚಕ್ರ ವಾಹನ, ಒಂದು ಮೊಬೈಲ್ ಜಪ್ತು ಮಾಡಿಕೊಂಡಿದ್ದು ಅವುಗಳ ಅಂದಾಜು ಮೊತ್ತ ₹ 1,26, 000 ಆಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

ಕಚೇರಿ ಸಿಬ್ಬಂದಿಗಳಾದ ಆನಂದ ಬಾಗಿ, ಮೌನೇಶ ಬಡಿಗೇರ, ಹನಮಂತ ಹಸರೆಡ್ಡಿ, ವಾಹನ ಚಾಲಕ ಕಿರಣಕುಮಾರ ಒಡೆಯರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-19-250377794

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.